ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಕರಳುಬೇನೆಗೆ ಇನ್ನೊಬ್ಬ ಬಾಲಕ ಬಲಿ

By Staff
|
Google Oneindia Kannada News

ಬೆಂಗಳೂರು : ಕಳೆದೊಂದು ವಾರದಿಂದ ಪ್ರತಿನಿತ್ಯ 15- 20 ಕರಳುಬೇನೆ ಪ್ರಕರಣಗಳು ವರದಿಯಾಗುತ್ತಿದ್ದು, ಶುಕ್ರವಾರ ಅಲಸೂರಿನ ಬಾಲಕನೊಬ್ಬ ಈ ರೋಗಕ್ಕೆ ಬಲಿಯಾಗಿದ್ದಾನೆ.

ನಗರದಲ್ಲಿ ಕರಳುಬೇನೆ ರೋಗಕ್ಕೆ ಎರಡನೇ ಬಲಿಯಿದು. ಸತತ ವಾಂತಿ- ಭೇದಿಯಿಂದ ದೇಹದಲ್ಲಿ ನೀರಿನಂಶ ಸಾಕಷ್ಟು ಕಡಿಮೆಯಾಗಿ ಅರೆ ಪ್ರಜ್ಞಾವಸ್ಥೆಗೆ ತಿರುಗಿದ ಅಲಸೂರಿನ ಶಶಿಕುಮಾರ್‌(14) ನನ್ನು ಗುರುವಾರ ಇಂದಿರಾನಗರದ ಐಸೋಲೇಷನ್‌ ಆಸ್ಪತ್ರೆಗೆ ಸೇರಿಸಲಾಯಿತು. ಶುಕ್ರವಾರ ಆತ ಅಸುನೀಗಿದ ಎಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ನಾಲ್ಕು ದಿನಗಳ ಹಿಂದೆ ಇದೇ ರೋಗಕ್ಕೆ ಪಳನಿ ಎಂಬ ಬಾಲಕ ತುತ್ತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನಗರದ ಅಲಸೂರು, ಇಂದಿರಾನಗರ ಮೊದಲಾದ ಬಡಾವಣೆಗಳಲ್ಲಿ ಬಳಸುತ್ತಿರುವ ನೀರು ಕಲುಷಿತಗೊಂಡಿರುವುದೆ ಕರಳುಬೇನೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣವಾಗಿದೆ. ಸರ್ಕಾರ ಈ ರೋಗ ತಡೆಗೆ ಯಾವ ಕ್ರಮ ಕೈಗೊಳ್ಳುತ್ತಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಈವರೆಗೆ ಸುಮಾರು 200 ಕರಳುಬೇನೆ ಪ್ರಕರಣಗಳು ವರದಿಯಾಗಿವೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X