ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಸಂತ್ರಸ್ತರ ನೆರವಿಗೆಹುಬ್ಬಳ್ಳಿ ರೌಂಡ್‌ ಟೇಬಲ್‌ ನಂ. 37

By Super
|
Google Oneindia Kannada News

ಹುಬ್ಬಳ್ಳಿ : ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಹಾನಿಗೊಳಗಾಗಿರುವ ಮೂರು ಗ್ರಾಮಗಳನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಲು ಹುಬ್ಬಳ್ಳಿ ರೌಂಡ್‌ ಟೇಬಲ್‌ ನಂ. 37 ಮುಂದಾಗಿದೆ.

ಮೂರುಗ್ರಾಮಗಳನ್ನು ದತ್ತು ನೀಡಲು ಗುಜರಾತ್‌ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಪ್ರತಿ ಗ್ರಾಮವನ್ನು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಆ ಗ್ರಾಮಗಳಲ್ಲಿ ಅನಾಥಾಲಯಗಳನ್ನೂ ನಿರ್ಮಿಸಲಾಗುವುದು ಎಂದು ರೌಂಡ್‌ ಟೇಬಲ್‌ನ ಅಧ್ಯಕ್ಷ ಮನೋಜ್‌ ಅಗರ್‌ವಾಲ್‌ ತಿಳಿಸಿದ್ದಾರೆ.

ಭೂಕಂಪದಿಂದ ನಿರಾಶ್ರಿತರಾದವರಿಗೆ ಈಗಾಗಲೇ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಲಾಗಿದೆ. 90 ಲಕ್ಷ ರೂಪಾಯಿ ಸಹಾಯಧನವನ್ನೂ ಕಳುಹಿಸಲಾಗಿದೆ. ಹುಬ್ಬಳಿ ಘಟಕದಿಂದಲೇ 35 ಸಾವಿರ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದು, ಸಂಸ್ಥೆಯ ಸದಸ್ಯರು ಇನ್ನೂ ಹೆಚ್ಚಿನ ಸಹಾಯ ನೀಡಲು ಉತ್ಸುಕರಾಗಿದ್ದಾರೆ ಎಂದು ಮನೋಜ್‌ ಹೇಳಿದ್ದಾರೆ.

English summary
Hubli round table no.37 will adopt 3 villages of gujarath
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X