ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಚಕ ವೃತ್ತಿ ಯಲ್ಲೂ ಮೀಸಲಾತಿ ಅಗತ್ಯ: ನಿಡುಮಾಮಿಡಿ ಸ್ವಾಮೀಜಿ

By Super
|
Google Oneindia Kannada News

ಬೆಂಗಳೂರು : ಅರ್ಚಕ ವೃತ್ತಿಯಲ್ಲಿಯೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ನಿಡುಮಾಮಿಡಿ ಮಠಾಧ್ಯಕ್ಷ ವೀರಭದ್ರ ಚೆನ್ನ ಮಲ್ಲ ಸ್ವಾಮೀಜಿ ಭಾನುವಾರ ಹೇಳಿದ್ದಾರೆ.

ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಅರ್ಚಕರ ನೇಮಕಾತಿ ಪ್ರಜಾಪ್ರಭುತ್ವೀಕರಣ ವೇದಿಕೆ ಆಯೋಜಿಸಿದ್ದ ಸಂವಾದ ಸಭೆಯ ಉದ್ಘಾಟನಾ ಭಾಷಣದಲ್ಲಿ ಅವರು ಈ ವಿಷಯ ಪ್ರತಿಪಾದಿ-ಸಿದರು. ಅರ್ಚಕ ವೃತ್ತಿಗೆ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಹಾಗೂ ಮಹಿಳೆಯರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ, ಅವರನ್ನು ಪೂರ್ಣ ಪ್ರಮಾಣದ ಸರಕಾರಿ ನೌಕರರೆಂದು ಘೋಷಿಸಬೇಕು ಎಂದರು.

ಜಡ ಸಂಸ್ಕೃತಿಯ ಪ್ರತೀಕವಾದ ದೇವಾಲಯಗಳನ್ನು ಚಲನ ಶೀಲ ಸಂಸ್ಕೃತಿ ಒಪ್ಪುವುದಿಲ್ಲ , ಅರ್ಚಕ ವೃತ್ತಿ ವೈಷ್ಣವರು ಮತ್ತು ಶೈವರಿಗಷ್ಟೇ ಮೀಸಲಾಗಿರುವುದು ಸರಿಯಲ್ಲ ಎಂದು ವೀರ-ಭ-ದ್ರ ಚೆನ್ನ-ಮ-ಲ್ಲ ಸ್ವಾಮೀ-ಜಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಡಾ. ಸಿದ್ಧಲಿಂಗಯ್ಯ, ದೇವಾಲಯಗಳಲ್ಲಿ ಕನ್ನಡದಲ್ಲಿ ಅರ್ಚನೆ ಮಾಡುವ ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡುವ ಕುರಿತು ಸರಕಾರ ಪರಿಶೀಲಿಸಬೇಕು ಎಂದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಪ್ರೊ. ರವಿವರ್ಮ ಕುಮಾರ್‌ ರಾಜ್ಯಾದ್ಯಂತ 180 ಅರ್ಚಕ ಹುದ್ದೆಗಳು ಖಾಲಿ ಇವೆ ಎಂದರು.

English summary
Reservation for the Priests posts is must
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X