ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವು ಕಂಡಿರಾ! ಸಂಗೀತದಲೆಗಳ ಮೇಲೆ ಜೀವಗೊಳ್ಳುವ ಕ್ರಿಸ್‌ಮಸ್‌ ಲೀಲೆ

By * ಶ್ಯಾಂ ಭಾಟಿಯಾ
|
Google Oneindia Kannada News

Merry Christmas
ಲಂಡನ್‌ : ಕ್ರಿಸ್‌ಮಸ್‌ ಎಂದರೆ ಏನು? ಜೀಸಸ್‌ ಜಯಂತಿ, ಸಾಂತಾಕ್ಲಾಸ್‌ ತಾತ, ಕ್ರಿಶ್ಚಿಯನ್ನರ ದೊಡ್ಡ ಹಬ್ಬ ಮುಂತಾಗಿ ಲೋಕಾಭಿನ್ನರುಚಿಯಂತೆ ಉತ್ತರಗಳನ್ನು ಪೋಣಿಸುವುದು ಸುಲಭ. ಇಲ್ಲಿ ರುವ ಭಾರತೀಯ ಮೂಲದ ಪ್ರಮುಖ ಕವಿಯಾಬ್ಬರಿಗೆ ಕ್ರಿಸ್‌ಮಸ್‌ ಕಲ್ಪನೆಯೇ ಬೇರೆಯದ್ದು. ಅವರಿಗೆ ಕ್ರಿಸ್‌ಮಸ್‌ ಎಂದರೆ, ಕಾವ್ಯಾತ್ಮಕ ಪ್ರತಿಮೆ, ಕಲಾವಿದನ ಸೃಜನಶೀಲತೆಯ ಫಲಿತ, ಕನಸುಗಳ ಮೊತ್ತ .

ಕ್ರಿಸ್‌ಮಸ್‌ ಕುರಿತು ವಿಭಿನ್ನವಾಗಿ ಚಿಂತಿಸಿರುವ ಲಂಡನ್ನಿನ ಕವಿ ರೋಷನ್‌ ಡಗ್‌. ಈತನ ವಾಸ ಕವಿಗಳ ನಿತ್ಯ ಹರಿದ್ವರ್ಣ ವನವೆನಿಸಿದ ಬ್ರಿಟನ್ನಿನ ಎರಡನೆಯ ದೊಡ್ಡ ನಗರ ಬರ್ಮಿಂಗ್‌ಹ್ಯಾಂನಲ್ಲಿ . ಪೂರ್ವಜರು ಭಾರತದ ಪಂಜಾಬಕ್ಕೆ ಸೇರಿದವರು.

ರೋಷನ್‌ ಹೇಳುವಂತೆ - ಕ್ರಿಸ್‌ಮಸ್‌ ಕ್ರೆೃಸ್ತ ಧರ್ಮೀಯರಿಗೆ ಮಾತ್ರ ಸೀಮಿತವಲ್ಲ . ಉಳಿದಂತೆ ಹಿಂದೂಗಳು, ಸಿಖ್ಖರು, ಮುಸಲ್ಮಾನರು ಕೂಡ ಕ್ರಿಸ್‌ಮಸ್‌ ಸಂಭ್ರಮದಲ್ಲಿ ಭಾಗಿಗಳಾಗುತ್ತಾರೆ. ಕ್ರಿಸ್‌ಮಸ್‌ ಮರಗಳನ್ನು ಮನೆ ಮುಂದೆ ಇಡುತ್ತಾರೆ. ಕ್ರಿಸ್ತನ ಹುಟ್ಟಿನ ಕುರಿತ ಕಥೆಯನ್ನು ಹೇಳಿಕೊಂಡು ಖುಷಿಯಾಗುತ್ತಾರೆ. ಒಟ್ಟಿನಲ್ಲಿ ಕ್ರಿಸ್‌ಮಸ್‌ ಎನ್ನುವುದು ನೀವು ಏನನ್ನು ಅಂದುಕೊಳ್ಳುತ್ತೀರೋ ಅದರ ಫಲಿತ.

