ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗ್ಮಾ ಬೋನಿನಲ್ಲಿ ಬಂಗಾಳದ ಹುಲಿ?

By Staff
|
Google Oneindia Kannada News

Gangulyನವದೆಹಲಿ : ಲೆಕ್ಕಾಚಾರವಿಲ್ಲದ ನಾಯಕತ್ವ, ಎದೆಗಾರಿಕೆಯಿಲ್ಲದ ಆಟಕ್ಕೆ ಸೋಲಿನ ರುಚಿ ಕಂಡಿರುವುದು ಭಾರತ ತಂಡವಷ್ಟೇ ಅಲ್ಲ. ವೈಯಕ್ತಿಕವಾಗಿ ಇದು ನಾಯಕ ಗಂಗೂಲಿ ಕಾಣುತ್ತಿರುವ ಮೊದಲ ಟೆಸ್ಟ್‌ ಸೋಲು. ಜೊತೆಗೆ ತಂಡದ ಕೋಚ್‌ ಜಾನ್‌ರೈಟ್‌ಗೂ ಆಸ್ಟ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಪರೋಕ್ಷ ಮುಖಭಂಗ.

ಮಾಧ್ಯಮಗಳಂತೂ ಗಂಗೂಲಿ ಮೇಲೆ ಶರವರ್ಷ ಸುರಿಯುತ್ತಿವೆ. ತಮಿಳು ಸಿನಿಮಾ ನಟಿ ನಗ್ಮಾ ಜೊತೆಗಿನ ಓಡಾಟ ಹಾಗೂ ಆತನ ವೈಫಲ್ಯಕ್ಕೆ ಸಂಬಂಧ ಕಲ್ಪಿಸಿ ಬರೆಯತೊಡಗಿವೆ. ಒತ್ತಡದ ಪರಿಸ್ಥಿತಿಯಲ್ಲಿ ಹೊಸ ಕಾರ್ಯತಂತ್ರ ರೂಪಿಸಲಾರದ ಗಂಗೂಲಿಯಂಥವರು ನಾಯಕರಾಗಲು ಅನರ್ಹರು ಎಂಬ ಬರವಣಿಗೆಗಳೂ ಮೂಡಿವೆ.

ಸಾಲದ್ದಕ್ಕೆ ಭಾರತ ಕ್ರಿಕೆಟ್‌ ಆಯ್ಕೆ ಸಮಿತಿ ಅಧ್ಯಕ್ಷ ಚಂದೂ ಬೋರ್ಡೆ ಇಡೀ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ರಿಕೆಟ್ಟಿನ ಎಲ್ಲಾ ವಲಯಗಳಲ್ಲೂ ಉಡಾಫೆ, ಕಳಪೆ ಆಟ ಪ್ರದರ್ಶಿಸಿರುವ (ಸಚಿನ್‌ ಹೊರತುಪಡಿಸಿ) ಆಟಗಾರರು, ಬೋರ್ಡೆ ಹುಬ್ಬುಗಂಟಿಕ್ಕಲು ಕಾರಣವಾಗಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯಕ್ಕೆ ಆಯಲಾಗುವ ತಂಡ ಗುರುತರ ಬದಲಾವಣೆಗಳನ್ನು ಕಾಣುವ ನಿರೀಕ್ಷೆಗಳೂ ಇವೆ.

ತವರಲ್ಲಿ ಗಂಗೂಲಿ ಸತ್ವ ಪರೀಕ್ಷೆ : ಎರಡನೇ ಟೆಸ್ಟ್‌ ಪಂದ್ಯ ನಡೆಯಲಿರುವುದು ಗಂಗೂಲಿ ತವರು, ಕೋಲ್ಕತಾದಲ್ಲಿ. ಕೋಲ್ಕತಾ ಜನತೆಯ ಪಾಲಿಗೆ ಗಂಗೂಲಿ ರಾಜಕುಮಾರ. ಆದರೆ ಮೊನ್ನಿನ ಕಳಪೆ ಆಟ ಜನರ ದೃಷ್ಟಿಕೋನ ಬದಲಿಸಿದೆ. ಅವರ ಪಾಲಿಗೆ ಗಂಗೂಲಿ ಈಗ ‘ಉತ್ತರಕುಮಾರ’ ! ಅಲ್ಲಾಡುತ್ತಿರುವ ನಾಯಕ ಕುರ್ಚಿಯಿಂದ ಜಾರಿ ಬೀಳದಂತೆ ಗಂಗೂಲಿ ಎಚ್ಚರವಹಿಸಲೇಬೇಕಿದೆ. ಈ ಎಲ್ಲಾ ಒತ್ತಡಗಳ ಬಿಸಿ ನಮ್ಮ ಗಂಗೂಲಿಗೂ ತಟ್ಟಿದೆ. ಈಗ ಆತ ಜಾಣಮರಿಯಾಗಿ ನಾಯಕನ ಆಟದ ಅಭ್ಯಾಸಕ್ಕೆ ಒತ್ತು ಕೊಡಲು ಮುಂದಾಗಿದ್ದಾರೆ; ಬೆಲ್ಲ ತಿನ್ನ ಬೇಡ ಎಂದು ಮಗುವಿಗೆ ಪರಮಹಂಸರು ಹೇಳುವ ಮುನ್ನ ತಾವು ತಿನ್ನುವುದನ್ನು ಬಿಡುವ ಅಭ್ಯಾಸ ಮಾಡಿಕೊಂಡರಲ್ಲ ಹಾಗೆ.

