• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ-ರ್ಮ-ನಿ- ಗ್ರೀ-ನ್‌-ಕಾ-ರ್ಡ್‌ ಗಾಳ-ವ- ಮೂಸ-ದಭಾರ-ತ-ದ ಐಟಿ ತಜ್ಞ-ರು

By Staff
|

ಫ್ರಾಂಕ್‌ಪರ್ಟ್‌ : ಗ್ರೀನ್‌ ಕಾರ್ಡ್‌ ಕೊಡುತ್ತೇವೆ, ನಮ್ಮ ದೇಶದ ಕಚೇರಿಗಳಲ್ಲಿ ನಿಮ್ಮ ಕಂಪ್ಯೂಟರ್‌ ಕೌಶಲ್ಯವನ್ನು ಪ್ರದರ್ಶಿಸಿ ಎಂದು ಜರ್ಮನಿ ದೇಶ ಭಾರತದ ಮಾಹಿತಿ ತಂತ್ರಜ್ಞಾನ ಪರಿಣತರಿಗೆ ನೀಡಿದ ಆಹ್ವಾನಕ್ಕೆ ತಣ್ಣ-ನೆ-ಯ ಪ್ರತಿ-ಕ್ರಿ-ಯೆ ವ್ಯಕ್ತ-ವಾ-ಗಿ-ದೆ.

ಅಮೆರಿಕಾದ ಆಹ್ವಾನ ಬಂದಾಗ ಮಾತ್ರ ದಡ ಬಡಾಯಿಸಿ ಓಡುವ ಭಾರತದ ಐಟಿ ತಂತ್ರಜ್ಞರು, ಜರ್ಮನಿಯ ಕರೆಗೆ ಅಂತಹ ಉತ್ಸಾಹವನ್ನೇನೂ ತೋರಲಿಲ್ಲ ಎಂದು ಗ್ರೀನ್‌ ಕಾರ್ಡ್‌ ಯೋಜನೆಯನ್ನು ರೂಪಿಸಿದ ಜರ್ಮನಿಯ ಅಧಿಕಾರಿಗಳು ಹೇಳುತ್ತಾರೆ.

ಫ್ರಾಂಕ್‌ ಫರ್ಟ್‌ನ ಆರ್ಥಿಕ ಅಭಿವೃದ್ಧಿ ಏಜೆನ್ಸಿಯಾಂದರ ಪ್ರಕಾರ ಗ್ರೀನ್‌ ಕಾರ್ಡ್‌ ನೀಡುವುದರ ಮೂಲಕ ವಿದೇಶೀ ಐಟಿ ತಂತ್ರಜ್ಞರನ್ನು ಆಹ್ವಾನಿಸಲು ಜರ್ಮನಿ ನಡೆಸಿದ ಪ್ರಯತ್ನ ಭಾರತೀಯ ಐಟಿ ತಂತ್ರಜ್ಞರ ಮೇಲೆ ಪರಿಣಾಮ ಬೀರುವಲ್ಲಿ ಸೋತಿದೆ. ‘ಭಾರತೀಯರಿಗೆ ಜರ್ಮನಿಯೆಂದರೆ ಆಕರ್ಷಣೆಯಿದೆ’ ಎನ್ನುವ ಮನೋಭಾವ ಜನಜನಿತವಾಗಿತ್ತು, ಆದರೆ ಈಗ ಅದು ಕೇವಲ ಭ್ರಮೆ ಎನ್ನುವುದು ಸಾಬೀತಾಗಿದೆ ಎಂದು ಏಜೆನ್ಸಿಯ ಕಾರ್ಯ ನಿರ್ವಾಹಕ ನಿರ್ದೇಶಕ ಹಾರ್ಟ್‌ಮಟ್‌ ಷ್ವೇಸಿಂಗರ್‌ ಹೇಳುತ್ತಾರೆ.

