• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಜಪೇಯಿ ಮಂಡಿಗಂಟಿದ ಯಾರನ್ನೂ ಬಿಡದ ಕಾಯಿಲೆ

By Staff
|

ಮುಂಬಯಿ : ಸೋಮವಾರ ಸೊಂಟ ನೋವು, ಮಂಗಳವಾರ ಮಂಡಿನೋವು, ಬುಧವಾರ ಬುರುಡೇ ನೋವು, ಗುರುವಾರ ಗುಂಡಿಗೆ (ಎದೆ) ನೋವು....... ನಾವು ಹುಡುಗರಾಗಿದ್ದಾಗ ಅಜ್ಜಿಯನ್ನು ಅಣಕಿಸಲು ಈ ಹಾಡು ಹೇಳುತ್ತಿದ್ದೆವು. ಬಹುಶಃ ಇದನ್ನು ನೀವೂ ಕೇಳಿರಬಹುದು. ಇಲ್ಲ ಹಾಡಿರಬಹುದು.

ಅಂದೇನೋ ಅಜ್ಜಿಯನ್ನು ಅಣಕಿಸುತ್ತಿದ್ದೆವು. ಈಗ ಹತ್ತಾರು ಗಂಟೆ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವ ಹರೆಯದ ಹುಡುಗರೇ ಸೊಂಟ ನೋವು, ಬೆನ್ನು ನೋವು, ಮಂಡಿ ನೋವು ಎನ್ನುತ್ತಾರೆ. ಅಂತಹದರಲ್ಲಿ 75ರ ವಯಸ್ಸಿನ ನಮ್ಮ ಪ್ರಧಾನಿ ವಾಜಪೇಯಿ ಅವರಿಗೆ ಮಂಡಿ ನೋವು ಕಾಣಿಸಿಕೊಂಡಿದೆ ಎಂದರೆ ಅವರು, ಹದಿನಾರರ ಹುಡಗರಿಗಿಂತ ಆರೋಗ್ಯವಾಗಿದ್ದಾರೆ ಎಂದೇ ಅರ್ಥ.

ಕಾಕತಾಳೀಯವೋ ಎಂಬಂತೆ ಮಂಗಳವಾರವೇ ಪ್ರಧಾನ ಮಂತ್ರಿಗಳ ಮಂಡಿ ನೋವಿನ ಶಸ್ತ್ರ ಚಿಕಿತ್ಸೆ ನಡೆದಿದೆ. ಮಂಗಳವಾರ ಬೆಳಗ್ಗೆ ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿಗಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಇನ್ನು ಹತ್ತು ದಿನದಲ್ಲೇ ಪ್ರಧಾನಿಯವರು ವಾಕಿಂಗ್‌ ಸ್ಟಿಕ್‌ ಹಿಡಿದು ನಡೆಯುತ್ತಾರೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.

ಸಾಮಾನ್ಯವಾಗಿ 75ರ ವಯಸ್ಸಿನಲ್ಲಿ ದೇಶದ ಸಂಪೂರ್ಣ ಜವಾಬ್ದಾರಿ ಹೊರುವುದು ಹುಡುಗಾಟದ ಮಾತಲ್ಲ. ಈ ವಯಸ್ಸಿನಲ್ಲಿ ವಯೋಧರ್ಮಕ್ಕನುಗುಣವಾಗಿ ನೆನಪಿನ ಶಕ್ತಿ ಕುಂಠಿತವಾಗುತ್ತದೆ. ಶ್ರವಣ ಶಕ್ತಿಯೂ ಕುಂದುತ್ತದೆ. ಕಣ್ಣಿನ ದೃಷ್ಟಿ ಮಂದವಾಗುತ್ತದೆ. ಇನ್ನು, ಹೃದಯ, ರಕ್ತದೊತ್ತಡ, ಮಧುಮೇಹ, ದೇಹ ಶಕ್ತಿ ಕುಂದುವುದು, ಮೈ ನಡುಗುವುದು ಇವೆಲ್ಲಾ ಈ ವಯಸ್ಸಿನಲ್ಲಿ ಸರ್ವ ಸಾಮಾನ್ಯವಾದದ್ದೇ.

ಆಸ್ಟಿಯೋ ಆರ್ಥ್ರೆೃಟಿಸ್‌ : ಈಗ ನಮ್ಮ ಪ್ರಧಾನಿ ವಾಜಪೇಯಿ ಅವರು ಎದುರಿಸುತ್ತಿರುವ ಸಮಸ್ಯೆ ಆಸ್ಟಿಯೋ ಆರ್ಥ್ರೆೃಟಿಸ್‌. ಮೊಣಕಾಲಿನಲ್ಲಿ ಮಂಡಿ ಚಿಪ್ಪು ಅತ್ಯಂತ ಪ್ರಮುಖ ಅಂಗ. ಇದು ನಮ್ಮ ಕೈಕಾಲುಗಳು ಸರಾಗವಾಗಿ ಅಲುಗಾಡಲು ನೆರವಾಗುತ್ತದೆ ಹಾಗೂ ಸರಾಗವಾಗಿ ಪಿಸ್ಟನ್‌ನಂತೆ ಕಾರ್ಯನಿರ್ವಹಿಸುವ ಮೂಳೆಗಳನ್ನು ರಕ್ಷಿಸುತ್ತದೆ. ವೃದ್ಧಾಪ್ಯಕ್ಕೆ ಮೊದಲು ದೇಹದಲ್ಲಿ ಉತ್ಪತ್ತಿಯಾಗುವ ದ್ರವ ಮೂಳೆಗಳ ಸಂದುಗಳಲ್ಲಿ ಕೀಲೆಣ್ಣೆಯಂತೆ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ಜಾಯಿಂಟ್‌ಗಳಲ್ಲಿ ಮೂಳೆಗಳು ಸರಾಗವಾಗಿ ಸಂಚರಿಸುತ್ತವೆ.

ವಯಸ್ಸು ಆದಂತೆ ನುಣುಪಾಗಿ ಜಾರಲು ಸಹಕರಿಸುವ ದ್ರವದ ಅಂಶ ಕ್ಷೀಣಿಸುತ್ತದೆ. ಇದರಿಂದ ಆಯಿಲ್‌ ಇಲ್ಲದ ಯಂತ್ರದ ಭಾಗಗಳು ತನಗೆ ತಾನೇ ಉಜ್ಜಿ ಸವೆಯುವಂತೆ, ಒಣಗಿದ ಮೂಳೆಗಳು ಒಂದಕ್ಕೊಂದು ಉಜ್ಜಿ ಸವೆಯುತ್ತವೆ. ಮೂಳೆಗಳು ಒಂದಕ್ಕೊಂದು ಒತ್ತುವ ಕಾರಣ ನೋವು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು.

ಮುಖಪುಟ / ಆಸ್ಪತ್ರೆಯಲ್ಲಿ ಅಟಲ್‌ / ಶುಭಕಾಮನೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more