• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಷ್ಕರಗಳ ಸಂತೆಯಲ್ಲಿ ಬೇಡಿಕೆಗಳ ನಿತ್ಯೋತ್ಸವ !

By Staff
|

ಬೆಂಗಳೂರು : ಬಿಳಿಯರು ದೇಶಬಿಟ್ಟು ತೊಲಗುವವರೆಗೆ ಭಾರತಕ್ಕೆ ನೆಮ್ಮದಿಯಿಲ್ಲ ಎನ್ನುವ ಗಾಂಧೀಜಿಯ ತಪಸ್ಸಿನಿಂದ ಮೊದಲುಗೊಂಡು , ಸಂಬಳ ಹೆಚ್ಚಿಸುವವರೆಗೆ ಊರಿನ ಕಸ ಗುಡಿಸುವುದಿಲ್ಲ ಎಂದು ಹಠ ಹಿಡಿದ ಪೌರ ಕಾರ್ಮಿಕರ ನಿಲುವಿನವರೆಗೆ ಮುಷ್ಕರದ ಉದ್ದೇಶ, ವಿಧಿ ವಿಧಾನಗಳು ನಾನಾ ಥರ . ಇನ್ನು ಮುಂದೆ ಮಕ್ಕಳು ಅಳುವುದಿಲ್ಲ, ಆಕಳು ಹಾಲು ಕರೆಯುವುದಿಲ್ಲ, ಲಂಚ ಕೊಡುವವರೆಗೆ ಪೆನ್ನು ಬರೆಯುವುದಿಲ್ಲ ಎಂದು ಮುಂತಾಗಿ ಮುಷ್ಕರ ಹೂಡಿದರೆ ನಮ್ಮ ಸಮಾಜದ ಪಯಣ ಯಾವ ಊರಿನತ್ತ ಹೊರಟಿದೆ ಎಂದು ನೀವು ತಲೆ ಕೆರೆದುಕೊಳ್ಳಬಹುದು. ಅದಕ್ಕೆ ಮುಂಚೆ ಸದ್ಯ ಕರ್ನಾಟಕ-ಇಂಡಿಯಾದಲ್ಲಿ ಯಾರ್ಯಾರು ಹರತಾಳ ಮಾಡುತ್ತಿದ್ದಾರೆ ಎನ್ನುವುದರ ಕುರಿತು ಒಂದು ಪಟ್ಟಿ ನಿಮ್ಮ ಮುಂದಿಡುತ್ತಿದ್ದೇವೆ. ಓದುವಂಥವರಾಗಿ .....