ಬರ್ಮಿಂಗ್‌ ಹ್ಯಾಂ ಪೋಸ್ಟ್‌ ಪತ್ರಿಕೆಯಲ್ಲಿ ರೋಷನ್‌ ತಮ್ಮ ಕ್ರಿಸ್‌ಮಸ್‌ ಯೋಚನೆಗಳನ್ನು ಹಂಚಿಕೊಂಡಿದ್ದಾರೆ. ಅವರು ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆಗಳಿಗಿಂತ ಭಿನ್ನವಾದ ಆಚರಣೆಗಳ ಕುರಿತು ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಾರೆ. ಕ್ರಿಸ್‌ಮಸ್‌ ಟ್ರೀ ಕೂಡಾ ಸಂಪ್ರದಾಯವಾಗಿ ಬೆಳೆದುಬಂದಿದೆಯೇ ಹೊರತು, ಮೂಲ ಕ್ರಿಸ್‌ಮಸ್‌ಗೂ ಅದಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ. ಅವರ ಪ್ರಕಾರ ಕ್ರಿಸ್‌ಮಸ್‌ ಟ್ರೀ ಸಹಜತೆಯ, ಸಮೃದ್ಧತೆಯ ಸಂಕೇತ. ಪ್ರಕೃತಿಯ ಪ್ರತೀಕ.

ರೋಷನ್‌ರ ಮತ್ತೊಂದು ಹೊಳಹು ನಾರ್ಡಿಕ್‌ ಗಾಡ್‌ ವೋಡೆನ್‌. ಆತ ಸೂರ್ಯ. ಬದುಕನ್ನು ನೀಡುವವ. ಸ್ಫೂರ್ತಿದಾಯಕ ಬದುಕಿಗೆ ಕಾರಣ ಎಂದು ಬಣ್ಣಿಸುತ್ತಾರೆ. ಫಾದರ್‌ ಕ್ರಿಸ್‌ಮಸ್‌ ಬಗ್ಗೆ ಹೇಳುವುದಾದರೆ, ಆತ ದೇವರಿಗಿಂತ ಮುನ್ನಿನ ಮಾನವೀಯತೆಯ ಪ್ರತಿಮೆ. ಆತ ಬದುಕು, ಆರೋಗ್ಯ, ಅವ್ಯಾಜ ಪ್ರೀತಿ, ಮಕ್ಕಳನ್ನು ಕರುಣಿಸುವವ.

ಕ್ರಿಸ್‌ಮಸ್‌ಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಆಯಾಮಗಳಿವೆ ಎಂದು ಬಣ್ಣಿಸುವ ರೋಷನ್‌ ಈಚಿನ ದಿನಗಳಲ್ಲಿ ಕ್ರಿಸ್‌ಮಸ್‌ ವಾಣಿಜ್ಯೀಕರಣಗೊಳ್ಳುತ್ತಿದೆ ಎಂದು ವಿಷಾದಿಸುತ್ತಾರೆ. ಅವರಿಗೆ ಕ್ರಿಸ್‌ಮಸ್‌ ಎಂದರೆ ಕಾಮನಬಿಲ್ಲಲ್ಲ . ರಂಗಿನ ಹಬ್ಬವಲ್ಲ . ಮಿಗಿಲಾಗಿ ಕುಡಿದು ಕುಣಿವ ಮೋಜಿನ ಹಬ್ಬವೂ ಅಲ್ಲ . ಬದಲಿಗೆ ಕ್ರಿಸ್‌ಮಸ್‌ ಸಂತೋಷದ ಹಬ್ಬ , ಸ್ಫೂರ್ತಿದಾಯಕ ಹಬ್ಬ ಎಂದು ಅವರು ವಿವರಿಸುತ್ತಾರೆ. ಆದುದರಿಂದಲೇ ಅವರ ಕಣ್ಣಿಗೆ ಕ್ರಿಸ್‌ಮಸ್‌ನಲ್ಲಿ ಸಂಗೀತದ ಹಾಗೂ ಕವಿತೆಯ ಲಯ ಕಾಣುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X