ಶಾಖೋತ್ಪನ್ನ ಮತ್ತು ಜಲ ವಿದ್ಯುತ್ ಯೋಜನೆಗಳಿಗೆಸರಕಾರದ ನೆರವು
ನವದೆಹಲಿ : ಕೇಂದ್ರ ಸರಕಾರವು ಮುಂದಿನ 10 ವರ್ಷಗಳಲ್ಲಿ 10 ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು , ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವತ್ತ ಹೆಚ್ಚು ಆಸಕ್ತಿ ಹೊಂದಿದೆ.
ಸುಮಾರು ಹನ್ನೆರಡಕ್ಕೂ ಹೆಚ್ಚು ಜಲವಿದ್ಯುತ್ ಸ್ಥಾವರಗಳ ಸ್ಥಿತಿ ಗತಿಯನ್ನು ಉತ್ತಮ ಪಡಿಸಲು ಸರಕಾರ ಒಪ್ಪಿಕೊಂಡಿದೆ. ಪ್ರಸ್ತುತ 25 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಈಗಾಗಲೇ ಆರ್ಥಿಕ ಯೋಜನೆ ಸಿದ್ಧವಾಗಿದೆ. ಈ ಯೋಜನೆಗಳಿಗೆ ಸರಿಯಾದ ಪ್ರಮಾಣದಲ್ಲಿ ಬಂಡವಾಳ ಇಲ್ಲದಿದ್ದಲ್ಲಿ ಸ್ಥಾವರಗಳು ಉತ್ಪಾದನೆಯಲ್ಲಿ ಹಿಂದೆ ಬೀಳುತ್ತವೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷ ಆರ್. ಎನ್. ಶ್ರೀವಾಸ್ತವ ಹೇಳುತ್ತಾರೆ.
ರಾಜ್ಯ ನಿಯಂತ್ರಣ ಆಯೋಗದ ಮೂಲಕ ಅಭಿವೃದ್ಧಿ ಪಡಿಸಲು ನಿರ್ಧ-ರಿ-ಸಿ-ರು-ವ ಕಂಪೆನಿಗಳು, 2002 ನೇ ಇಸವಿಯ ಹೊತ್ತಿಗೆ ಉತ್ಪಾದನೆ ಆರಂಭಿಸಲಿವೆ. ಇದಕ್ಕೆ ಬೇಕಾಗುವ ಒಟ್ಟು ಆರ್ಥಿಕ ವೆಚ್ಚದ ಶೇ 70ರಷ್ಟನ್ನು ಪವರ್ ಫೈನಾನ್ಸ್ ಕಾರ್ಪೊರೇಷನ್ ಶೇಕಡಾ ಎರಡು ಸಬ್ಸಿಡಿಯಾಂದಿಗೆ ಒದಗಿಸುತ್ತದೆ.
ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಯನದ ಪ್ರಕಾರ ಈಗಿರುವ ಒಂದು ಮೆಗಾವ್ಯಾಟ್ ಜಲವಿದ್ಯುತ್ ಯೋಜನೆಯನ್ನು ಅಭಿವೃದ್ಧಿ ಪಡಿಸಲು 10ರಿಂದ 15 ಮಿಲಿಯನ್ ರೂಪಾಯಿ ಖರ್ಚಾದರೆ, ಹೊಸ ಯೋಜನೆ ಸ್ಥಾಪಿಸಲು 50 ಮಿಲಿಯನ್ ರೂಪಾಯಿ ಬೇಕಾಗುತ್ತದೆ.
ಪ್ರಾಧಿಕಾರ ಯೋಜನೆಯ ಪ್ರಕಾರ 15 ವರ್ಷಗಳಲ್ಲಿ 11ನೇ ಯೋಜನೆಯು ಪೂರ್ಣವಾಗುವ ಹೊತ್ತಿಗೆ 144 ಶಾಖೋತ್ಪನ್ನ ಕೇಂದ್ರಗಳು 23 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವಾಗ 100 ಜಲ ವಿದ್ಯುತ್ ಕೇಂದ್ರಗಳು 8 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ . ಪ್ರಸ್ತುತ ಉತ್ತರ ಪ್ರದೇಶದ ಒಬ್ರಾ ಥರ್ಮಲ್ ಪವರ್ ಸ್ಟೇಶನ್ನ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರದ ಟೆಂಡರ್ ಕಾರ್ಯ ಪೂರೈಸಿದ ತಕ್ಷಣ ಉಳಿದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.
(ಐಎಎನ್ಎಸ್)