• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೀರಪ್ಪನ್‌ ಶಿಕಾರಿ : ಕೊಯಮತ್ತೂರಿಗೆ ಬಂದ ಬಿಎಸ್‌ಎಫ್‌ ತಂಡ

By Staff
|

ಕೊಯಮತ್ತೂರು : ರಾಜ್‌ಕುಮಾರ್‌ ಬಿಡುಗಡೆ ನಂತರ ಚುರುಕಾಗಿರುವ ವೀರಪ್ಪನ್‌ ಶಿಕಾರಿಗೆ ಸೋಮವಾರ ಬಿಎಸ್‌ಎಫ್‌ ಬಲವೂ ದೊರಕಿದೆ. 184 ಮಂದಿ ಬಿಎಸ್‌ಎಫ್‌ ಜವಾನರನ್ನೊಳಗೊಂಡ ಪ್ರಥಮ ತಂಡ ಮಣಿಪುರದಿಂದ ವಿಶೇಷ ವಿಮಾನದಲ್ಲಿ ಕೊಯಮತ್ತೂರು ಹೊರವಲಯದಲ್ಲಿರುವ ಸೂಲೂರು ವಾಯುಪಡೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.

ಈ ವಿಷಯವನ್ನು ಉನ್ನತ ಪೊಲೀಸ್‌ ವಲಯಗಳು ದೃಢಪಡಿಸಿವೆ. ಕರ್ನಾಟಕ - ತಮಿಳುನಾಡು ವಿಶೇಷ ಕಾರ್ಯಪಡೆಗೆ ನೆರವಾಗಲು ಬಂದಿರುವ ಬಿಎಸ್‌ಎಫ್‌ ತಂಡ ಮಂಗಳವಾರ ಕಾಡಿಗೆ ತೆರಳುವ ಸಾಧ್ಯತೆ ಇದೆ. ಈಗಾಗಲೇ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಶೇಷ ಕಾರ್ಯಪಡೆಗೆ ಕೇಂದ್ರ ಸರಕಾರ ಮೂರು ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಒದಗಿಸಿದೆ.

ದೆಹಲಿಯಿಂದ ಈ ಶಸ್ತ್ರಾಸ್ತ್ರಗಳು ಕೊಯಮತ್ತೂರಿಗೆ ಬಂದಿವೆ. ರಾತ್ರಿಯ ವೇಳೆಯೂ ದಂತಚೋರನ ಕಾರ್ಯಚಟುವಟಿಕೆಯನ್ನು ಗಮನಿಸಬಹುದಾದ ಅತ್ಯಾಧುನಿಕ ಬೈನಾಕುಲರ್‌ಗಳನ್ನೂ ಕೇಂದ್ರ ಕಳಿಸಿದೆ ಎಂದು ತಿಳಿದುಬಂದಿದೆ. ಈ ಎಲ್ಲ ಶಸ್ತ್ರಾಸ್ತ್ರಗಳ ಹಾಗೂ ಆಧುನಿಕ ಉಪಕರಣಗಳನ್ನು ಬಳಸುವ ಬಿಎಸ್‌ಎಫ್‌ ಹಾಗೂ ವಿಶೇಷ ಕಾರ್ಯಪಡೆ ಸಿಬ್ಬಂದಿ ನರಹಂತಕ ವೀರಪ್ಪನ್‌ನನ್ನು ಮಟ್ಟಹಾಕುತ್ತವೆ ಎಂಬ ವಿಶ್ವಾಸವನ್ನು ಪೊಲೀಸ್‌ ಉನ್ನತಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ವಾರ್ತಾ ಸಂಚಯ

ಮುಖಪುಟ / ವೀರಪ್ಪನ್‌ ಶಿಕಾರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more