• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ ಬಂಧು ಕಂಡಂತೆ... ದೀಪೇಂದ್ರ ಹರಿಸಿದ ರಕ್ತದೋಕುಳಿ...

By Staff
|

ವಾಷಿಂಗ್ಟನ್‌ : 15 ನಿಮಿಷಗಳಲ್ಲಿ ಎಲ್ಲಾ ನಡೆದುಹೋಯಿತು.

ಅಪ್ಪ ಬೀರೇಂದ್ರ, ಅಮ್ಮ ಐಶ್ವರ್ಯ, ನಂತರ ಬಂಧು-ಬಾಂಧವರು. ಉಜಿ ಸಬ್‌ಮಷೀನ್‌ ಗನ್‌ ಹಾಗೂ ಎಂ- 16 ಅಸಾಲ್ಟ್‌ ರೈಫಲ್‌ನಲ್ಲಿ ಅದೆಷ್ಟು ಗುಂಡು ಸಿಡಿದವೋ ? ಎಲ್ಲರನ್ನೂ ಕೊಂದ ದೀಪೇಂದ್ರ ಕೊನೆ ಗಳಿಗೆಯಲ್ಲಿ ತನಗೆ ತಾನೇ ಗುಂಡು ಹೊಡೆದುಕೊಂಡಿದ್ದ. ಇದನ್ನು ಕಣ್ಣಾರೆ ಕಂಡ ರಾಜ ಕುಟುಂಬದ ನೆಂಟರೊಬ್ಬರು ವಾಷಿಂಗ್ಟನ್‌ ಪೋಸ್ಟ್‌ಗೆ ಇಡೀ ಹತ್ಯಾಕಾಂಡದ ಚಿತ್ರವನ್ನು ವಿವರಿಸಿದ್ದಾರೆ.

ಜೂನ್‌ 6ರ ವಾಷಿಂಗ್ಟನ್‌ ಟೈಮ್ಸ್‌ನಲ್ಲಿ ರಕ್ತದ ಕಮಟು ಹೊರಬರುತ್ತಿದೆ. ಕಠ್ಮಾಂಡುವಿನಲ್ಲಿ ನಡೆದ ಈ ರಕ್ತದೋಕುಳಿ ಪ್ರಕರಣ ಪುಂಖಾನುಪುಂಖ ಪ್ರಕಟವಾಗಿರುವುದು ಇದೇ ಮೊದಲು. ಇದೇ ಸಂದರ್ಶನ ಟೈಮ್ಸ್‌ ಆಫ್‌ ಲಂಡನ್‌ ಪತ್ರಿಕೆಯಲ್ಲೂ ಪ್ರಕಟವಾಗಿದೆ.

ಅಂದು ನಡೆದದ್ದಾದರೂ ಏನು ?
ಜೂನ್‌ 1, ಶುಕ್ರವಾರ ಇಳಿ ಸಂಜೆ. ಡಿನ್ನರ್‌ಗೆ ಮುಂಚೆ ದೀಪೇಂದ್ರ (29) ಮದ್ಯಗಳನ್ನು ಬೆರೆಸುತ್ತಾ ಕೂತಿದ್ದ. ಡಿನ್ನರ್‌ ಪ್ರಾರಂಭವಾಯಿತು. ರಾತ್ರಿ 9 ಗಂಟೆ (ಸ್ಥಳೀಯ ಕಾಲಮಾನ) ಗೆ ಸರಿಯಾಗಿ ದೀಪೇಂದ್ರ ಇದ್ದಕ್ಕಿದ್ದಂತೆ ಎದ್ದು ಹೊರನಡೆದ. ಕೊಂಚ ಹೊತ್ತಿನ ನಂತರ ಉಜಿ ಸಬ್‌ಮಷೀನ್‌ ಗನ್‌ ಹಾಗೂ ಎಂ- 16 ಅಸಾಲ್ಟ್‌ ರೈಫಲ್‌ನೊಟ್ಟಿಗೆ ಪ್ರತ್ಯಕ್ಷನಾದ. ಬಗಲ ಕೋಣೆಯಲ್ಲಿದ್ದ ಅಪ್ಪ ಬೀರೇಂದ್ರರ ಮೇಲೆ ಗುಂಡು ಸಿಡಿಸಿದ. ತೆರೆದ ಬಾಗಿಲಿಂದ ಅದನ್ನು ಈ ಘಟನೆ ವಿವರಿಸುತ್ತಿರುವ ಬಂಧು ಖುದ್ದು ನೋಡಿದರು. ದೊರೆ ಬೀರೇಂದ್ರ ಮುಖದಲ್ಲಿ ಆತಂಕ ಮಡುಗಟ್ಟಿತ್ತು ; ಸತ್ತಾಗಲೂ.

