• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೀಚ್‌ಕ್ಯಾಂಡಿ ಆಸ್ಪತ್ರೆಗೆ ದೇಶದ ಆಡಳಿತ ವ್ಯವಸ್ಥೆಯ ವರ್ಗಾವಣೆ

By Staff
|

*ಶುಭಾಂಗಿ ಖಪ್ರೆ

ಮುಂಬಯಿ : ದೇಶದ ಆಡಳಿತ ವ್ಯವಸ್ಥೆಯೀಗ ಹೆಚ್ಚೂ ಕಡಿಮೆ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ವರ್ಗಾವಣೆಯಾಗಿದೆ. ಬಲ ಮಂಡಿ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ವಾಜಪೇಯಿ, ಆಡಳಿತಕ್ಕೆ ಸಂಬಂಧಿಸಿದ ವಿಷಯಗಳನ್ನು ಆಸ್ಪತ್ರೆಯ ಕೊಠಡಿಯಿಂದಲೇ ನಿರ್ವಹಿಸುವರು.

ವೈದ್ಯರ ಪ್ರಕಾರ, ಶಸ್ತ್ರ ಚಿಕಿತ್ಸೆಯ ನಂತರ ಸುಮಾರು 10 ರಿಂದ 15 ದಿನಗಳ ಕಾಲ ವಾಜಪೇಯಿ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಉಳಿಯುವರು. ನ್ಯೂಯಾರ್ಕ್‌ ಮೂಲದ ಡಾ. ರಣಾವತ್‌ ನೇತೃತ್ವದ ವೈದ್ಯರ ತಂಡ ಪ್ರಧಾನಿಗಳ ದೇಹಸ್ಥಿತಿ ಗಮನಿಸಿ ಗುರುವಾರ ಅಥವಾ ಶುಕ್ರವಾರ ವಾಜಪೇಯಿ ಅವರ ಬಲ ಮಂಡಿ ಶಸ್ತ್ರ ಚಿಕಿತ್ಸೆ ನಡೆಸುವರು.

ಪ್ರಧಾನಿಯವರು ಆಸ್ಪತ್ರೆಯಲ್ಲಿ ಉಳಿಯುವ ಕೊಠಡಿ- ಆಧುನಿಕ ಸಂಪರ್ಕ ಸೌಲಭ್ಯಗಳು ಹಾಗೂ ದಿನ ನಿತ್ಯದ ಆಡಳಿತ ನಿರ್ವಹಣೆಯನ್ನು ಪ್ರಧಾನಿಯವರು ಗಮನಿಸಲು ಅಗತ್ಯವಾದ ಸಿಬ್ಬಂದಿಯನ್ನು ಹೊಂದಿದೆ. ಪ್ರಧಾನಿಯವರು ಮುಂಬಯಿಯಲ್ಲಿರುವುದರಿಂದ ದೆಹಲಿಯಲ್ಲಿ ಸಚಿವ ಸಂಪುಟದ ವಾರದ ಸಭೆಗಳು ರದ್ದಾಗಿವೆ.

ಸಚಿವ ಸಂಪುಟದೊಂದಿಗೆ ನಿಕಟ ಸಂಪರ್ಕ
ಆರ್ಥಿಕ ಅಥವಾ ರಕ್ಷಣಾ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಣಯ ಕೈಗೊಳ್ಳುವ ಮುನ್ನ ಸಂಪುಟ ಸದಸ್ಯರನ್ನು ದೂರವಾಣಿ ಮೂಲಕ ಪ್ರಧಾನಿ ಸಂಪರ್ಕಿಸುವರು. ಗೃಹ ಸಚಿವ ಅಡ್ವಾಣಿ ಹಾಗೂ ವಿದೇಶಾಂಗ ಸಚಿವ ಜಸ್ವಂತ್‌ ಸಿಂಗ್‌ ಅವರು ಪ್ರಧಾನಿಯಾಂದಿಗೆ ಸದಾ ನಿಕಟ ಸಂಪರ್ಕ ಹೊಂದಿರುವರು. ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಮುಂದಿನ 10 ದಿನಗಳ ಕಾಲ ಮುಂಬಯಿಯಲ್ಲಿಯೇ ತಂಗುವ ಸಂಭವವಿದೆ.

ಶಸ್ತ್ರ ಚಿಕಿತ್ಸೆಯ ನಂತರ ಕನಿಷ್ಠ ಎರಡು ವಾರಗಳ ಕಾಲ ಪ್ರಧಾನಿ ಆಸ್ಪತ್ರೆಯಲ್ಲಿಯೇ ಉಳಿಯಬೇಕು ಹಾಗೂ ದೆಹಲಿಗೆ ತೆರಳಿದ ನಂತರವೂ ಮತ್ತೆರಡು ವಾರ ಕಾಲ ತಮ್ಮ ಬಿಡುವಿರದ ಚಟುವಟಿಕೆಗಳನ್ನು ಪಕ್ಕಕ್ಕಿರಿಸಿ ವಿಶ್ರಾಂತಿ ಪಡೆಯಬೇಕೆಂದು ಬ್ರೀಚ್‌ಕ್ಯಾಂಡಿ ಆಸ್ಪತ್ರೆಯ ವೈದ್ಯ ಮೂಲಗಳು ತಿಳಿಸಿವೆ.

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಪ್ರಧಾನಿಗಳು ಮಾಡಬೇಕಾದ ಕಾರ್ಯಗಳಲ್ಲಿ - ಪಾಕಿಸ್ತಾನ ಮಿಲಿಟರಿ ಅಧಿಕಾರಿ ಜನರಲ್‌ ಮುಷ್ರಾಫ್‌ ಅವರೊಂದಿಗೆ ನಡೆಸಬೇಕಾದ ಶಾಂತಿ ಮಾತುಕತೆ ಮೊದಲ ಸ್ಥಾನದಲ್ಲಿದೆ. ಈ ಮಾತುಕತೆ ಕಾರ್ಯಕ್ರಮ ಜುಲೈ ತಿಂಗಳಲ್ಲಿ ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ.

(ಐಎಎನ್‌ಎಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more