ಹೌದು. ಮಾರ್ಚಿ 6ರಿಂದ 8ರವರೆಗೆ ಆಸ್ಟ್ರೇಲಿಯಾ ವಿರುದ್ಧ 3 ದಿನಗಳ ಪಂದ್ಯ ಆಡಲಿರುವ ಮಂಡಲಿ ಅಧ್ಯಕ್ಷರ ಇಲೆವೆನ್‌ ತಂಡದಲ್ಲಿ ಗಂಗೂಲಿ ಆಡಲಿದ್ದಾರೆ. ಈ ಮುಂಚೆ ಪ್ರಕಟಿಸಲಾಗಿದ್ದ ಅಧ್ಯಕ್ಷರ ತಂಡದ ನಾಯಕ ವಿಜಯ್‌ ದಾಹಿಯಾ ಈಗ ಉಪನಾಯಕ. ಭಾರತದ ನಾಯಕ ಗಂಗೂಲಿಗೇ ಬಿಸಿಸಿಐ ಇಲ್ಲೂ ನಾಯಕ ಪಟ್ಟ ಕೊಟ್ಟಿದೆ. ಅದೂ ಗಂಗೂಲಿ ಅಭ್ಯಾಸದ ಇಚ್ಛೆಯ ಮೇರೆಗೆ. ನಡೆಯಲಿರುವ ಪಂದ್ಯದಲ್ಲಿ ಗಂಗೂಲಿ ತಮ್ಮ ಬ್ಯಾಟಿಂಗ್‌ ಸುಧಾರಿಸಿಕೊಳ್ಳುವುದರ ಜೊತೆಗೆ ನಾಯಕತ್ವವನ್ನೂ ಸುಧಾರಿಸಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ಈ ನಡುವೆ ಚೆನ್ನೈನ ಪ್ರಸಿದ್ಧ ಭವಿಷ್ಯಕಾರ ಗಂಗೂಲಿ- ನಗ್ಮಾ ಕುರಿತು ಇಂತು ಹೇಳಿದ್ದಾರೆ :

  • ಗಂಗೂಲಿ- ನಗ್ಮಾ ಸುದ್ದಿ ನಿಜ
  • ಗಂಗೂಲಿ ಸದ್ಯದಲ್ಲೇ ಒಂದು ಶತಕ ಹೊಡೆಯುವರಾದರೂ ಸದಾ ಒತ್ತಡದಲ್ಲಿರುತ್ತಾರೆ
  • ನಗ್ಮಾ ಜೊತೆಗಿನ ಒಡನಾಟ ಗಂಗೂಲಿ- ಡೋನಾ ದಾಂಪತ್ಯಕ್ಕೆ ಕುತ್ತಲ್ಲ. ಡೋನಾರನ್ನು ಸಾಕಷ್ಟು ಸುತ್ತಿಸಿ, ಬಟ್ಟೆ- ಒಡವೆ ಕೊಡಿಸಿ ಗಂಗೂಲಿ ಸಂತೈಸಬಲ್ಲರು
  • ನಗ್ಮಾ ಒಡನಾಟದಿಂದ ಗಂಗೂಲಿ ಹಿಂದೆಂದಿಗಿಂತಲೂ ಹೆಚ್ಚು ದೈವಭಕ್ತರಾಗುತ್ತಾರೆ.
ಯಾರು ಏನೇ ಹೇಳಲಿ, ‘ನನ್ನ ಆಟ ಹಾಳಾಗಿಲ್ಲ. ಅಜರ್‌ ಪಾಲಿಗೆ ಬಿಜಲಾನಿ ದುರ್ದಾನವಾದಂತೆ ನನ್ನ ಪಾಲಿಗೆ ನಗ್ಮಾ ಆಗುವುದಿಲ್ಲ’ ಅನ್ನೋದನ್ನ ಸಾಬೀತುಪಡಿಸಲು ಗಂಗೂಲಿಗೆ ಇದು ಲಾಸ್ಟ್‌ ಛಾನ್ಸ್‌. ಆಲ್‌ ದಿ ಬೆಸ್ಟ್‌ ಗಂಗೂಲಿ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X