ಭಂಡ ದೀಪೇಂದ್ರ ಅಕ್ಷರಶಃ ಗುಂಡಿನ ಮಳೆಗರೆದ : ಮೈಮೇಲೆ ಯಾವುದೋ ದೆವ್ವ ಹೊಕ್ಕಿದೆಯೋ ಎನ್ನುವಂತೆ 15 ನಿಮಿಷಗಳ ಕಾಲ ಎಡಬಿಡದೆ ಎಲ್ಲಾ ಕೋಣೆಗಳತ್ತ ಗುಂಡಿನ ಸುರಿಮಳೆಗರೆದ ದೀಪೇಂದ್ರ. ಅತಿಥಿಗಳೆಲ್ಲಾ ಸ್ತಂಭೀಭೂತರಾದರು. ನಿಂತಲ್ಲಿಂದ ಕದಲಲಿಲ್ಲ. ಇನ್ನು ಕೆಲವರು ಕಿವಿ ಮುಚ್ಚಿ ನೆಲದ ಮೇಲೆ ಬಿದ್ದರು. ಅವರೆಲ್ಲಾ ಇದ್ದದ್ದು ಹಾರಿ ಬರುತ್ತಿದ್ದ ಗುಂಡುಗಳ ನಡುವೆ ! ದೀಪೇಂದ್ರನ ಮುಖದಲ್ಲಿ ಭಂಡ ಧೈರ್ಯದ ಛಾಯೆ ಇತ್ತು. ಗುಂಡೇಟು ತಿಂದ ನಂತರ ದೀಪೇಂದ್ರನ ತಾಯಿ ಐಶ್ವರ್ಯ ಮತ್ತು ತಮ್ಮ ನಿರಂಜನ ದೀಪೇಂದ್ರನ ಹಿಂದೆ ಉದ್ಯಾನಕ್ಕೂ ತೆರಳಿದರು. ಆದರೆ ಅವರಲ್ಲಿ ಉಸಿರು ಹೆಚ್ಚು ಹೊತ್ತು ನಿಲ್ಲಲಿಲ್ಲ.

ದಮ್ಮಯ್ಯ ಅಂದ ಚಿಕ್ಕಪ್ಪ ಕ್ಷಣದಲ್ಲಿ ಹೆಣವಾದ : ದೀಪೇಂದ್ರ ಮತ್ತೆ ಅರಮನೆ ಹೊಕ್ಕಿದ. ಆತನ ಚಿಕ್ಕಪ್ಪ ಧೀರೇಂದ್ರ, ನೀನು ಈಗಾಗಲೇ ಮಾಡಿರುವ ಅಧ್ವಾನ ಸಾಕು. ಗನ್‌ ಬಿಸಾಕು ಎಂದು ಅಂಗಲಾಚಿದರು. ದೀಪೇಂದ್ರನ ಬಂದೂಕಿನ ನಳಿಕೆಯಿಂದ ಹೊಮ್ಮಿದ ಗುಂಡು ಆತನ ಎದೆಯನ್ನೂ ಸೀಳಿತ್ತು. ನೆರವಿಗೆ ಬಂದ ಚಿಕ್ಕಮ್ಮ ಹಾಗೂ ಆಕೆಯ ಮಗನಿಗೂ ಧೀರೇಂದ್ರನಿಗಾದ ಗತಿಯೇ ಆಯಿತು. ಇಷ್ಟಾಗುವ ಹೊತ್ತಿಗೆ ದೀಪೇಂದ್ರನ ಎರಡೂ ಬಂದೂಕುಗಳು 8 ಜೀವಗಳನ್ನು ಆಪೋಷನ ತೆಗೆದುಕೊಂಡಾಗಿತ್ತು. ಅದೆಷ್ಟು ಜನರಿಗೆ ಗಾಯಗಳಾಗಿದ್ದುವೋ ? ದಿಕ್ಕಾಪಾಲಾಗಿ ಓಡಿದವರೆಷ್ಟೋ?

ಒಂದು ನಿಟ್ಟುಸಿರಿಟ್ಟ ದೀಪೇಂದ್ರ ಉದ್ಯಾನಕ್ಕೆ ತೆರಳಿದ. ಮತ್ತಷ್ಟು ತುಪಾಕಿಗಳ ಸದ್ದು ಕೇಳಿತು. ಬಹುಶಃ ಅದು ಆತ ತನ್ನನ್ನೇ ಕೊಂದುಕೊಂಡದ್ದೇ ಇರಬೇಕು. ಶುಕ್ರವಾರದ ಡಿನ್ನರ್‌ ಸುದ್ದಿಯೇನೋ ಮಾಮೂಲಾಗಿತ್ತು. ಆದರೆ ಅಂದಿನ ರಕ್ತದೋಕುಳಿ ಇಡೀ ನೇಪಾಳವನ್ನೇ ಕೆಂಪಾಗಿಸಿತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more