ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಥಾಶಕ್ತಿ ನೆರವು : ದಿನಾಂಕ- 02.02. 2001 ರವರೆಗೆ

By Staff
|
Google Oneindia Kannada News
  • ಕೇಂದ್ರದ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಬಂಡಿಯಾತ್ರೆಯಲ್ಲಿ ಸಂಗ್ರಹಿಸಿದ ನಿಧಿಯನ್ನು ಸಂತ್ರಸ್ತರ ನಿಧಿಗೆ ಅರ್ಪಿಸಲು ರಾಜ್ಯ ರೈತ ಸಂಘ ನಿರ್ಧರಿಸಿದೆ. ನಾಗರಿಕರು ಈ ನಿಧಿಗೆ ಉದಾರ ನೆರವು ನೀಡಬೇಕೆಂದು ರೈತಸಂಘದ ಅಧ್ಯಕ್ಷ ಪ್ರೊ. ನಂಜುಂಡ ಸ್ವಾಮಿ ಮನವಿ ಮಾಡಿದ್ದಾರೆ.
  • ವಿಟ್ಲದ ಒಡಿಯೂರು ಶ್ರೀಗಳಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಸಾವಿರ ರೂಪಾಯಿ
  • ಫೆ. 3ರಂದು ಚಿಂತಾಮಣಿಯಲ್ಲಿ ಭೂಕಂಪ ಪರಿಹಾರ ನಿಧಿ ಸಂಗ್ರಹಕ್ಕಾಗಿ ಸಚಿವರು ಮತ್ತು ಸಂಘ ಸಂಸ್ಥೆಗಳಿಂದ ಪಾದಯಾತ್ರೆ
  • ಬೆಂಗಳೂರು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ 2.50 ಲಕ್ಷ ರೂಪಾಯಿ ದೇಣಿಗೆ
  • ಭೂಕಂಪ ಪೀಡಿತರ ಪುನರ್ವಸತಿಗೆ ಕೆನರಾ ಬ್ಯಾಂಕ್‌ ಚೆಕ್‌ ಸಂಗ್ರಹ ಮತ್ತು ಹಣಪಾವತಿ ವ್ಯವಸ್ಥೆಯನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ. ಡಿಮಾಂಡ್‌ ಡ್ರಾಫ್ಟ್‌ಗಳನ್ನು ಉಚಿತವಾಗಿ ನೀಡಲಾಗುವುದು.
  • ಬೆಂಗಳೂರು ಜಿಲ್ಲಾ ದಕ್ಷಿಣಾ ರೈಲ್ವೇ ಸ್ಕೌಟ್‌ ಮತ್ತು ಗೈಡ್‌ ತಂಡ ರೈಲ್ವೇ ನಿಲ್ದಾಣದಲ್ಲಿ ಪರಿಹಾರ ನಿಧಿ , ಬಟ್ಟೆ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಶುಕ್ರವಾರ ಮಧ್ಯಾಹ್ನ 1.30ರ ರೈಲಿನಲ್ಲಿ ಗುಜರಾತ್‌ಗೆ ಹೊರಡಲಿದೆ.
  • ಕರ್ನಾಟಕ ಪ್ರದೇಶ್‌ ಕಾಂಗ್ರೆಸ್‌ ಕಮಿಟಿ, ಪಕ್ಷದ ಪ್ರತಿಯಾಬ್ಬ ಶಾಸಕರಿಂದ ಹಣ ಸಂಗ್ರಹಿಸಲು 50 ಮಂದಿಯ ಸ್ವಯಂ ಸೇವಕ ದಳವನ್ನು ನೇಮಿಸಿದೆ.
  • ಬೆಂಗಳೂರಿನ ಮಲ್ಯ ಮತ್ತು ಮಣಿಪಾಲ ಆಸ್ಪತ್ರೆಗಳು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ಗುಜರಾತ್‌ಗೆ ಕಳುಹಿಸಿದೆ.
  • ಬಡಗ ನಾಡು ಸಂಘದ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನು ಗುಜರಾತ್‌ಗೆ ಕಳುಹಿಸಲು ಸಂಘ ನಿರ್ಧರಿಸಿದೆ.
  • ನಗರದ ಎಂಬಯೋಟಿಕ್‌ ಲ್ಯಾಬರೇಟರಿಸ್‌ ಸಂಸ್ಥೆ 21 ಪೆಟ್ಟಿಗೆಗಳಷ್ಟು ಅಗತ್ಯ ಔಷಧಿಗಳನ್ನು ಸಂತ್ರಸ್ತರ ಚಿಕಿತ್ಸೆಗೆ ಕಳುಹಿಸಿದೆ.
  • ಸೊಸೈಟಿ ಫಾರ್‌ ಸರ್ವಿಸ್‌ ಟು ವಾಲಂಟರಿ ಏಜೆನ್ಸೀಸ್‌ ಸಂಸ್ಥೆ 20 ಸಾವಿರ ರೂಪಾಯಿ ದೇಣಿಗೆ ನೀಡಿದೆ.
  • ಅಖಿಲ ಭಾರತೀಯ ಇನ್‌ಶ್ಯೂರೆನ್ಸ್‌ ಉದ್ಯೋಗಿಗಳ ಸಂಘ, ಧಾರವಾಡ -ಗುಜರಾತ್‌ ಭೂಕಂಪ ಪರಿಹಾರ ನಿಧಿಗೆ 50 ಸಾವಿರ ರೂಪಾಯಿ ನೀಡಿದೆ. ಇದು ಪ್ರಥಮ ಕಂತಾಗಿದ್ದು ಎರಡನೇ ಕಂತನ್ನು ಸದ್ಯದಲ್ಲಿಯೇ ಕಳುಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X