ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೀಡ್ಸ್‌ : ರೇಸ್‌ಗೆ ಸಂಬಂಧಿಸಿದಂತೆ ಏಷ್ಯನ್‌ ಯುವಕರ ದೊಂಬಿ

By Staff
|
Google Oneindia Kannada News

ಲೀಡ್ಸ್‌ (ಯುಕೆ) : ಲೀಡ್ಸ್‌ ನಲ್ಲಿ ಮಂಗಳವಾರ ರಾತ್ರಿ ಏಷ್ಯನ್‌ ಯುವಕರು ಮತ್ತು ದೊಂಬಿ ನಿಗ್ರಹ ಅಧಿಕಾರಿಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಕಾರ್‌ ಸ್ಟೇಷನ್‌ನಲ್ಲಿದ್ದ ಹಲವು ಕಾರುಗಳು ಜಖಂಗೊಂಡಿವೆ ಹಾಗೂ ಅಕ್ಕಪಕ್ಕದ ಕಟ್ಟಡಗಳ ಮೇಲೆ ಬೆಂಕಿ ಇಡಲಾಗಿದೆ ಎಂದು ಲಂಡನ್‌ನ ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.

‘ಹರೇ ಹಿಲ್ಸ್‌ ’ ಪ್ರದೇಶದಲ್ಲಿ ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ದೊಂಬಿ ಆರಂಭಗೊಂಡಿತು. ಹಿಂದಿನ ದಿನ ಓಲ್ಡಮ್‌ನಲ್ಲಿ ನಡೆದ ರೇಸ್‌ಗೆ ಸಂಬಂಧಿಸಿದಂತೆ ಈ ದೊಂಬಿ ನಡೆದಿದೆ ಎಂದು ಭಾವಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಅಲ್ಲಿನ ನಾಗರಿಕನೊಬ್ಬನನ್ನು ಬಂಧಿಸಿರುವುದೂ ಈ ಗಲಾಟೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ನಗರ ಕೇಂದ್ರದಿಂದ ತುಸು ದೂರದಲ್ಲಿ ಏಷ್ಯನ್‌ ಯುವಕರು, ಕಾರು ಮತ್ತು ಕಟ್ಟಡಗಳ ಮೇಲೆ ಇಟ್ಟಿಗೆಗಳನ್ನು ಬಿಸಾಡಿರುವುದಲ್ಲದೆ, ಪೊಲೀಸ್‌ ವ್ಯಾನ್‌ಗಳ ಮೇಲೆಯೂ ಬಾಟಲಿಗಳನ್ನೂ ಎಸೆಯಲಾರಂಭಿಸಿದರು. ಪೊಲೀಸ್‌ ನಾಯಿಗಳೊಂದಿಗೆ ದೊಂಬಿ ನಿಗ್ರಹ ದಳದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದು, ಎಂಟು ಪೊಲೀಸ್‌ ವ್ಯಾನ್‌ಗಳು ಹಾಗೂ ಒಂದು ಹೆಲಿಕಾಫ್ಟರ್‌ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಾರ್ಯನಿರತವಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X