• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗದ್ದೆಯ ಹೋಲಿಯಾಟ ತುಳುನಾಡಿನ ಕಂಬಳ

By Staff
|

*ರಾಜು ಮಹತಿ

ಇದು ಕಂಬಳದ ಕಾಲ. ನವಂಬರ್‌ ಕೊನೆಯಲ್ಲಿ ಕಾಣಿಸಿಕೊಳ್ಳುವ ಕಂಬಳ ಉಚ್ಛ್ರಾಯ ಮಟ್ಟ ಮುಟ್ಟುವುದು ಫೆಬ್ರವರಿಯಲ್ಲಿ . ಫೆಬ್ರವರಿ ಕೊನೆಯಾಂದಿಗೆ ಕಂಬಳಕ್ಕೂ ಮಂಗಳ. ವಿಶೇಷವಾಗಿ ಸಿದ್ಧಪಡಿಸಿದ ನೀರು ನಿಲ್ಲಿಸಿದ ಕೆಸರುಗದ್ದೆಯಲ್ಲಿ ಕೋಣಗಳನ್ನು ಓಡಿಸುವುದೇ ಕಂಬಳ.

ಕಂಬಳಕ್ಕೆ ಆರಾಧನೆ ಹಾಗೂ ಆಚರಣೆಯ ಆಯಾಮಗಳೆರಡೂ ಇವೆ. ಕಂಬಳದಲ್ಲಿ ಬಳಸುವ ಕೋಣಗಳನ್ನು ಬೇರ್ಯಾವ ಕೆಲಸಕ್ಕೂ ಬಳಸುವುದಿಲ್ಲ . ವರ್ಷವಿಡೀ ಜತನದಿಂದ ಸಾಕಲ್ಪಡುವ ಈ ಕೋಣಗಳಿಗೆ ರಾಜ ಮರ್ಯಾದೆ ಹಾಗೂ ಕಂಬಳದಲ್ಲಿ ಓಡುವ ನಿರಂತರ ತರಬೇತಿ.

ಕೋಣಗಳಿಗೆ ಉಣಲು ನೀಡುವ ಮೇವು, ಕಂಬಳಕ್ಕೆ ಕರೆದುಕೊಂಡು ಹೋಗುವಾಗ ಸಂಭ್ರಮದ ವಾಲಗ, ಕೋಣಗಳ ಅಲಂಕಾರ... ಮತ್ತೆ ಘೋಷಣೆಗಳ ರಾಜ ಮರ್ಯಾದೆ ಕೋಣ ಓಡಿಸುವವನ ನಡವಳಿಕೆಯಲ್ಲಿ ಕಾಣದು.

ಆರಾಮವಾಗಿ, ತಿಂದು ಕೊಬ್ಬಿದ ಕೋಣ ಓಡಬೇಕಿದ್ದರೆ, ಚರ್ಮ ಸುಲಿದು ಬರುವಂತೆ ಹೊಡೆಯುತ್ತಾರೆ. ಆ ಹೊಡೆತಕ್ಕೆ ಚರ್ಮ ಸುಲಿದು ಕಪ್ಪನೆ ಮಿಂಚುವ ಕೋಣ ರಕ್ತ ವರ್ಣನಾಗುವುದೂ ಉಂಟು. ಮೂಗಿನ ದಾರ ಹಿಡಿದು ಕೋಣಗಳನ್ನು ನಿಯಂತ್ರಿಸುವುದರಿಂದ ಮೂಗು ಹರಿದು ರಕ್ತ ಒಸರುತ್ತದೆ. ಕೋಣಗಳನ್ನು ಕಂಬಳದ ಗದ್ದೆಗೆ ಇಳಿಸುವಾಗಲೂ ಕೋಣಗಳನ್ನು ಬಲವಂತವಾಗಿ ನಿಲ್ಲಿಸಿ ಹೊಡೆಯಲಾಗುತ್ತದೆ. ಓಡುವಾಗ ಮತ್ತು ಗುರಿ ಮುಟ್ಟಿದ ನಂತರವೂ ಕೋಣಗಳಿಗೆ ಹೊಡೆತ ತಪ್ಪಿದ್ದಲ್ಲ . ಪ್ರಾಣಿ ದಯಾಸಂಘದ ಎಚ್ಚರಿಕೆ, ಪರಿಸರವಾದಿ ಮನೇಕಾ ಗಾಂಧಿಯ ಮನವಿ ಯಾವುದೂ ಕಂಬಳದ ಕೋಣಗಳಿಗೆ ನೆಮ್ಮದಿ ತಂದು ಕೊಟ್ಟಿಲ್ಲ .