ಷ್ವೇ ಸಿಂಗರ್‌ ಅನು-ಭ-ವ ಕಥ-ನ : ಫ್ರಾಂಕ್‌ಫರ್ಟ್‌ನ ಕಾರ್ಮಿಕ ಕಚೇರಿಯ ನಿರ್ದೇಶಕ ಹ್ಯಾನ್ಸ್‌ ಪೀಟರ್‌ ಗ್ರೇಷಮೈರ್‌, ಅಧ್ಯಕ್ಷ ಹೆರಾಲ್ಡ್‌ ಫೆಡ್ಲರ್‌ ಮತ್ತಿ-ತರ ಅಧಿಕಾರಿಗಳ ತಂಡ, ಹಾರ್ಟ್‌ ಮಟ್‌ ನೇತೃತ್ವದಲ್ಲಿ ಕಳೆದ ತಿಂಗಳು ಭಾರತದ ಮುಂಬಯಿ, ಬೆಂಗಳೂರು, ಚೆನ್ನೈ-ನಂತಹ ಪ್ರಮುಖ ನಗರಗಳಲ್ಲಿ ಸಂಚರಿಸಿ ಜರ್ಮನಿ ಪರಿಚಯಿಸಿರುವ ಗ್ರೀನ್‌ ಕಾರ್ಡ್‌ ಯೋಜನೆಯನ್ನು ಭಾರತೀಯ ಐಟಿ ತಂತ್ರಜ್ಞರಿಗೆ ವಿವರಿಸಿ, ಅವರನ್ನು ಜರ್ಮನಿ ಮೂಲದ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಉದ್ಯೋಗಕ್ಕಾಗಿ ಆಹ್ವಾನಿಸಿತ್ತು . ಆದರೆ ಅವರಿಗೆ ಭಾರತದಲ್ಲಿ ಅಂತಹ ಉತ್ತಮ ಪ್ರತಿಕ್ರಿಯೆಯೇನೂ ಕಂಡು ಬಂದಿಲ್ಲ. ಸೆಮಿನಾರ್‌ಗಳು, ಆರೇಳು ಸುತ್ತಿನ ಓಲೈಕೆಯ ಮಾತುಕತೆಗಳೂ ಯಾವುದೇ ಪ್ರಯೋಜನ ನೀಡಲಿಲ್ಲ . ಗ್ರೀನ್‌ ಕಾರ್ಡ್‌ ಯೋಜನೆಯು ಜರ್ಮನಿಗೆ ಅನುಕೂಲವಾಗುವ ರೀತಿಯಲ್ಲಿದೆ ಎನ್ನುವ ಸಂಶಯವೂ ಭಾರತೀಯರಿಗಿದೆ. ಅಲ್ಲದೆ ಭಾರತೀಯ ಐಟಿ ತಂತ್ರಜ್ಞರೆಲ್ಲರೂ ಅಮೆರಿಕಾದಲ್ಲಿ ಕೆಲಸ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. ಅಲ್ಲಿ ತಮ್ಮ ಗೆಳೆಯರು ಮಾಡಿರುವ ಸಾಧನೆಗಳನ್ನು ಕಣ್ಣರಳಿಸಿ ನೋಡುತ್ತಾ ತಾವೂ ಅತ್ತ ಎಂದು ಪಯಣ ಬೆಳೆಸಿಯೇವು ಎಂದು ಕಾಯುತ್ತಿದ್ದಾರೆ ಎಂದು ಷ್ವೇ ಸಿಂಗರ್‌ ತಮ್ಮ ಭಾರತ ಪ್ರವಾಸದ ಅನುಭವ ವನ್ನು ಹಂಚಿಕೊಳ್ಳುತ್ತಿದ್ದಾರೆ.

