ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಆಡಿದ ಮಾತುಗಳ ಪೂರ್ಣ ಪಾಠ ಇಲ್ಲಿದೆ.... (ಭಾಗ 2)

By Staff
|
Google Oneindia Kannada News

Rajkumar with Veerappan before his release
ಗೋಪಾಲ್‌ ಬಂದ್ರು ಹೋದ್ರು : ಆರಂಭದಲ್ಲಿ ನಕ್ಕೀರನ್‌ ಗೋಪಾಲ್‌ ಮೂರ್ನಾಲ್ಕು ಸಲ ಬಂದ್ರು ಹೋದ್ರು.... ಆಗ ನಾವು ಅವರ ಜತೇಲೆ ಊರಿಗೆ ಹೋಕ್ತೇವೆ ಅನ್ನೋ ಆಸೆ ಬರ್ತಿತ್ತು. ಹೇಳ್ಕೋಳಕ್ಕೆ ಆಕ್ತಾ ಇರಲಿಲ್ಲ. ಅಂತೂ 3 ತಿಂಗ್ಳು ಕಳದೇ ಹೋಯ್ತು, ಅಂತೂ ಇವತ್ತು ಬಂದೇ ಬಿಟ್ವಿ.

ಸೇಲಂ ಹತ್ರ - ಆದ್ಯಾವ್ದೋ ರೋಡು. ಏನದು? (ಪಕ್ಕದಲ್ಲಿದವರು ಹೇಳಿದರು ಈರೋಡ್‌) ಈರೋಡ್‌ ಕಾಡಿನಿಂದ ಬಂದು ಸಾಯಂಕಾಲ ಆರೋಡ್‌ಗೆ ಬಂದು ಸೇರಿದ್ವಿ. ಬಸ್‌ ಕಾರುಗಳ ಶಬ್ಧ ಕೇಳಿ ಇದೇನಪ್ಪಾ... ಕನಸೋ ನೆನಸೋ ಅನ್ನೋ ಸನ್ನಿವೇಶ. 9 ಗಂಟೆಗೆ ಕಾರು ಬಂತು ಒಬ್ಬೊಬ್ರೆ ಹತ್ತಿದಾಗ, ಸೀಟಲ್ಲಿ ಕೂತಾಗ ಆಯ್ಯೋ ಹೊಸದಾಗಿ ಕಾರಲ್ಲಿ ಕೂತಿದೀನಾ ಅನ್ನಿಸ್ತು. ಹೊಸ ಪ್ರಪಂಚಕ್ಕೆ ಬಂದಾಗೆ ಆಯ್ತು. ಕಾರಲ್ಲಿ 2 ಗಂಟೆ ಪ್ರಯಾಣ.

ಆ ಮನುಷ್ಯ (ವೀರಪ್ಪನ್‌) ಜಾಗ ಖಾಲಿ ಮಾಡಿ ಬೇರೆ ಕಡೇಗೆ ಹೋಗ ತನಕ ನಾವು ಬಿಡುಗಡೆ ಆಗಿದ್ದನ್ನು ಹೇಳಬಾರದು ಅಂದಿದ್ದು. ಅದ್ಯಾವುದೋ ಸುರಕ್ಷಿತ ಜಾಗಕ್ಕೆ ಕರಕೊಂಡು ಹೋದ್ರು. ಜನರಿಗೆ ನಾನು ಬಿಡುಗಡೆ ಆಗಿದ್ದು ಗೊತ್ತಾಗ ಬಾರ್ದು ಅನ್ನೊದು ಅವರ ಉದ್ದೇಶ. ಜನರಿಗಿಂತ ಪೊಲೀಸ್‌ಗೆ ತಿಳಿಬಾರ್ದು ಏಕಂದ್ರೆ, ನಾವು ಬಿಡುಗಡೆ ಆಗಿರೋದು ತಿಳಿಯಕ್ಕೆ ಮುಂಚೆ ಆತ ಜಾಗನ ಬೇರೆ ಕಡೆಗೆ ಷಿಫ್ಟ್‌ ಮಾಡಬೇಕಿತ್ತು. ಪೊಲೀಸರು ಬಂದಾರು ಅನ್ನೋ ಭಯ. ಆಗ ಆತ ಜಾಗ ಖಾಲಿ ಮಾಡಿದಾನೋ ಇಲ್ವೋ ನನಗೆ ಗೊತ್ತಿಲ್ಲ.