  1. ಅಂಚೆ ಇಲಾಖೆಯ ನೌಕರರು ರಾಷ್ಟ್ರಾದ್ಯಂತ ನಡೆಸುತ್ತಿರುವ ಮುಷ್ಕರ 8ನೇ ದಿನಕ್ಕೆ ಕಾಲಿಟ್ಟಿದೆ. ದೇಶದ ಸಂವಹನ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪೆನ್ಷನ್‌ ಹಣ ದೊರಕದೆ ಹಳ್ಳಿಗಳ ವೃದ್ಧರು ಕಂಗೆಟ್ಟಿದ್ದಾರೆ. ರಾಜ್ಯಕ್ಕೂ ಈ ಮುಷ್ಕರದ ಬಿಸಿ ತಟ್ಟಿದೆ ಎಂದು ಮತ್ತೆ ಹೇಳುವ ಅಗತ್ಯಇಲ್ಲ.
  2. ಸಂಸತ್ತಿನಲ್ಲಿ ಪ್ರಧಾನಿ ವಾಜಪೇಯಿ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದವರು, ಕಲಾಪ ನಡೆಯಲೂ ಅವಕಾಶ ನೀಡದೆ ಧರಣಿ ನಡೆಸಿ, ಕೋಲಾಹಲ ಉಂಟು ಮಾಡಿದ್ದಾರೆ.
  3. ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾಕರು ಹಾಗೂ ಅಸಹಾಯಕ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರತಿಭಟಿಸಿ ಸೋಮವಾರ ದಲಿತ ಸಂಘರ್ಷ ಸಮಿತಿ ಮೈಸೂರು ಬ್ಯಾಂಕ್‌ ವೃತ್ತದಿಂದ ವಿಧಾನಸೌಧದವರೆಗೆ ಬೃಹತ್‌ ರ್ಯಾಲಿ ನಡೆಸಿದೆ. ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಿದೆ.
  4. ಕೇಂದ್ರ ಸಂಸತ್ತಿನಲ್ಲಿ ಮಂಡಿಸಲು ನಿರ್ಧರಿಸಿರುವ ಉದ್ದೇಶಿತ ವಿದ್ಯುತ್‌ ಮಸೂದೆ -2000 ವಿರೋಧಿಸಿ ವಿದ್ಯುತ್‌ ಮಂಡಳಿ ನೌಕರರು ಮಂಗಳವಾರ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ ನಡೆಸುತ್ತಿದ್ದಾರೆ.
  5. ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಡಿ.18ರಂದು ಬೆಂಗಳೂರು ರೈಲು ನಿಲ್ದಾಣದಿಂದ ವಿಧಾನಸೌಧದವರೆಗೆ ಅಂಗನವಾಡಿ ಕಾರ್ಯಕರ್ತೆಯರು ವಿಧಾನಸೌಧ ಚಲೋ ನಡೆಸುತ್ತಿದ್ದಾರೆ.
  6. ಅಡಿಕೆ, ತೆಂಗು, ರಬ್ಬರ್‌, ಚಹಾ ಮತ್ತು ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ, ಮಂಗಳೂರಿನಲ್ಲಿ ಜನವರಿ 12ರಂದು ರಾಜ್ಯ ಮಟ್ಟದ ರ್ಯಾಲಿ ನಡೆಸುವುದಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ ತಿಳಿಸಿದೆ.
  7. ಪ್ಲಾಂಟೇಷನ್‌ ಉದ್ದಿಮೆ ಉಳಿಸಿ, ತೋಟದ ಕಾರ್ಮಿಕರ ರಕ್ಷಿಸಿ ಎಂಬ ಬೇಡಿಕೆ ಮುಂದಿಟ್ಟು ಕರ್ನಾಟಕ ತೋಟ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಚಿಕ್ಕಮಗಳೂರಿನಲ್ಲಿ ಸೋಮವಾರ ಚಳವಳಿ ನಡೆಸಿದೆ.
  8. ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಆಗುತ್ತಿರುವ ವಿಳಂಬವನ್ನು ಖಂಡಿಸಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಕಾರ್ಯಕರ್ತೆಯರು ಸೋಮವಾರ ನವದೆಹಲಿಯ ಜಂತರ್‌ ಮಂತರ್‌ ಬಳಿ ಪ್ರತಿಭಟನೆ ನಡೆಸಿದ್ದಾರೆ.
  9. ಮಸೀದಿ ಮೇಲೆ ದಾಳಿ ಮತ್ತು ಒಬ್ಬನ ಹತ್ಯೆ ವಿರೋಧಿಸಿ ತಮಿಳುನಾಡು ಮುಸ್ಲಿಂ ಮುನ್ನೇತ್ರ ಕಳಗಂ ನೀಡಿದ್ದ ಜಿಲ್ಲಾ ಬಂದ್‌ ಕರೆಗೆ ಸೋಮವಾರ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿ ವ್ಯವಹಾರ ಸ್ತಬ್ಧವಾಗಿತ್ತು.
  10. ಕೇಂದ್ರ ಸರ್ಕಾರದ ಜಾಗತೀಕರಣ ನೀತಿಯನ್ನು ವಿರೋಧಿಸಿ ಕರ್ನಾಟಕ, ಕೇರಳ, ತಮಿಳುನಾಡು ಚಹಾ ಉತ್ಪಾದಕರು ಮಂಗಳವಾರ ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ.

ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ, ಈ ಮುಷ್ಕರಗಳ ಸಂಖ್ಯೆ, ಶತಕ, ಸಹಸ್ರ ದಾಟಿದರೂ ಅಚ್ಚರಿಯಿಲ್ಲ. ಇದಕ್ಕೆ ಕೊನೆ ಎಂದು ಎಂಬ ಪ್ರಶ್ನೆಗೆ ಉತ್ತರ ನಿಮ್ಮ ಬಳಿ ಇದ್ದರೆ ತಿಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more