ಕಂಬಳದಓಟ ಮುಗಿಸಿ ಗದ್ದೆ ಬದು ಏರಿದ ನಂತರ ಮತ್ತೆ ಕೋಣಕ್ಕೆ ಮೊದಲಿನ ಪ್ರೀತಿ, ವಾತ್ಸಲ್ಯ ಹರಿಯುತ್ತದೆ. ಆದರೆ ರಕ್ತ ಸುರಿವ ಮೈಯ ನೋವಿನ ನಡುವೆ ಇದ್ಯಾವುದೂ ಕೋಣಕ್ಕೆ ನೆಮ್ಮದಿ ನೀಡುವುದು ಸಾಧ್ಯವಿಲ್ಲ.

ಕೊಟ್ಟಿಗೆಯಲ್ಲಿ ಮುದ್ದು , ಬಯಲಲ್ಲಿ ಗುದ್ದು : ವರ್ಷವಿಡೀ ಮಕ್ಕಳಂತೆ ಕೋಣಗಳನ್ನು ಸಾಕುತ್ತೇವೆ. ಅವುಗಳಿಗೆ ಏಟು ಬೀಳುವುದು ಕಂಬಳದ ಗದ್ದೆಯಲ್ಲಿ ಮಾತ್ರ. ಕೋಣಗಳನ್ನು ಓಟಕ್ಕೆ ತಯಾರು ಮಾಡಬೇಕಿದ್ದರೆ ಈ ಹೊಡೆತ ಅನಿವಾರ್ಯ ಅನ್ನುವುದು ಬೆಳ್ಳೂರು ಕೊಳತ್ತ ಮಜಲಿನ ಚಿತ್ತರಂಜನ ರೈ . ಅವರು ಕಂಬಳದ ವ್ಯವಸ್ಥಾಪಕರಲ್ಲೊಬ್ಬರು.

ಗುರಿ ತಲುಪಿದ ನಂತರವೂ ಕೋಣಗಳಿಗೆ ಹೊಡೆಯುವುದನ್ನು ದಕ್ಷಿಣಕನ್ನಡ ಕಂಬಳ ಸಮಿತಿ ವಿರೋಧಿಸುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ಈ ಉನ್ನತ ಸಮಿತಿಗಿದೆ. ಆಟದ ನೀತಿ ನಿಯಮ ಗಳನ್ನು ರೂಪಿಸುವ ಜೊತೆಗೆ ವಿವಿಧ ಕಂಬಳಗಳ ದಿನಾಂಕವನ್ನು ಗೊತ್ತು ಮಾಡುವ ಕೆಲಸವೂ ಸಮಿತಿಗೆ ಸೇರಿದ್ದೆ .

ದಕ್ಷಿಣಕನ್ನಡ ಜಿಲ್ಲೆಯ ರೈತರ ಮನರಂಜನೆಯ ಜಾನಪದ ಕ್ರೀಡೆ ಎಂದು ಬಣ್ಣಿಸುವ ಕಂಬಳಕ್ಕೆ ಹೊರರಾಜ್ಯಗಳಲ್ಲೂ ಜನಪ್ರಿಯತೆಯುಂಟು. ಕಂಬಳ ಸೀಸನ್‌ನಲ್ಲಿ ವಿದೇಶಿಯರೂ ಆಟ ನೋಡಲು ಬರುವುದುಂಟು. ಕೋಣಗಳು ಗದ್ದೆಯಲ್ಲಿ ನೀರು ಚಿಮ್ಮಸಿಕೊಂಡು ಓಡುವುದನ್ನು ಅತಿ ಎತ್ತರ ನೀರು ಚಿಮ್ಮಿಸಿಕೊಂಡುವ ಓಡುವ ಕೋಣಗಳ ಜೋಡಿ ಫೋಟೋಕ್ಕಾಗಿ ಪರದಾಡುವ ವಿದೇಶಿಯರನ್ನು ನೋಡಲೆಂದೇ ಹಳ್ಳಿ ಜನ ಕಂಬಳದ ಸುತ್ತ ನೆರೆಯುವುದುಂಟು. ಕಂಬಳದ ವೀಕ್ಷಕ ವಿವರಣೆ(ಕಾಮೆಂಟರಿ) ಗೂ ತನ್ನದೇ ಆದ ವಿಶೇಷ ಧಾಟಿಯುಂಟು.

