• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯ ಭವಿಷ್ಯ

By Staff
|

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಸುಖಾ ಸುಮ್ಮನಿರುವ ನಿಮ್ಮನ್ನು ಕೆಣಕಿರುವವನಿಗೆ ಕೇಡು ಗ್ಯಾರಂಟಿ. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಕೆಲಸದಕಡೆ ಗಮನಕೊಡಿ.


ವೃಷಭ : ಆಕಾಶಕ್ಕೆ ಏಣಿ ಹಾಕೋ ಯೋಚನೆ ಬಿಟ್ಟು ಬಿಡಿ. ಈ ಮುಂಚೆ ಅಂದುಕೊಂಡತೆಯೇ ನಿಮ್ಮ ಯೋಜನೆಯನ್ನ ಮುನ್ನಡೆಸಿ. ಹೆಂಡತಿಯ ಮುನಿಸು ಮುರಿಯುವ ದಿನವಿದು.

ಮಿಥುನ : ಇವತ್ತು ನಿಮಗೆ ಮಗನ ಕಿರಿಕಿರಿ. ಅದು ಹಠವೆನಿಸಿದರೂ ಅವನು ಕೇಳಿದ್ದನ್ನು ಕೊಡಿಸೋದೆ ಒಳಿತು. ಇಲ್ಲವಾದಲ್ಲಿ ಒಂದು ವಾರ ನಿಮ್ಮ ನೆಮ್ಮದಿ ಹಾಳಾದೀತು.

ಕಟಕ : ಕೊಳ್ಳಬೇಕು ಅಂದುಕೊಂಡಿರುವ ಷೇರುಗಳನ್ನು ಹಿಂದೂ ಮುಂದೂ ನೋಡದೆ ಕೊಂಡು ಬಿಡಿ. ಬಿಟ್ಟರೆ ಕೆಟ್ಟಿರಿ. ನಿಮ್ಮ ಆಕೆ/ ಆತನಿಗೆ ಇವತ್ತಿನ ಅರ್ಧ ಗಂಟೆಯನ್ನಾದರೂ ಮೀಸಲಿಡಿ.

ಸಿಂಹ : ಮನದಂಗಳದ ತುಂಬಾ ಚೆಲ್ಲಿರುವ ಕನಸು ನನಸಾಗೋ ದಿನವಿದು. ಕೆಲಸದ ಬಗೆಗೆ ಮನಸ್ಸಿಲ್ಲ. ದೇವರ ಮೊರೆ ಹೋಗಿ, ನೆಮ್ಮದಿ ಕಂಡುಕೊಳ್ಳಿ.

ಕನ್ಯಾ : ಮನಸ್ಸಿನಲ್ಲಿ ಅದುಮಿಟ್ಟುಕೊಂಡಿರುವ ವಿಷಯ ನಿಮ್ಮನ್ನು ಕಿತ್ತು ತಿನ್ನುತ್ತಿದೆ. ಯಾರಾದರೂ ಆಪ್ತರಲ್ಲಿ ಅದನ್ನು ಹೇಳಿಬಿಡಿ. ನೀವಂದುಕೊಂಡಿರುವಂತೆ ಏನೂ ತೊಂದರೆ ಆಗದು.

ತುಲಾ : ವಾರಗಳಿಂದ ಆಗದ ಕಾರ್ಯಕ್ಕೆ ಇವತ್ತು ಕಾಯಕಲ್ಪ. ನಿಮ್ಮ ಆರೋಗ್ಯ ಸ್ವಲ್ಪ ಕೈಕೊಟ್ಟರೂ ಸದ್ಯದ ಪರಿಸ್ಥಿತಿಯ್ಲಲಿ ಒಳ್ಲೆಯದಲ್ಲ. ತಕ್ಷಣ ಚಿಕಿತ್ಸೆ ಮಾಡಿಸಿ. ತಾತ್ಸಾರ ಸಲ್ಲ.

ವೃಶ್ಚಿಕ : ನಿಮ್ಮ ಆಪ್ತರಿಗೆ ನೋವಿನ ದಿನ. ಇಡೀ ದಿನ ಏನೋ ಅಳುಕು. ಸುಡು ಚಿಂತೆ. ಸಂಗೀತ, ಸಿನೆಮಾ ಅಂತ ಎ್ಲಲವನ್ನೂ ಮರೆಯಲೆತ್ನಿಸಿ.


ಧನಸ್ಸು : ನೀವು ಟ್ರೆೃ ಮಾಡುತ್ತಿರುವ ಹುಡುಗಿ ಇವತ್ತು ಮನಸ್ಸು ಬದಲಿಸುತ್ತಾಳೆ. ಆಕೆಯ ಕುರಿತು ಇಲ್ಲ ಸಲ್ಲದ ಅನುಮಾನ ಬೇಡ. ಇದು ಕೊನೆ ಅವಕಾಶ. ಸರಿಯಾಗಿ ಉಪಯೋಗಿಸಿಕೊಂಡಿರೋ ಗೆದ್ದಿರಿ.

ಮಕರ : ಯಾವುದೋ ಪೀಡೆ ನಿಮ್ಮ ಬೆನ್ನು ಹತ್ತಿದೆ. ಅದಕ್ಕೆ ಸೊಪ್ಪು ಹಾಕಬೇಡಿ. ದೇವರ ಸ್ತುತಿಯೇ ನಿಮ್ಮನ್ನು ಕಾಪಾಡೀತು. ಮನೆಯಾಕೆಯ ಮಾತಿಗೆ ಓಗೊಡಿ. ನೀವಾಯಿತು ನಿಮ್ಮ ಕೆಲಸ ಆಯಿತು ಅನ್ನೋ ಧೋರಣೆ ಇಂದಿಗೆ ಒಳಿತು.

ಕುಂಭ : ಕೋರ್ಟು ಕೊಡೋ ತೀರ್ಪು ನಿಮ್ಮ ಪರವಾಗಿರುತ್ತದೆ. ಅದೃಷ್ಟ ತಾನೇ ತಾನಾಗಿ ಹುಡುಕಿಕೊಂಡು ಬರುವ ದಿನವಿದು. ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಿ.

ಮೀನ : ನಿಮ್ಮನ್ನು ದೂರುತ್ತಾರೆ. ಹಾಗಂತ ಅವರಿಂದ ಪೂರ್ತಿ ದೂರಾಗಬೇಡಿ. ಅವರ ಮನವೊಲಿಸಲು ಯತ್ನಿಸಿ. ಟೈಮಿಗೆ ಸರಿಯಾಗಿ ಅಭಿಸಾರಿಕಾ ಸಿಗುತ್ತಾಳೆ. ಮುಖ್ಯವಾದ ಒಂದು ಕೆಲಸ ನೀವು ಮರೆತಂತಿದೆ. ಅದನ್ನು ಚಾಚೂ ತಪ್ಪದೆ ಮಾಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more