ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯ್ಯಪ್ಪ ಭಕ್ತರ ಜನಗಣತಿ: ಈವರೆಗೆ 11 ಲಕ್ಷ ಭಕ್ತರು

By Staff
|
Google Oneindia Kannada News

ಶಬರಿಮಲೆ : ಶಬರಿಗಿರಿಯ ಅಯ್ಯಪ್ಪನ ಯಾತ್ರೆ ಆರಂಭವಾದ ದಿನದಿಂದ ಡಿಸೆಂಬರ್‌ 6ನೇ ತಾರೀಖಿನವರೆಗೆ ಕ್ಷೇತ್ರಕ್ಕೆ ಭೇಟಿ ನೀಡಿರುವ ಭಕ್ತರ ಸಂಖ್ಯೆ ಎಷ್ಟು ಗೊತ್ತೆ ?ಒಂದೆರಡು ಸಾವಿರವಲ್ಲ, ಹತ್ತಾರು ಸಾವಿರವೂ ಅಲ್ಲ. ಸುಮಾರು 11 ಲಕ್ಷ ಎನ್ನುತ್ತದೆ ಅರಣ್ಯ ಇಲಾಖೆಯ ಸಮೀಕ್ಷೆ.

ಶಬರಿಗಿರಿಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಜನರಲ್ಲಿ ದೇವರ ಬಗ್ಗೆ ಭಕ್ತಿ ಹೆಚ್ಚುತ್ತಿದೆ ಎಂಬುದನ್ನು ಈ ಸಮೀಕ್ಷೆ ಶ್ರುತಪಡಿಸಿದೆ. ಡಿಸೆಂಬರ್‌ 4ರಂದು ಗಿರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸಿದ್ದರು ಎಂದೂ ಸಮೀಕ್ಷಾ ವರದಿ ತಿಳಿಸಿದೆ. ಮಕರ ಜ್ಯೋತಿ ಪ್ರಕಟವಾಗುವವರೆಗೂ ಭಕ್ತರು ಇಲ್ಲಿಗೆ ಆಗಮಿಸುವರಿದ್ದು, ಭಕ್ತಾದಿಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ.

ಈವರೆಗೆ ಅಯ್ಯಪ್ಪನ ದರ್ಶನಕ್ಕೆ ಬಂದಿರುವ 11ಕ್ಕೂ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳ ಪೈಕಿ 9 ಲಕ್ಷ ಮಂದಿ ಪುರುಷರು. ಒಂದೂವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿದ್ದಾರೆ. ಸನ್ನಿಧಾನದಲ್ಲಿರುವ ಅರಣ್ಯ ಇಲಾಖೆಯ ಕಚೇರಿಯ ಎದುರು ಮತ್ತು ಪಾಂಡಿತ್ತಾವಳ ರಸ್ತೆಯಲ್ಲಿ ಸುಮಾರು 20 ಮಂದಿ ಗಿರಿಗೆ ಬರುವ ಭಕ್ತರ ಜನಗಣತಿ ಮಾಡುತ್ತಿದ್ದಾರೆ.

ಜನಗಣತಿಗೆ ಹೆಚ್ಚು ಅರ್ಥ ಕೊಡುವ ದೃಷ್ಟಿಯಿಂದ ಯಾವ ರಾಜ್ಯದಿಂದ ಎಷ್ಟು ಭಕ್ತರು ಅಯ್ಯಪ್ಪ ದರುಶನ ಮಾಡಿದರು ಎಂಬ ತಲೆ ಎಣಿಕೆಯನ್ನು ಅರಣ್ಯ ಇಲಾಖೆ ಮುಂದಿನ ಸಾಲಿನಲ್ಲಿ ಮಾಡುತ್ತದೆ ಎಂದು ನಾವೆಲ್ಲ ನಿರೀಕ್ಷಿಸುತ್ತೇವೆ !!

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X