ಸ್ವಾತಂತ್ರ್ಯ ಪೂರ್ವದ ಎಲ್ಲಾ ರಾಜವಂಶಗಳಿಂದಲೂ ಮನ್ನಣೆ ಪಡೆದಿರುವುದು ಕಂಬಳದ ಅಗ್ಗಳಿಕೆ. ಕಂಬಳಗದ್ದೆಯ ನಿರ್ವಹಣೆಗಾಗಿ ದತ್ತಿ ನೀಡಿದ ದಾಖಲೆಗಳೂ ಇವೆ. 1974 ರವರೆಗೆ ತುಳುನಾಡಿನಲ್ಲಿ ಕಂಬಳಗಳು ವೈಭವದಿಂದ ನಡೆಯುತ್ತಿದ್ದವು. ಉಳುವವನಿಗೆ ಭೂಮಿ ಕಾನೂನು ಜಾರಿಗೆ ಬಂದಾಗ ಭೂಮಿಯ ಒಡೆತನ ಹೊಂದಿದ್ದವರು ಒಡೆತನ ಕಳೆದುಕೊಂಡು ಕಂಬಳ ಏರ್ಪಡಿಸಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಲಾಗದೆ ಕೈ ಬಿಟ್ಟರು. ಪರಿಣಾಮವಾಗಿ ಕಂಬಳಗಳು ಹಿನ್ನಡೆ ಕಂಡವು.

ಮರುಹುಟ್ಟು ಪಡೆದ ಕಂಬಳ : ಭೂಮಿಯ ಒಡೆತನ ಕಳೆದುಕೊಂಡು ದೂರದೂರಿಗೆ ವಲಸೆ ಹೋಗಿ ಉದ್ಯಮದಲ್ಲಿ ಗಟ್ಟಿ ಕುಳವಾಗಿ ತುಳುನಾಡಿಗೆ ಮರಳಿದವರು ಕಂಬಳಗಳಿಗೆ ಮರಳಿ ಜೀವ ತುಂಬಿದರು. ಕಳೆದ ಒಂದೂವರೆ ದಶಕದಿಂದೀಚೆಗೆ ಕಂಬಳಗಳು ಮರು ಹುಟ್ಟು ಕಂಡಿವೆ. ಜಿಲ್ಲೆಯಲ್ಲೀಗ ಕಂಬಳ ಸಮಿತಿಯಿಂದ ದಿನಾಂಕ ನಿಗದಿಯಾಗಿ ನಡೆಸಲ್ಪಡುವ 13 ಕಂಬಳಗಳಿವೆ. ಇದಲ್ಲದೆ ಧಾರ್ಮಿಕ ಆಚರಣೆಯ ಕಂಬಳಗಳು ಬೇರೆಯೇ ಇವೆ. ಆದರೆ, ಕಂಬಳ ಸಮಿತಿಯಿಂದ ದಿನಾಂಕ ನಿಗದಿಯಾಗುವ ಕಂಬಳಗಳ ಸೊಗಸೇ ಬೇರೆ. ಅವುಗಳು ಸ್ಪರ್ಧಾ ಮನೋಭಾವದವು.

ಕಂಬಳದ ಕೋಣಗಳನ್ನು ಸಾಕುವುದು ದುಬಾರಿ ಕೆಲಸ. ಕಂಬಳದ ಒಂದು ಜೊತೆ ಕೋಣಗಳು ಕಡಿಮೆಯೆಂದರೂ ಒಂದೂವರೆ ಲಕ್ಷ ರುಪಾಯಿ ಬೆಲೆ ಬಾಳುತ್ತವೆ. ಅವುಗಳ ಸಾಕಾಣಿಕೆ ಮತ್ತು ತರಬೇತಿಗೆ ಅನುಭವಿ ಕೆಲಸಗಾರರೇ ಆಗಬೇಕು. ಕಂಬಳದಲ್ಲಿ ಗೆದ್ದರೆ ಆ ಮನೆತನದ ಪ್ರತಿಷ್ಠೆ ಹೆಚ್ಚುತ್ತದೆ.

ಹೆಚ್ಚಾಗಿ ಕಂಬಳದ ಕೋಣ ಸಾಕುವವರು ತುಳುನಾಡಿನ ಬಂಟರ ಮನೆತನದವರಾದ್ದರಿಂದ ಮನೆತನದ ಪ್ರತಿಷ್ಠೆಯನ್ನು ಕಂಬಳ ಕೋಣ ಸಾಕುವ ಮನೆ ಎಂಬ ಹೆಗ್ಗಳಿಕೆಯಾಂದಿಗೇ ಕರೆಯುವುದುಂಟು. ಆ ಮನೆಯ ಹುಡುಗನಿಗೆ ಹೆಣ್ಣುಕೊಡುವುದೆಂದರೆ ಹೆಣ್ಣು ಹೆತ್ತವರಿಗೆ ಹೆಮ್ಮೆ. ಹೆಚ್ಚೆಂದರೆ ವರ್ಷಕ್ಕೊಂದು ಚಿನ್ನದ ಪದಕದ ಹೊರತು ಬೇರೆ ಯಾವ ಆದಾಯವನ್ನೂ ತಾರದ ಕೊಬ್ಬಿದ ಕೋಣಗಳು ಇಷ್ಟು ಕೀರ್ತಿಯನ್ನಾದರೂ ಮನೆಗೆ ತಾರದಿದ್ದರೆ ಅದು ನ್ಯಾಯವೇ ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more