ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಭವಿಷ್ಯ

By Staff
|
Google Oneindia Kannada News

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಹೊಸ ವರ್ಷದ ಆರಂಭದಲ್ಲಿ ವೃತ್ತಿ ಖುಷಿ ಕೊಡುವುದು ನಿಜವಾದರೂ, ಮಾನಸಿಕವಾಗಿ ಚಿಕ್ಕ ಆಘಾತ ನಿಮ್ಮ ಪಾಲಿಗಿದೆ.

ವೃಷಭ : ಏನ ಮಾಡಿದರೇನು ಭವ ಹಿಂಗದು ಎಂದು ಸುಖಾ ಸುಮ್ಮನೆ ಕೂತರೆ ಏನೂ ಪ್ರಯೋಜನವಿಲ್ಲ . ಬದಲಿಗೆ ಈ ದಿನವೇ ದೀಕ್ಷೆ ವಹಿಸಿ. ಅಂದುಕೊಂಡಿದ್ದು ಈ ವರ್ಷವೇ ಕೈಗೂಡುತ್ತದೆ.

ಮಿಥುನ : ನೀವು ಗಟ್ಟಿಗರು. ಪರಿಸ್ಥಿತಿಗಳೇ ಹಾಗಿವೆ. ಎದುರಾಗಿರುವ ತೊಡಕುಗಳನ್ನು ದಾಟುವ ಛಾತಿ ನಿಮಗಿದೆ. ಆ ನಿಟ್ಟಿನಲ್ಲಿ ಹಿತೈಷಿಗಳು ಜೊತೆಗಿರುತ್ತಾರೆ.

ಕಟಕ : ಕೋರ್ಟ್‌ ಕಚೇರಿ ವ್ಯವಹಾರಗಳಲ್ಲಿ ಈವತ್ತು ಜಯ ಕಟ್ಟಿಟ್ಟ ಬುತ್ತಿ . ಹೊಸ ವರ್ಷದಲ್ಲಿ ಹಳೆಯ ತಗಾದೆ ನಿಮಗೆ ಅನುಕೂಲಕರವಾಗಿ ಬಗೆಹರಿಯಲಿದೆ.

ಸಿಂಹ : ಬಿಡುವು ಅಪರೂಪಕ್ಕೆ ಸಿಕ್ಕಿದೆ. ಮನೆ ಮಕ್ಕಳೊಂದಿಗೆ ಅಡ್ಡಾಡುವ ಈ ಸಂಜೆ ನಿಮ್ಮ ಪಾಲಿಗೆ ಆಹ್ಲಾದಕರ ಅನ್ನಿಸಲಿದೆ.

ಕನ್ಯಾ : ಹೊಸ ರುಚಿ ನಿಮ್ಮ ನಾಲಗೆ ತಣಿಸಲಿದೆ. ವಿದ್ಯಾರಂಗದಲ್ಲಿ ಯಶಸ್ಸಿದೆ. ಈಗ ನೀವು ಮಾಡಬೇಕಿರುವುದು ಸಣ್ಣ ಪ್ರಯತ್ನ ಮಾತ್ರ.

ತುಲಾ : ಸೃಜನಶೀಲ ಕೆಲಸಗಳಲ್ಲಿ ನೀವೇ ಮುಂದು. ಮಂಕು ಕವಿದಿರುವ ಪ್ರತಿಭೆಗೆ ಹೊಳಪು ನೀಡುವ ಹೊಸ ವರ್ಷ ಬಂದಿದೆ. ಹೊಸ ಹುರುಪಿಗೆ ಧ್ಯಾನ ಮಾಡಿ.

ವೃಶ್ಚಿಕ : ಮಾಡಬೇಕೆಂದು ಕೊಂಡಿರುವ ಕೆಲಸವನ್ನು ಮತ್ತೆ ಮುಂದೂಡುವುದು ಬೇಡ. ಫಲಾಫಲ ನಿರೀಕ್ಷಿಸದೆ ಮುಂದಡಿಯಿಡಿ. ಕನಿಷ್ಠ ಇದರಿಂದ ನಿಮ್ಮ ಮನಸ್ಸಾದರೂ ಹಗುರಾಗಲಿದೆ.

ಧನಸ್ಸು : ಆರೋಗ್ಯ ಏರುಪೇರು ಎಂದು ಚಿಂತಿಸುವುದು ಬೇಡ. ವಾತಾವರಣ ನಿಮಗೆ ಒಗ್ಗುತ್ತಿಲ್ಲ ಅಷ್ಟೇ. ಆದ್ದರಿಂದ ಹೊಸ ವರ್ಷದ ಮೊದಲ ದಿನವನ್ನು ಹಾಳು ಮಾಡಿಕೊಳ್ಳಬೇಡಿ.

ಮಕರ : ಹಣಕಾಸಿನ ಚಿಂತೆ ಕಾಡುತ್ತಿದೆ. ಕುಲದೈವವನ್ನು ಪ್ರಾರ್ಥಿಸಿ. ಕಲ್ಲಾಗು ಕಷ್ಟದಡಿ ಎನ್ನುವ ಕವಿ ವಾಣಿಯನ್ನು ನೆನಪಿಸಿಕೊಳ್ಳಿ.

ಕುಂಭ : ಸ್ನೇಹದಲ್ಲಿ ವ್ಯವಹಾರ ಬೆರೆಸುತ್ತಿದ್ದೀರಿ. ಗೆಳೆಯರ ಔದಾರ್ಯವನ್ನು ಅರ್ಥ ಮಾಡಿಕೊಳ್ಳಿ. ಅವರ ಕಷ್ಟ ಕಾಲದಲ್ಲಿ ಜೊತೆಗಿರುವುದು ನಿಮ್ಮ ಕರ್ತವ್ಯ.

ಮೀನ : ಹೊಸ ವರ್ಷ ನಿಮ್ಮ ಪರವಾಗಿಯೇ ಇದೆ. ಅದರ ಸೂಚನೆಗಳು ಇಂದೇ ನಿಮಗೆ ದೊರೆಯಲಿವೆ. ವೃತ್ತಿಯಲ್ಲಿ ಯಶಸ್ಸು ಗಳಿಸುತ್ತೀರಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X