ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಡಗೋಡು ಪಕ್ಷಿಧಾಮಕ್ಕೆ ಬಂದ ಪಯಣಿಗರು

By Super
|
Google Oneindia Kannada News

ಮುಂಡಗೋಡ: ಇಲ್ಲಿನ ಅತ್ತಿವೇರಿ ಪಕ್ಷಿ ಧಾಮಕ್ಕೆ ವಿವಿಧ ಪ್ರಭೇದಗಳ ಹಕ್ಕಿಗಳು ವಲಸೆ ಬರುತ್ತಿವೆ. ಇಲ್ಲಿರುವ ಜಲಾಶಯದ ಬಳಿ ಕಡಿಯದೇ ಬಿಟ್ಟಿರುವ ಗಿಡ ಮರಗಳ ಪೊದೆಗಳಲ್ಲಿ ಎಲ್ಲಿಂದಲೋ ಬಂದ ಹಕ್ಕಿಗಳು ತಮ್ಮ ಗೂಡು ಕಟ್ಟಿವೆ.

ಪ್ರತಿ ವರ್ಷವೂ , ಪ್ರವಾಸ ಹೊರಟು ಹಕ್ಕಿಗಳು ಇಲ್ಲಿ ಬಂದು ಸ್ವಲ್ಪ ದಿನ ಸಂಸಾರ ಮಾಡುತ್ತವೆ. ಸಣ್ಣ ನೀರು ಕಾಗೆ, ಹಾವಕ್ಕಿ, ಇಂಡಿಯನ್‌ ಶ್ಯಾಗ್‌, ಬಿಳಿ ಐಬೀಸ್‌, ಚಮಚೆ ಕೊಕ್ಕು, ಬಣ್ಣದ ಕೊಕ್ಕರೆ, ಗಿಡುಗ, ಕೆಂಪು ಟಿಟ್ಟಿಭ, ಬೂದು ಬಕ, ಮಂಡೆ ಮುಳುಕ... ಹೀಗೆ 37ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ಇಲ್ಲಿ ಬೀಡು ಬಿಟ್ಟಿವೆ.

ಈ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ವೀಕ್ಷಣಾ ಗೋಪುರ ಮತ್ತು ತಂಗುದಾಣಗಳ ವ್ಯವಸ್ಥೆ ಮಾಡಿರುವುದಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌. ಬಾಳಗಿ ಹೇಳಿದ್ದಾರೆ. ಪಕ್ಷಿಗಳ ಸಹಜ ಬದುಕಿಗೆ ತೊಂದರೆ ಮಾಡುವವರನ್ನು ಮತ್ತು ಪಕ್ಷಿ ಬೇಟೆಗಾರರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.(ಇನ್ಫೋ ವಾರ್ತೆ)

English summary
Mundagod bird sanctuary is full
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X