ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ದಿನ ನಿಮ್ಮ ನಿರೀಕ್ಷೆಯಂತೆಯೇ ಉರುಳುವುದರಿಂದ ಕಂಡಾಪಟ್ಟೆ ಖುಷಿ ತುಂಬಲಿದೆ. ಯಾವುದೇ ವದಂತಿಗಳಿಗೆ ಕಿವಿ ಕೊಡದಿರಿ.

ವೃಷಭ :ಕಚೇರಿಯಲ್ಲಿ ನೀವು ಹೊಡೆಯುವ ಹರಟೆಯೇ ಇತರರಿಗೆ ಪಾಠವಾಗಲಿದೆ. ಆದರೆ ಅದು ಮಾತಿಗಷ್ಟೇ ಚೆಂದ ಎಂಬುದು ನಿಮ್ಮ ಅಭಿಪ್ರಾಯ. ಹೀಗಿದ್ದೂ ಅದು ನಿಮಗರಿವಿಲ್ಲದಂತೆ ಆಚರಣೆಗೆ ಬಂದುಬಿಡುತ್ತದೆ.

ಮಿಥುನ : ಕ್ರೀಡೆ, ಕಲೆ, ಬರವಣಿಗೆ ಮೊದಲಾದ ಸೃಜನಶೀಲ ಕೆಲಸಗಳಲ್ಲಿ ಸಿದ್ಧಿ. ಸಾರ್ಥಕ್ಯ ಮನೋಭಾವ. ಯಾಂತ್ರಿಕ ಜೀವನದಿಂದ ಕೊಂಚ ರಿಲೀಫು.

ಕಟಕ : ಇವತ್ತಿನ ಒಂದು ಪಾರ್ಟಿಯಲ್ಲಿ ನೀವೇ ಹೈಲೈಟು. ಆದರೂ ಸಮಯ ಬಿದ್ದರೆ ಕಾಲಿಗೆ ಬುದ್ಧಿ ಹೇಳುವುದು ಒಳಿತು. ನಿಮ್ಮ ಜೇಬು ನಿನ್ನೆಗಿಂತ ತುಸು ಜಾಸ್ತಿ ಹಗುರಾಗಲಿದೆ.

ಸಿಂಹ : ಹಣಕಾಸಿನ ವಿಷಯದಲ್ಲಿ ಕಿಂಚಿತ್ತೂ ರಿಸ್ಕಿಗೆ ಹೋಗಬೇಡಿ. ಸಂಗಾತಿ ಜೊತೆ ಭವಿತವ್ಯದ ಒಂದಿಷ್ಟು ಪ್ಲಾನು ಹಾಕಿಕೊಳ್ಳುವ ಅವಕಾಶ ನಿಮ್ಮದಾಗಲಿದೆ ; ಜೊತೆಗೆ ಪ್ರೀತಿ ತೋಡಿಕೊಳ್ಳಲು ಅವಕಾಶವೂ.

ಕನ್ಯಾ : ಯಾವುದೇ ಜೂಜಿನ ಗೊಡವೆಗೆ ಹೋಗದಿರಿ. ಇವತ್ತಿನ ಮಟ್ಟಿಗೆ ಅದು ನಿಮಗೆ ದೊಡ್ಡ ಹಳ್ಳ. ಮನೆ ಮಕ್ಕಳೊಂದಿಗಿಷ್ಟು ಶಾಪಿಂಗು, ಐಸ್‌ಕ್ರೀಮು ಅಂತ ಕಳೆಯೋ ಕಾಲ ಮುದ ನೀಡಲಿದೆ.

ತುಲಾ : ವ್ಯವಹಾರದಲ್ಲಿ ಭಾವುಕರಾಗಬೇಡಿ. ಕಳಕೊಳ್ಳಬೇಕಾಗುತ್ತದೆ. ಇವತ್ತಿನ ಮಟ್ಟಿಗೆ ನೀವೂ ಪಕ್ಕಾ ಪ್ರಾಕ್ಟಿಕಲ್‌ ಆಸಾಮಿಯಾಗುವುದು ನಿಮ್ಮ ಜೇಬಿನ ದೃಷ್ಟಿಯಲ್ಲಿ ಒಳ್ಳೇದು.

ವೃಶ್ಚಿಕ : ಯಾರೋ ಇಬ್ಬರು ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ತೀರಾ ಹುಷಾರಾಗಿರಿ. ಅಪ್ಪಿ ತಪ್ಪಿಯೂ ನಿಮ್ಮ ಜುಟ್ಟನ್ನು ಯಾರ ಕೈಗೂ ಕೊಡಬೇಡಿ.

ಧನಸ್ಸು : ಮನಸ್ಸಿನಲ್ಲಿ ನೆಲೆಗೊಂಡವರು ಹತ್ತಿರಾಗುತ್ತಾರೆ. ಹೇಳಬೇಕು ಅಂತಿರೋದನ್ನ ಹೇಳಿಬಿಡಿ. ಫಲಿತಾಂಶ ಶೇ.90ರಷ್ಟು ನಿಮ್ಮ ಪರವಾಗೇ ಇದೆ.

ಮಕರ : ಬಡ್ತಿ ಸಿಗುವ ಲಕ್ಷಣಗಳು ನಿಚ್ಚಳವಾಗಿವೆ. ಅದರ ಬೆನ್ನಲ್ಲೇ ಆಕಾಶದಂಥ ದೊಡ್ಡ ಭಾರವನ್ನೇ ನಿಮ್ಮ ತಲೆ ಮೇಲೆ ಕಂಪನಿ ಹೊರಿಸಲಿದೆ. ಎಲ್ಲಕ್ಕೂ ಮಾನಸಿಕವಾಗಿ ಸಿದ್ಧರಾಗಿ.

ಕುಂಭ : ನಾಲ್ಕು ಗೋಡೆ ಮಧ್ಯೆ ಹೀಗೇಕೆ ಮುದುರಿ ಬಿದ್ದಿದ್ದೀರಿ ? ಹೊರಹೋಗಿ, ಗೆಳೆಯರು ತಂತಾವೇ ಸೇರುತ್ತಾರೆ. ಮನದಲ್ಲಿ ಮನೆ ಮಾಡಿರುವ ನೋವೂ ಓಡಿಹೋಗುತ್ತದೆ.

ಮೀನ : ಒಂದು ಸಣ್ಣ ವಿಷಯಕ್ಕೆ ಇಡೀ ದಿನ ಹಾಳಾಗಲಿದೆ. ಕಿರಿಕಿರಿ ಬಿಟ್ಟರೆ ನಿಮ್ಮ ಪಾಲಿಗೆ ಇಂದು ಇನ್ನೇನೂ ಇಲ್ಲ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X