ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಸಂತೋಷದ ಲಹರಿ ಇಂದೂ ಮುಂದುವರಿಯಲಿದೆ. ಈ ನಡುವೆ ದೇವತಾರ್ಚನೆಯ ಸದವಕಾಶವೂ ಅಯಾಚಿತವಾಗಿ ಒದಗಿ ಬರಲಿದೆ. ಖುಷಿಯಾಗಿರಿ.

ವೃಷಭ : ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಯಶಸ್ಸು ಈ ದಿನ ಮುಖ ತೋರಿಸುವ ನಿರೀಕ್ಷೆ ಇದೆ. ಇನ್ನೆಷ್ಟು ದಿನ ಎಂದು ಇಬ್ಬಂದಿತನದಲ್ಲಿರುತ್ತೀರಿ. ಉಭ ಶುಭ ನಿಶ್ಚಯಿಸಿಬಿಡಿ.

ಮಿಥುನ : ಸೃಜನಶೀಲ ಕೆಲಸಗಳಲ್ಲಿ ಯಶಸ್ಸು . ಅಧ್ಯಯನದಲ್ಲಿ ಪ್ರಗತಿ. ಧ್ಯಾನದಿಂದ ಮನಸ್ಸಿಗೆ ನೆಮ್ಮದಿ. ಆರ್ಥಿಕ ಪ್ರಗತಿ. ಚೆಂದನೆ ದಿನ, ಅನುಭವಿಸಿಬಿಡಿ.

ಕಟಕ : ಆರ್ಥಿಕ ವಿಷಯಗಳಲ್ಲಿನ ಯಶಸ್ಸು ಮುಂದುವರೆಯಲಿದೆ. ಈ ಯಶಸ್ಸಿನಿಂದಾಗಿ ನಿಮ್ಮನ್ನು ಓಲೈಸುವವರೂ ಹೆಚ್ಚುತ್ತಿದ್ದಾರೆ. ಇವರ ಬಗ್ಗೆ ಮಯ್ಯೆಲ್ಲಾ ಕಣ್ಣಾಗಿದ್ದರೂ ಸಾಲದು.

ಸಿಂಹ : ಹೊಸತನಕ್ಕಾಗಿ ತುಡಿಯುತ್ತಿರುವ ನಿಮಗೆ ಸಾಹಸದ ಅವಕಾಶವೊಂದು ಎದುರಾಗಲಿದೆ. ಆದರೆ, ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಪ್ರಸ್ತುತ ನೀವಿದ್ದೀರಾ ಅನ್ನುವುದನ್ನು ಹೇಳಲಾಗದು.

ಕನ್ಯಾ : ಉನ್ನತ ವ್ಯಾಸಂಗದಲ್ಲಿ ನೀವು ಅಂದುಕೊಂಡ ಯಶಸ್ಸು ಹತ್ತಿರದಲ್ಲೇ ಇದೆ. ವೃಥಾ ಅಳುಕು ಬೇಡ. ಮುಂದಿನ ಭವಿಷ್ಯಕ್ಕೆ ಈ ಯಶಸ್ಸು ಮೆಟ್ಟಿಲಾಗುತ್ತದೆ ಅನ್ನುವುದು ಗಮನದಲ್ಲಿರಲಿ.

ತುಲಾ : ಕುಟುಂಬದವರ ಸಾಮೀಪ್ಯ ನಿಮಗೆ ಹಿತ ಅನ್ನಿಸುತ್ತದೆ. ವಿಷಾದದ ಸಂಗತಿಯೆಂದರೆ ಈ ಹಿತ ಅನುಭವಿಸಲು ಅನಾರೋಗ್ಯವೇ ಕಾರಣವಾಯಿತೆನ್ನುವುದು. ಮನೆಯವರಿಗೂ ನಿಮ್ಮ ಸಮಯದಲ್ಲಿ ಪಾಲಿರಲಿ.

ವೃಶ್ಚಿಕ : ಮನಸ್ಸಿನ ಉತ್ಸಾಹಕ್ಕೆ ತಕ್ಕಂತೆ ಆರೋಗ್ಯ ಸ್ಪಂದಿಸುತ್ತಿಲ್ಲ . ನಾಳೆಯ ನಿರೀಕ್ಷೆಯಲ್ಲಿ ಈ ದಿನದ ಕಹಿಯನ್ನು ಕಡಿಮೆ ಮಾಡಿಕೊಳ್ಳಿ. ಯಾರೋ ಕಥೆ ಹೇಳುತ್ತಿದ್ದಾರೆ, ಕೇಳಿಸಿಕೊಳ್ಳಿ.

ಧನಸ್ಸು : ಈ ದಿನದ ಸಂಜೆ ನಿಮಗೆ ರಂಜನೆಯನ್ನು ಹೊತ್ತು ತರಲಿದೆ. ಇತ್ತೀಚೆಗೆ ನೀವು ಕಟ್ಟಿಕೊಂಡಿರುವ ಆಯಾಸವನ್ನೆಲ್ಲಾ ಈ ರಂಜನೆ ಮರೆಸುತ್ತದೆ ಅನ್ನುವುದೇ ವಿಶೇಷ. ಸಿದ್ಧರಾಗಿದ್ದೀರಿ ತಾನೇ?

ಮಕರ : ಏನನ್ನೋ ಕೇಳಬೇಕೆಂದು ಅವರು ಅಷ್ಟೊಂದು ಕಾಡುತ್ತಿರುವಾಗ ಈ ಪಾಟಿ ಹಟಮಾರಿತನವೇಕೆ. ಇನ್ನು ಸತಾಯಿಸುವುದು ಬೇಡ, ಹೇಳಿಬಿಡಿ. ಅವರು ನಿರಾಳವಾಗಿರಲಿ.

ಕುಂಭ : ಪಕ್ಕಾ ವೃತ್ತಿ ಪರರ ಹಾಗೆ ವರ್ತಿಸುತ್ತಿದ್ದೀರಿ. ಈ ಲೆಕ್ಕಾಚಾರಗಳು ಎಲ್ಲಾ ಹೊತ್ತಿನಲ್ಲೂ ಸಲ್ಲುವುದಿಲ್ಲ ಅನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಿ. ಅದೇನೇ ಇರಲಿ, ಈ ದಿನ ನಿಮ್ಮದೇ.

ಮೀನ : ಕಾಸು ಕೈ ತಪ್ಪುತ್ತದೆ ಎಂದು ಕೊರಗುವ ಹೊತ್ತಿಗೇನೆ ಆರೋಗ್ಯವೂ ಕೈ ಕೊಡುತ್ತಿದೆ. ಇದರಿಂದಾಗಿ ಒದಗುವ ವಿಶ್ರಾಂತಿ ನಿಮಗೆ ಖುಷಿಯನ್ನೇ ತರುತ್ತದೆ. ವ್ಯಾಸಂಗದಲ್ಲಿ ಹಿನ್ನಡೆಯ ದಿನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X