• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿರೀಕ್ಷೆ ಸುಳ್ಳು ಮಾಡದ ಜಯಲಲಿತಾ! ‘ಕಾವೇರಿ’ಗೆ ಮತ್ತೆ ಕಾವು

By Staff
|

ನವದೆಹಲಿ : ಕರುಣಾನಿಧಿ ತೆರವು ಮಾಡಿದ ಸ್ಥಾನವನ್ನು ಕುಮಾರಿ ಜಯಲಲಿತಾ ತುಂಬುತ್ತಿದ್ದಂತೆಯೇ, ಕಾವೇರಿ ಜಲ ವಿವಾದ ಮತ್ತೆ ಗರಿ ಕೆದರಬಹುದೆನ್ನುವ ಆತಂಕ ಇದೀಗ ನಿಜವಾಗಿದೆ. ಕಾವೇರಿ ನ್ಯಾಯಾಧಿಕರಣದ ಮಧ್ಯಂತರ ಆದೇಶವನನ್ನು ಕರ್ನಾಟಕ ಪಾಲಿಸಬೇಕೆಂದು ಒತ್ತಾಯಿಸುವ ಮೂಲಕ ಈಚಿನ ದಿನಗಳಲ್ಲಿ ತಣ್ಣಗಾಗಿದ್ದ ವಿವಾದವನ್ನು ಅವರು ಕೆದಕಿದ್ದಾರೆ.

ಮುಖ್ಯಮಂತ್ರಿಯ ನಂತರ ಇದೇ ಮೊದಲಬಾರಿಗೆ ಮಂಗಳವಾರ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಜಯಲಲಿತಾ, ಅವರಿಗೆ ಸಲ್ಲಿಸಿದ ಮನವಿ ಪತ್ರದ ಆರಂಭದಲ್ಲೇ ಕಾವೇರಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಕಾವೇರಿ ನದಿ ಜಲ ವಿವಾದ ನ್ಯಾಯಾಧಿಕರಣದ ಮಧ್ಯಂತರ ಆದೇಶದ ಪರಿಣಾಮಕಾರಿ ಜಾರಿಗೆ ಸೂಕ್ತ ಏರ್ಪಾಡು ಮಾಡುವಂತೆ ವಾಜಪೇಯಿ ಅವರನ್ನು ಜಯಲಲಿತಾ ಒತ್ತಾಯಿಸಿದ್ದಾರೆ.

ಪ್ರಾಧಿಕಾರಕ್ಕೆ ಜಯ ಸವಾಲು : ಕರ್ನಾಟಕ ಪ್ರತಿವರ್ಷ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ 205 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂಬುದು 1991 ರಲ್ಲಿ ಕಾವೇರಿ ನ್ಯಾಯಾಧಿಕರಣ ನೀಡಿದ ಮಧ್ಯಂತರ ಆದೇಶ. ನ್ಯಾಯಾಧಿಕರಣದ ಆದೇಶದ ಪರ, ವಿರುದ್ಧ ಉಭಯ ರಾಜ್ಯಗಳ ತಿಕ್ಕಾಟವನ್ನು ಗಮನಿಸಿ, 1998 ರಲ್ಲಿ ಪ್ರಧಾನಿ ವಾಜಪೇಯಿ ತಮ್ಮ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ಪ್ರಾಧಿಕಾರವನ್ನು ರಚಿಸಿದ್ದರು. ಉಭಯ ರಾಜ್ಯಗಳ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೀರನ್ನು ಬಿಡುಗಡೆ ಮಾಡುವಲ್ಲಿ ಪ್ರಾಧಿಕಾರ ಮಹತ್ವದ ಪಾತ್ರ ವಹಿಸಿತ್ತು. ಈ ಪ್ರಾಧಿಕಾರಕ್ಕೆ ಆಗಿನ ಮುಖ್ಯಮಂತ್ರಿಗಳಾದ ಕರುಣಾನಿಧಿ ಹಾಗೂ ಜೆ.ಹೆಚ್‌. ಪಟೇಲ್‌ ಒಪ್ಪಿ ಸದಸ್ಯರಾಗಿದ್ದರು. ಈಗಲೂ ಪ್ರಾಧಿಕಾರ ಅಸ್ತಿತ್ವದಲ್ಲಿದೆ.

ಪ್ರಸ್ತುತ ನ್ಯಾಯಾಧಿಕರಣದ ಮಧ್ಯಂತರ ಆದೇಶದ ಜಾರಿಗೆ ಒತ್ತಾಯಿಸುವ ಮೂಲಕ, ಪ್ರಧಾನಿ ನೇತೃತ್ವದ ಪ್ರಾಧಿಕಾರದ ಅಸ್ತಿತ್ವನ್ನೇ ಜಯಲಲಿತಾ ಪ್ರಶ್ನಿಸಿದ್ದಾರೆ. ಮೂಲತಃ ಕನ್ನಡಿಗರಾದ ಜಯಲಲಿತಾ ತಮ್ಮ ಕನ್ನಡ ಮೂಲವನ್ನು ತಮಿಳರಿಂದ ಮರೆ ಮಾಚುವ ಉದ್ದೇಶದಿಂದ ಕಾವೇರಿ ಸಮಸ್ಯೆಯನ್ನು ಜೀವಂತವಾಗಿಡುತ್ತಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯ ಪಡುತ್ತಾರೆ.

ಜಯಲಲಿತಾ ಎನ್‌ಡಿಎ ಸೇರುತ್ತಾರಾ ?
ಈ ಪ್ರಶ್ನೆ ದೆಹಲಿ- ಚೆನ್ನೈನ ರಾಜಕೀಯ ಓಣಿಗಳಲ್ಲಿ ಸರಿದಾಡುತ್ತಿದೆ. ರಾಜಕೀಯ ಕಡು ಎದುರಾಳಿ ಕರುಣಾನಿಧಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಜಯಾ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ ಸೇರುತ್ತಾರೆಂದು, ವಾಜಪೇಯಿ ಅವರೊಂದಿಗೆ ಸ್ನೇಹದಿಂದ ಇರಲು ನಿರ್ಧರಿಸಿದ್ದಾರೆಂದು ನಂಬಲಾಗಿದೆ.

ಮಂಗಳವಾರ ದೆಹಲಿಯಲ್ಲಿ ವಾಜಪೇಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ, ಎನ್‌ಡಿಎಯಾಂದಿಗೆ ತಾವು ಕೈಗೂಡಿಸುವ ಕುರಿತು ಏನನ್ನೂ ಹೇಳಲು ನಿರಾಕರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more