• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಯರ್‌ ಕ್ಯಾಮಿ ಸ್ಮಿತ್‌- ವೆಂಕಿಗೆ ಸಜೆ, ಸ್ಲೇಟರ್‌ಗೆ ಮಾಫಿ ತರವೇ?

By Staff
|

ಮುಂಬಯಿ : ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಗೆದ್ದಿದ್ದರೂ, ಆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಮೈಕೆಲ್‌ ಸ್ಲೇಟರ್‌ ಅತಿಯಾಗಿ ವರ್ತಿಸಿದ್ದು ಹೊಸ ವಿವಾದ ಹುಟ್ಟು ಹಾಕಿದೆ.

ನಡೆದಿದ್ದೇನು? ಎರಡನೇ ಪಾಳಿಯಲ್ಲಿ ಆಡುತ್ತಿದ್ದ ರಾಹುಲ್‌ ದ್ರಾವಿಡ್‌ ಫ್ಲೆಮಿಂಗ್‌ ಎಸೆತವೊಂದನ್ನು ಹೊಡೆದಾಗ, ಅದು ನೆಲಕ್ಕೆ ಬಿದ್ದ ನಂತರ ಕೈಗೆತ್ತಿಕೊಂಡ ಸ್ಲೇಟರ್‌, ಅಂಪೈರ್‌ ಎಸ್‌.ವೆಂಕಟರಾಘವನ್‌ ಅವರಲ್ಲಿ ತೀವ್ರ ಮನವಿ ಮಾಡಿದರು. ಹುಚ್ಚೆದ್ದು ಕುಣಿದರು. ಒಕ್ಕೊರಲಿಗೆ ಸ್ಪಂದಿಸಿದ ರಾಘವನ್‌ 3ನೇ ಅಂಪೈರ್‌ಗೆ ತೀರ್ಪು ಕೊಡಲು ಹೇಳಿದರು. ಚೆಂಡು ನೆಲಕ್ಕೆ ಬಿದ್ದ ನಂತರ ಹಿಡಿದದ್ದು ರೀಪ್ಲೇಯಲ್ಲಿ ಸ್ಪಷ್ಟವಾಯಿತು. 3ನೇ ಅಂಪೈರ್‌ ನರೇಂದ್ರ ಮೆನನ್‌ ನಾಟೌಟ್‌ ತೀರ್ಪಿತ್ತರು. ಸ್ಲೇಟರ್‌ ಸುಮ್ಮನಾಗದೆ ಅಂಪೈರ್‌ ರಾಘವನ್‌ ಬಳಿಗೆ ಹೋಗಿ ಒಂದಷ್ಟು ಬಡಬಡಿಸಿದರು. ದ್ರಾವಿಡ್‌ ಹತ್ತಿರವೂ ಹೋಗಿ ಮುಖ ಸಿಂಡರಿಸಿ ಏನೇನೋ ಒದರಿದರು.

ಈ ಘಟನೆ ನಂತರ ಭಾರತ ಪಂದ್ಯ ಸೋತಿದ್ದು ನಿಮಗೆ ಗೊತ್ತೇ ಇದೆ. ಪಂದ್ಯ ಸೋತ ದಿನವೇ ದ್ರಾವಿಡ್‌ ಬಳಿ ಸ್ಲೇಟರ್‌ ಕ್ಷಮಾಪಣೆ ಕೇಳಿದ್ದಾರೆ. ದ್ರಾವಿಡ್‌, ಆಸ್ಟ್ರೇಲಿಯನ್ನರ ಕ್ಯಾಬಿನ್ನಿಗೆ ಹೋಗಿ ಸ್ಲೇಟರ್‌ ಜೊತೆ ಬಿಯರ್‌ ಕುಡಿದು ಕಹಿ ಗಳಿಗೆ ಮರೆತಿದ್ದಾರೆ.

ಆದರೆ ಇಷ್ಟಕ್ಕೇ ಎಲ್ಲಾ ಮುಗಿದಿಲ್ಲ. ಪಂದ್ಯದ ರೆಫರಿ ಕ್ಯಾಮಿ ಸ್ಮಿತ್‌, ಸ್ಲೇಟರ್‌ಗೆ ಎಚ್ಚರಿಕೆ ಕೊಟ್ಟು ಸುಮ್ಮನಾಗಿ ಬಿಟ್ಟಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕದಲ್ಲಿ ನಮ್ಮೂರ ಹುಡುಗ ವೆಂಕಟೇಶ್‌ ಪ್ರಸಾದ್‌ ಸ್ಲೇಟರ್‌ಗಿಂತ ಚಿಕ್ಕ ತಪ್ಪು ಮಾಡಿದಾಗ ಒಂದು ಪಂದ್ಯಕ್ಕೆ ನಿಷೇಧ ವಿಧಿಸಿದ್ದೂ ಇದೇ ಕ್ಯಾಮಿ ಸ್ಮಿತ್‌. ಪ್ರಸಾದ್‌ಗೆ ಮಾತ್ರ ಸಜೆ. ಸ್ಲೇಟರ್‌ಗೆ ಕ್ಷಮಾದಾನ. ಇದ್ಯಾವ ನ್ಯಾಯ ? ಕ್ರಿಕೆಟ್ಟಿನಲ್ಲಿ ನೀತಿ- ನೇಮ ಎಲ್ಲರಿಗೂ ಒಂದೇ ಅಲ್ವೆ ಅಂತ ಭಾರತದ ಪ್ರಮುಖ ಆಟಗಾರರೊಬ್ಬರು ದನಿ ಎತ್ತಿದ್ದಾರೆ. ಆ ಆಟಗಾರ ತನ್ನ ಹೆಸರನ್ನು ಬಹಿರಂಗಗೊಳಿಸಲು ಇಚ್ಛಿಸಿಲ್ಲ.

ಪಂದ್ಯದಲ್ಲಿ ಗೆಲ್ಲೋದು, ಸೋಲೋದು ಇದ್ದೇ ಇರುತ್ತದೆ. ಆದರೆ ಒಬ್ಬ ಆಟಗಾರನ ತಲೆ ತಿರುಕತನ ಎಷ್ಟೆಲ್ಲಾ ಅಪಸವ್ಯಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹಲವಾರು ಪಂದ್ಯಗಳ ರೆಫರಿ ಆಗಿ ಕಾರ್ಯ ನಿರ್ವಹಿಸಿರುವ ಕ್ಯಾಮಿ ಸ್ಮಿತ್‌ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕು.

(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more