• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಐಟಿ ಬಂಡಾವಳದಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಳಅಮೆರಿಕಾ ಮಾಧ್ಯಮ ನಡೆಸಿದ ಸಮೀಕ್ಷೆಯ ತಿರುಳು

By Staff
|

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ವಾಜಪೇಯಿ ಅವರು ಅಮೆರಿಕಕ್ಕೆ ಹೋಗಿ ಬಂದರು. ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಇದರಿಂದ ಬಲಗೊಂಡಿತು. ಅಷ್ಟೇ ಅಲ್ಲ ಈಗ ಅಮೆರಿಕದ ಮಾಧ್ಯಮವೊಂದು ನಡೆಸಿರುವ ಸಮೀಕ್ಷೆಯ ರೀತ್ಯ ಭಾರತದ ಮಾಹಿತಿ ತಂತ್ರಜ್ಞಾನ ಬಂಡವಾಳದಲ್ಲಿ ಹಿಂದೆಂದೂ ಕಾಣದ ಪ್ರಗತಿ ಆಗಲಿದೆಯಂತೆ.

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನ ಆರಂಭಿಕ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಭಾರಿ ಹೆಚ್ಚಳ ಕಂಡು ಬರಲಿದೆ. 1988ರಲ್ಲಿ ಕೇವಲ 15 ಕೋಟಿ ಡಾಲರ್‌ನಷ್ಟಿದ್ದ ಆರಂಭಿಕ ಬಂಡವಾಳ ಈ ವರ್ಷ ಕನಿಷ್ಠ ಒಂದು ನೂರು ಕೋಟಿ ಡಾಲರ್‌ಗೆ ಹೆಚ್ಚುವ ಸಂಭವ ಇದೆ ಎನ್ನುತ್ತದೆ ಸಮೀಕ್ಷೆ.

ಈ ಪ್ರಾಥಮಿಕ ಬಂಡವಾಳ 2008ನೇ ಇಸವಿಯ ವೇಳೆಗೆ 10 ಶತಕೋಟಿ ಡಾಲರ್‌ಗಳನ್ನೂ ಮೀರಿ ಬೆಳೆಯುವ ಸಾಧ್ಯತೆ ಇದೆ. ಇದರಲ್ಲಿ ಅಮೆರಿಕದ್ದೇ ಸಿಂಹಪಾಲು. ಈ ವಿಷಯವನ್ನು ಭಾರತದ ಆರಂಭಿಕ ಬಂಡವಾಳ ಹೂಡಿಕೆದಾರರ ಸಂಸ್ಥೆಯ ಅಧ್ಯಕ್ಷ ವಿಷ್ಣು ವರ್ಷ್ನೆ ಅವರು ತಿಳಿಸಿದ್ದಾರೆಂದು ನ್ಯೂಸ್‌ ವೀಕ್‌ ಪತ್ರಿಕೆ ವರದಿ ಮಾಡಿದೆ.

ಭಾರತದ ಬುದ್ಧಿಗೆ ಅಮೆರಿಕದಲ್ಲಿ ಬಂಗಾರದ ಬೆಲೆ ಇದೆ. ಅಮೆರಿಕದ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಸತತ ಬಂಡವಾಳ ಹೂಡಿಕೆಯ ಪರಿಣಾಮವಾಗಿ ಹಲವಾರು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ.

ಕೊನೆ ಕುಟುಕು : ಆರಂಭಿಕ ಬಂಡವಾಳ ಹೂಡುವ ಅಮೆರಿಕದ ಸಂಸ್ಥೆಗಳಲ್ಲಿ ಒಂದು ಸಾಮಾನ್ಯ ಅಭಿಪ್ರಾಯ ಇದೆ. ಕಡಿಮೆ ವೆಚ್ಚದಲ್ಲಿ ನಿಮಗೆ ಕಾರ್ಮಿಕರ ಅಗತ್ಯ ಇದ್ದರೆ ಚೀನಾಕ್ಕೆ ಹೋಗಿ. ಅದೇ, ಕಡಿಮೆ ದುಡ್ಡಿಗೆ ಬುದ್ಧಿವಂತರು ಬೇಕಿದ್ದರೆ ಭಾರತಕ್ಕೆ ಹೋಗಿ. ಈ ಎರಡೂ ರಾಷ್ಟ್ರಗಳಲ್ಲಿ ಅಪಾರ ಮಾನವ ಸಂಪನ್ಮೂಲ ಇದೆ. ಹೀಗಾಗಿ ಅಮೆರಿಕದ ಕಂಪನಿಗಳು ಇಲ್ಲಿಗೆ ಗುಳೆ ಏಳಬಾರದೆಂದೇ ಇತ್ತೀಚೆಗೆ ಅಮೆರಿಕಾ ಲಕ್ಷಾಂತರ ಎಚ್‌1ಬಿ ವೀಸಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more