• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್‌ ಹಾಗೂ ಅವರ ಕುಟುಂಬದ ದೇಶಭಕ್ತಿ ಪ್ರಶ್ನಾರ್ಹ : ನಂಜೇಗೌಡ

By Staff
|

ಬೆಂಗಳೂರು : ವೀರಪ್ಪನ್‌ ಒತ್ತೆಯಾಳಾಗಿದ್ದ ಸಮಯದಲ್ಲಿ ರಾಜ್‌ ಹಾಗೂ ಅವರ ಕುಟುಂಬದವರ ನಡವಳಿಕೆಗಳು ಅವರ ಕನ್ನಡ ಪ್ರೀತಿ ಹಾಗೂ ದೇಶಭಕ್ತಿಯ ಬಗ್ಗೆ ಸಂಶಯ ಮೂಡಿಸಿದೆ ಎಂದು ಮಾಜಿ ಶಾಸಕ ಎಚ್‌.ಎನ್‌. ನಂಜೇಗೌಡ ಅಭಿಪ್ರಾಯಪಟ್ಟಿದ್ದಾರೆ.

ನನ್ನನ್ನು ಬಿಡಿಸಿಕೊಳ್ಳಲು ವೀರಪ್ಪನ್‌ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಿ ಎಂದು, ನಿಜವಾದ ದೇಶಭಕ್ತರಾಗಿದ್ದಲ್ಲಿ ರಾಜ್‌ ಒತ್ತಾಯಿಸುತ್ತಿರಲಿಲ್ಲ . ಯಾವುದೇ ಬೆಲೆ ತೆತ್ತಾದರೂ ರಾಜ್‌ರನ್ನು ಬಿಡಿಸಿ ಎಂದು ಅವರ ಕುಟುಂಬದವರು ಸರ್ಕಾರದ ಮೇಲೆ ಒತ್ತಡ ಹೇರುತ್ತಿರಲಿಲ್ಲ ಎಂದು ನಂಜೇಗೌಡ ಹೇಳಿದರು. ಬೆಂಗಳೂರಿನ ವಕೀಲರ ಸಂಘ ಸೋಮವಾರ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು.

ನೆಡುಮಾರನ್‌ ಅವರನ್ನು ರಾಧಾಕೃಷ್ಣನ್‌ ಹಾಗೂ ರಾಘವೇಂದ್ರ ಸ್ವಾಮಿಗಳಿಗೆ ಹೋಲಿಸುತ್ತಿರುವ ರಾಜ್‌ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಇದು ಹೀಗೇ ಮುಂದುವರಿದರೆ ನರಹಂತಕನನ್ನು ಮಹಾತ್ಮ ಗಾಂಧಿಯಾಂದಿಗೆ ಹೋಲಿಸುವ ದಿನಗಳು ದೂರವಿಲ್ಲ ಎಂದರು.

ರಾಜ್‌ ಜೀವಕ್ಕೆ ಮಾತ್ರ ಬೆಲೆಯೇ? : ಅನೇಕ ಅಮಾಯಕರು ಹಾಗೂ ಪೊಲೀಸ್‌ ಅಧಿಕಾರಿಗಳನ್ನು ವೀರಪ್ಪನ್‌ ಹತ್ಯೆ ಮಾಡಿದ್ದಾನೆ. ಅವರಿಗೆ ಸಾಂತ್ವನ ಹೇಳಲು ಮುಂದಾಗದ ಸರ್ಕಾರ, ರಾಜ್‌ ಅಪಹರಣವಾದಾಗ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇಡೀ ಸರ್ಕಾರ ರಾಜ್‌ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿತು. ಸರ್ಕಾರದ ಈ ನಡವಳಿಕೆ ರಾಜ್‌ ಜೀವಕ್ಕೆ ಮಾತ್ರ ಬೆಲೆ, ಉಳಿದವರ ಜೀವಕ್ಕೆ ಬೆಲೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ನಂಜೇಗೌಡ ಟೀಕಿಸಿದರು.

ರಾಜ್‌ ಅಪಹರಣ ಪ್ರಕರಣದ ಬಗ್ಗೆ ಜನತೆಯಲ್ಲಿ ಅನೇಕ ಪ್ರಶ್ನೆಗಳು ಮೂಡಿವೆ. ವೀರಪ್ಪನ್‌ ಗುಂಪಿನವ ಎನ್ನಲಾದ ವೀರಮಾಧುವಿಗೂ ರಾಜ್‌ ಕುಟುಂಬಕ್ಕೂ ಏನು ಸಂಬಂಧ? ರಾಜ್‌ ಕುಟುಂಬಕ್ಕೆ ಬಗ್ಗೆ ನೀಡಿರುವ ಗ್ರಾನೈಟ್‌ ಪರವಾನಗಿ ವ್ಯಾಪ್ತಿ ಏನು? ಈ ವ್ಯವಹಾರಕ್ಕೂ ಅಪಹರಣಕ್ಕೂ ಸಂಬಂಧವಿದೆಯೇ? ಮುಂತಾದವುಗಳು ಇಂದಿಗೂ ಪ್ರಶ್ನೆಯಾಗುಳಿದಿವೆ. ಸತ್ಯವನ್ನು ಜನತೆಗೆ ತಿಳಿಸಲು ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಕನ್ನಡಿಗರಿಗೆ ಅವಮಾನ : ಭಾನುವಾರ ನಡೆದ ಧನ್ಯಮಿಲನ ಕಾರ್ಯಕ್ರಮವನ್ನು ತಮಿಳಿನ ಸನ್‌ನೆಟ್‌ ವರ್ಕ್‌ನ ಉದಯ ಟೀವಿಗೆ ಮಾರಿಕೊಂಡ ಚಲನಚಿತ್ರ ವಾಣಿಜ್ಯ ಮಂಡಳಿ ಅವಮಾನ ಮಾಡಿದ್ದು ಕೇವಲ ಖಾಸಗಿ ಚಾನೆಲ್‌ಗಳವರಿಗೆ ಮಾತ್ರ, ಅದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಒಕ್ಕಲಿಗರ ಸಮಾಜ ಸಂಪರ್ಕ ವೇದಿಕೆ ಟೀಕಿಸಿದೆ.

ಅಪಹರಣ ಪ್ರಕರಣದ ಸುದ್ದಿಗಳನ್ನು ಎಲ್ಲಾ ವಾಹಿನಿಗಳವರು ಬಿತ್ತರಿಸಿದ್ದಾರೆ. ಆದರೆ, ಧನ್ಯಮಿಲನ ಕಾರ್ಯಕ್ರಮ ಪ್ರಸಾರ ಹಕ್ಕುಗಳನ್ನು ಉದಯ ಚಾನೆಲ್‌ಗೆ ಮಾತ್ರ ನೀಡಿರುವ ಮಂಡಳಿಯ ಕ್ರಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವೇದಿಕೆ ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಆಪಾದಿಸಿದೆ.

(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more