ಗ್ರೀನ್‌ ಕಾರ್ಡ್‌ ಎಂದರೆ ಒಂದು ವರ್ಷ ಅವಧಿಯ , ಆದರೆ ಏಳು ಬಾರಿ ನವೀಕರಣ ಮಾಡಬಹುದಾದ ಕಾರ್ಮಿಕ ಪರವಾನಗಿ. ಷ್ವೇಸಿಂಗರ್‌ ಪ್ರಕಾರ ಗ್ರೀನ್‌ ಕಾರ್ಡ್‌ ಮೂಲಕ ಐಟಿ ತಂತ್ರಜ್ಞರನ್ನು ಆಹ್ವಾನಿಸುವ ಪ್ರಯತ್ನದಲ್ಲಿ ಜರ್ಮನಿ ಸೋತಿದೆ. ಆದರೆ ಭಾರತೀಯ ಸಾಫ್ಟ್‌ವೇರ್‌ ಕಂಪೆನಿಗಳಿಗೆ ಜರ್ಮನಿಯೂ ವಿದೇಶದಲ್ಲಿ ತಮ್ಮ ಕೇಂದ್ರಗಳನ್ನು ತೆರೆಯುವಲ್ಲಿ ಆಸಕ್ತಿಯಿದೆ. ಆ ಮೂಲಕ ಪ್ರಾದೇಶಿಕ ಕಂಪ್ಯೂಟರ್‌ ಕಂಪೆನಿಗಳಿಗೂ ಜರ್ಮನಿಯಲ್ಲಿರುವ ಕಂಪ್ಯೂಟರ್‌ ತಜ್ಞರಿಂದ ಫಾಯಿದೆ ಪಡೆಯಬಹುದು ಎನ್ನುವ ನಿಲುವು ಈ ಸಾಫ್ಟ್‌ವೇರ್‌ ಕಂಪೆನಿಗಳದು .

ಐಟಿ ಸಿರ್ಟಿಫಿಕೇಟ್‌ ಇಲ್ಲ : ಗ್ರೀನ್‌ ಕಾರ್ಡ್‌ ಯೋಜನೆಯ ಪ್ರಕಾರ ಭಾರತೀಯರು ಗ್ರೀನ್‌ ಕಾರ್ಡ್‌ ಅಭ್ಯರ್ಥಿಗಳಾಗಬೇಕಿದ್ದರೆ, ಅವರ ಐಟಿ ಅರ್ಹತೆಗೆ ಸಾಕ್ಷಿಯಾಗಿ ಐಟಿ ಸರ್ಟಿಫಿಕೇಟ್‌ ಇರಬೇಕು. ಭಾರತೀಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ , ಐಟಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸರ್ಟಿಫಿಕೇಟ್‌ ನೀಡುವ ಪರಿಪಾಠ ಇಲ್ಲ ಎನ್ನುವುದೂ ಗ್ರೀನ್‌ ಕಾರ್ಡ್‌ ಯೋಜನೆಯ ವೈಫಲ್ಯಕ್ಕೆ ಒಂದು ಕಾರಣ ವಾಗಿ-ದೆ.

ಏಕೈಕ ಲಾಭವೆಂದರೆ : ಭಾರತ ಪ್ರವಾಸದಿಂದಾಗಿ ಆಗಿರುವ ಲಾಭವೆಂದರೆ ಟಾಟಾ ಇನ್ಫೋಟೆಕ್‌ ಕಂಪೆನಿಯು ಜರ್ಮನಿಯ ಇಂಜಿನಿಯರ್‌ಗಳಿಗೆ ಎರಡು ವರ್ಷಗಳ ಕಾಲ ತರಬೇತಿ ನೀಡಲು ಒಪ್ಪಿಕೊಂಡಿರುವುದು ಎ-ನ್ನು-ವು-ದ-ರೊಂ-ದಿ-ಗೆ ಷ್ವೇ-ಸಿಂ-ಗ-ರ್‌ ಭಾರತ ಪ್ರವಾಸದ ಅನುಭವ ಕ-ಥನ ಮುಗಿ-ಯು-ತ್ತ-ದೆ.

(ಐಎ-ಎ-ನ್‌-ಎ-ಸ್‌)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more