ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ಭಾರತೀಯರಿಗೆ ಮ್ಯಾಕ್‌ಬ್ರೆೃಡ್‌ ಪ್ರಶಸ್ತಿ ಗರಿ

By Staff
|
Google Oneindia Kannada News

ಪ್ಯಾರಿಸ್‌: ಅಂತಾರಾಷ್ಟ್ರೀಯ ಶಾಂತಿ ಸಂಸ್ಥೆ (ಐಪಿಬಿ) ನೀಡುವ ಮ್ಯಾಕ್‌ಬ್ರೆೃಡ್‌ ಪ್ರಶಸ್ತಿಗೆ ಭಾರತದ ಹೆಸರಾಂತ ಅಣ್ಣಸ್ತ್ರ ಪ್ರಸರಣ ವಿರೋಧಿ ಹೋರಾಟಗಾರರು ಹಾಗೂ ಪತ್ರಕರ್ತರೂ ಆಗಿರುವ ಪ್ರಫುಲ್‌ ಬಿದ್ವಾಯ್‌ ಮತ್ತು ಅಚಿನ್‌ ವನಾಯಕ್‌ ಪಾತ್ರರಾಗಿದ್ದಾರೆ.

ಪ್ರಶಸ್ತಿಯು ಬೆಳ್ಳಿಪದಕ ಒಳಗೊಂಡಿದೆ. ಪ್ರಶಸ್ತಿಯನ್ನು ಐಪಿಬಿಯ ತ್ರೆೃವಾರ್ಷಿಕೋತ್ಸವದ ಅಂಗವಾಗಿ ಈ ವಾರದ ಕೊನೆಯಲ್ಲಿ ಪ್ಯಾರಿಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ವಾರ್ಷಿಕೋತ್ಸವದಲ್ಲಿ ‘ಶಾಂತಿಯ ಜಾಗತೀಕರಣ’ ಎಂಬ ವಿಷಯದ ಕುರಿತು ಅಕ್ಟೋಬರ್‌ 12 ಮತ್ತು 14ರಂದು ವಿಚಾರ ಸಂಕಿರಣವೂ ನಡೆಯಲಿದೆ.

ಪರಿಚಯ : ಬಿದ್ವಾಯ್‌ ಮತ್ತು ವನಾಯಕ್‌ ಅವರು ಬರಹಗಾರೂ ಆಗಿದ್ದು, ಆಮ್‌ಸ್ಟರ್‌ಡ್ಯಾಮ್‌ನ ಟ್ರಾನ್ಸೇಷನಲ್‌ ಇನ್‌ಸ್ಟಿಟ್ಯೂಟ್‌ನ ಫೆಲೋ ಆಗಿದ್ದಾರೆ. ದಕ್ಷಿಣ ಏಷ್ಯಾದ ಪರಮಾಣು ಕಾರ್ಯಕ್ರಮಗಳ ಸ್ಥಿತಿಗತಿ ವಿವರಿಸುವ ‘ನ್ಯೂ ನ್ಯೂಕ್ಸ್‌ ಇಂಡಿಯಾ, ಪಾಕಿಸ್ತಾನ್‌ ಅಂಡ್‌ ಗ್ಲೋಬಲ್‌ ಡಿಸಾರ್ಮಮೆಂಟ್‌’ ಎಂಬ ಪುಸ್ತಕವನ್ನು ಒಟ್ಟಾಗಿ ಬರೆದಿದ್ದಾರೆ. ಈ ಪುಸ್ತಕವನ್ನು ದಕ್ಷಿಣ ಏಷ್ಯಾದ ಭಾಗದಲ್ಲಿ ‘ ಸೌತ್‌ ಏಷಿಯಾ ಇನ್‌ ಎ ಶಾರ್ಟ್‌ ಫ್ಯೂಸ್‌: ನ್ಯೂಕ್ಲಿಯಾರ್‌ ಪಾಲಿಟಿಕ್ಸ್‌ ಅಂಡ್‌ ಫ್ಯೂಚರ್‌ ಆಫ್‌ ಗ್ಲೋಬಲ್‌ ಡಿಸಾರ್ಮಮೆಂಟ್‌’ ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಅಣ್ವಸ್ತ್ರಗಳಿಗೆ ಸಂಬಂಧಿಸಿದ ಇನ್ನೂ ಕೆಲವು ಪುಸ್ತಕಗಳನ್ನೂ ಈ ಇಬ್ಬರು ಪತ್ರಕರ್ತರು ಬರೆದಿದ್ದಾರೆ.

ಅಣ್ವಸ್ತ್ರ ಪ್ರಸರಣದ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಬಿದ್ವಾಯ್‌ ಮತ್ತು ವನಾಯಕ್‌ ಅವರ ಹೆಸರು ಕೇಳದವರು ವಿರಳ. 1998ರ ಮೇ ತಿಂಗಳಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಭಾರತ ಮತ್ತು ಪಾಕಿಸ್ತಾನ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವ್ಯವಸ್ಥಿತ ಹೋರಾಟ ನಡೆಸಿದ, ಬಹಿರಂಗ ಪ್ರಚಾಕ್ಕಿಳಿದ ಈ ಇಬ್ಬರ ಸಾಧನೆಯನ್ನು ಐಪಿಬಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಬಣ್ಣಿಸಲಾಗಿದೆ.

ಐಪಿಬಿ : ಜಿನಿವಾ ಮೂಲದ ಅಣ್ವಸ್ತ್ರ ವಿರೋಧಿ ಸರಕಾರೇತರ ಸಂಸ್ಥೆಯಾಗಿರುವ ಐಪಿಬಿ, ದಕ್ಷಿಣ ಏಷ್ಯಾದ ಪರಮಾಣೀಕರಣ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣ್ವಸ್ತ್ರ ವಿರೋಧಿ ನೀತಿಯನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಮುಖ್ಯ ಸಂಘಟನೆಯಾಗಿದೆ.

1982ರಲ್ಲಿ ಸ್ಥಾಪಿತವಾದ ಐಪಿಬಿ, ಅಂತಾರಾಷ್ಟ್ರೀಯ ಶಾಂತಿ ಸ್ಥಾಪನಾ ಸಂಘಟನೆಗಳಲ್ಲಿ ಕೇಳಿ ಬರುವ ಹಳೆಯ ಸಂಸ್ಥೆಯಾಗಿದೆ. 53 ದೇಶಗಳ ಸದಸ್ಯರನ್ನು ಹೊಂದಿರುವ ಸಂಸ್ಥೆ , ಮಾನವ ಹಕ್ಕು, ಅಣ್ವಸ್ತ್ರ, ಅಂತಾರಾಷ್ಟ್ರೀಯ ಬಿಕ್ಕಟ್ಟು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ದನಿ ಎತ್ತಿ ಹೋರಾಟ ನಡೆಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X