• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೀಲೆ(ಫಿಫಾ)-ಮರಡೋನಾ(ಇಂಟರ್ನೆಟ್‌): 100 ವರ್ಷಗಳಲ್ಲಿ ಇಬ್ಬರು

By Staff
|

ರೋಮ್‌ : ಕಾಲ್ಚೆಂಡಿನಾಟದ ಶತಮಾನದ ಶ್ರೇಷ್ಠ ಆಟಗಾರರನ್ನಾಗಿ ಪುಟ್ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಬ್ರೆಜಿಲ್‌ನ ಪೀಲೆ ಅವರನ್ನು ಅಂತರರಾಷ್ಟ್ರೀಯ ಪುಟ್ಬಾಲ್‌ಫೆಡರೇಷನ್‌(ಫಿಫಾ) ಆರಿಸಿದೆ. ಆದರೆ, ಇಂಟರ್ನೆಟ್‌ ಮೂಲಕ ನಡೆದ ಸ್ಪರ್ಧೆಯಲ್ಲಿ ಅರ್ಜೆಂಟೀನಾದ ಡಿಯಾಗೊ ಮರಡೊನ ಶತಮಾನದ ಶ್ರೇಷ್ಠ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

maradona- fifa(internet) player of the centuryಫಿಫಾದ ಆಯ್ಕೆಯಲ್ಲಿ ಪೀಲೆ ಪ್ರತಿಶತ 72.75 ಮತಗಳನ್ನು ಪಡೆದರೆ, ಎರಡನೆಯವರಾದ ಅರ್ಜೆಂಟೀನಾದ ಆಲ್ಫ್ರೆಡೊ ಡಿ ಸ್ಟೆಫನೊ ಪ್ರತಿಶತ 9.75 ಮತ ಪಡೆದರು. ಪ್ರತಿಶತ 6 ಓಟುಗಳನ್ನು ಮಾತ್ರ ಗಿಟ್ಟಿಸಿದ ಡಿಯಾಗೊ ಮರಡೊನಾಗೆ ದಕ್ಕಿದ್ದು ಮೂರನೇ ಸ್ಥಾನ. ಫಿಫಾ ಆಯ್ಕೆಗೆ ವಿರುದ್ಧವಾಗಿ ಇಂಟರ್ನೆಟ್‌ ಆಯ್ಕೆಯಲ್ಲಿ ಪ್ರತಿಶತ 53.60 ಮತ ಪಡೆದ ಮರಡೊನಾ, ಪ್ರತಿಶತ 18.53 ಓಟು ಪಡೆದ ಪೀಲೆ ಅವರನ್ನು ಎರಡನೆ ಸ್ಥಾನಕ್ಕೆ ತಳ್ಳಿದರು. ಸೋಮವಾರ ಇಳಿಸಂಜೆ ಬಿಡುಗಡೆಯಾದ ಫಿಫಾ ಪ್ರಕಟಣೆ ಈ ವಿಷಯ ತಿಳಿಸಿದೆ.

2004 ರಲ್ಲಿ ಫಿಫಾ ತನ್ನ 100 ನೇ ಜಯಂತಿಯನ್ನು ಆಚರಿಸಿಕೊಳ್ಳಲಿದೆ. ಆ ಸಂದರ್ಭದಲ್ಲಿ ಕೇವಲ ಓರ್ವ ಆಟಗಾರನಿಗೆ ಮಾತ್ರ ಶತಮಾನದ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಗುವುದು ಎಂದು ಫಿಫಾದ ಅಧ್ಯಕ್ಷ ಜೋಸೆಫ್‌ ಬ್ಲಾಟರ್‌ ಹೇಳಿದ್ದಾರೆ.

ಪೀಲೆ (60) ಬ್ರೆಜಿಲ್‌ನ ಪರವಾಗಿ 92 ಪಂದ್ಯಗಳನ್ನು ಆಡಿದ್ದು, 1958, 1962 ಹಾಗೂ 1970 ರಲ್ಲಿ ಬ್ರೆಜಿಲ್‌ ವಿಶ್ವ ಚಾಂಪಿಯನ್‌ಷಿಪ್‌ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಮ್ಮ ಕ್ರೀಡಾ ಜೀವನದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಗೋಲುಗಳನ್ನು ಹೊಡೆದಿದ್ದಾರೆ.

ಮರಡೋನಾ ಕೊಳಗೇರಿಯಿಂದ ಮೂಡಿಬಂದ ಪ್ರತಿಭೆ. 1986 ರಲ್ಲಿ ಅರ್ಜೆಂಟೀನಾ ತಂಡ ವಿಶ್ವ ಚಾಂಪಿಯನ್‌ ಪ್ರಶಸ್ತಿ ಗಳಿಸಿದಾಗ ಅದರ ಸಂಪೂರ್ಣ ಅಗ್ಗಳಿಕೆಗೆ ಅವರು ಪಾತ್ರರಾಗಿದ್ದರು. 1990 ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅರ್ಜೆಂಟೀನಾ ರನ್ನರಪ್‌ ಪ್ರಶಸ್ತಿ ಗಳಿಸಿದಾಗ ಕೂಡ ಮರಡೋನಾ ತಮ್ಮ ಜಾದೂ ಆಟದಿಂದ ಸುದ್ದಿಯಾಗಿದ್ದರು.

ಜಿನೆಡಿನ್‌ಗೆ ವರ್ಷದ ಆಟಗಾರ ಪ್ರಶಸ್ತಿ : ಯುರೋಪಿಯನ್‌ ಚಾಂಪಿಯನ್‌ಷಿಪ್‌- 2000 ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿನೆಡಿನ್‌ ಜಿಡಾನೆ 2000 ಸಾಲಿನ ಶ್ರೇಷ್ಠ ಪುಟ್ಬಾಲ್‌ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಜಿನೆಡಿನ್‌ ಈ ಪ್ರಶಸ್ತಿಯನ್ನು ಪಡೆಯುತ್ತಿರುವುದು ಎರಡನೇ ಬಾರಿ. 1998 ರಲ್ಲೂ ಅವರು ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು.

ಯುನೈಟೆಡ್‌ ಸ್ಟೇಟ್ಸ್‌ನ ಮೈಕೆಲ್‌ ಕೇರ್ಸ್‌ ಅವರನ್ನು ಶತಮಾನದ ಶ್ರೇಷ್ಠ ಮಹಿಳಾ ಪುಟ್ಬಾಲ್‌ ಆಟಗಾರ್ತಿಯಾಗಿ ಫಿಫಾ ಗುರ್ತಿಸಿದ್ದರೆ, ಇಂಟರ್ನೆಟ್‌ ಪೋಲ್‌ನ ಆಯ್ಕೆ ಚೀನಾದ ಸನ್‌ ವೆನ್‌ ಅವರನ್ನು ಗುರ್ತಿಸಿದೆ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಆಟದ ಅಂಗಳ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more