ಇದ್ದೋರು ಮೂರು ಕದ್ದೋರು ಯಾರು? ಈ ಪ್ರಯಾಸ - ಪ್ರಯಾಣದಲ್ಲಿ ತಮಿಳುನಾಡು ಸರಕಾರ, ಮಾನ್ಯ ಕಲಂಗೈ ಕರುಣಾನಿಧಿ, ಹಾಗಂತಾರೆ ಅವರನ್ನ. ನಮ್ಮ ಸರಕಾರ ನಮ್ಮ ಮುಖ್ಯಮಂತ್ರಿಗಳು ಪ್ರಯಾಸ ಪಟ್ಟು ಪ್ರಯತ್ನ ಮಾಡಿ ನನ್ನ ಬಿಡಿಸಿದ್ರು. ಹೀಗೆ ಬಿಡುಗಡೆ ಆಗಿ ಕಾರಲ್ಲಿ ಬಂದಾಗ ಜನ ನೋಡಿದಾಗ ನನಗೆ ಉದ್ವೇಗ ಆಯ್ತು. ಕಣ್ಣೀರು ಬರ್ತಿತ್ತು. ಆ ನಕ್ಕೀರನ್‌ ಗೋಪಾಲ್‌ 4-5 ಬಾರಿ ಬಂದ್ರು ಆದ್ರೆ ಸಾಧನೆ ಮಾಡಕ್ಕೆ ಆಗಲಿಲ್ಲ. ನಾಗಪ್ಪ ಬೇರೆ ಓಡಿ ಹೋದ. ಆವನೇನೋ ಓಡಿ ಹೋದ ನಾವು ತಗಲ್ಕೊಂಡ್ವಿ. ಅದೇನೋ ಹೇಳ್ತಾರಲ್ಲ ಇದ್ದೋರು ಮೂರು ಜನ ಕದ್ದೋರು ಯಾರು ಅಂತ ಹಾಗೆ. ಮೊದಲೇ ಒಂದು ಗ್ರೂಪ್‌ ಅವರದ್ದು. ಶೂಟ್‌ ಮಾಡಿದ್ರೆ ಏನು ಮಾಡಬೇಕಿತ್ತು. (ನಕ್ಕರು) ಮಾಡೋದೇನಿದೆ. ಏನೂ ಮಾಡೋ ಹಾಗಿರಲಿಲ್ಲ.

ನಾಗಪ್ಪ ಓಡಿ ಹೋದಮೇಲೆ ನಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿದ್ರು. - ಗನ್‌ ಹಿಡಿದು ನಿಂತಿರ್ತಿದ್ರು. ಆತಂಕ ಪಡೋ ವಿಷಯ ಅದು. ಕಡೇಗೆ ನಾನು ಹೇಳ್ದೆ. ನಮ್ಮ ಹುಡುಗ್ರುನ್ನ ಬಿಟ್ಟು ಬಿಡು. ನನ್ನ ಸುಟ್ಟು ಬಿಡು. ಹೇಗೂ ನನಗೆ ವಯಸ್ಸಾಗಿದೆ. ಇಷ್ಟು ವರ್ಷದಲ್ಲಿ ಕೀರ್ತಿ ಪ್ರತಿಷ್ಠೆ ಸಾಧು ಸಂತರ ಸಹವಾಸ ಅನುಗ್ರಹ ಎಲ್ಲ ನನ್ನ ತಲೇಮೇಲಿದೆ. ಹೊಡೆದು ಹಾಕಿ ಅಂದೆ.

ವೀರಪ್ಪ ಕೈ ಕಟ್ಟು ಬಿಚ್ಚಿದ, ನಮಗೆ ಭರವಸೆ ಕೊಟ್ಟ. ಹಾಗೂ ಹೀಗೂ ಜೀವನ ತಳ್ಳಿದ್ವಿ. ಬಿಡುಗಡೆ ಪ್ರಶ್ನೆ ಬಂದಾಗ ಪಳ ನೆಡುಮಾರನ್‌ ಕರೆಸುವ ಸಲಹೆ - ಸಹಾಯ ಸಹಕಾರ ಕೊಟ್ಟದ್ದು ಆತನೇ. ನಮ್ಮನ್ನು ಹಿಡಿದುಕೊಂಡು ಹೋದವನೇ ನಮ್ಮ ಬಿಡುಗಡೆಗೂ ಸಹಾಯ ಮಾಡ್ದ. ಅಷ್ಟು ಹೊತ್ತಿಗೆ ಸುಪ್ರೀಂ ಕೋರ್ಟ್‌ ಆರ್ಡರ್‌ ಬಂತು. ಎಲ್ಲರ ಪ್ರಯತ್ನಕ್ಕೆ ಅನುಕೂಲಕ್ಕೆ ಅನಾನುಕೂಲ ಆಗೋ ಹಾಗೆ ಕೋರ್ಟ್‌ ಆರ್ಡರ್‌ ಇತ್ತು.

ಇನ್ನು ಯಾವ ಕಾಲಕ್ಕಪ್ಪ ನಮ್ಮ ಬಿಡುಗಡೆ ಆಗೋದು ಅಂತ ಕಾಯಬೇಕಾಯ್ತು. ನೆಡುಮಾರನ್‌ಗೆ ಕ್ಯಾಸೆಟ್‌ ಕಳಿಸಿದ್ವಿ. ಅವರು ಬಂದ್ರು.

Click here to go to the previous page1 2 3 Click here to go to the next page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X