• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಧಾನಕ್ಕೆ ಆರ್‌. ಗೋಪಾಲ್‌ ಬದಲು ವಿ. ಗೋಪಾಲ್‌ ?

By Staff
|

ಬೆಂಗ-ಳೂ-ರು :ವೀರ-ಪ್ಪ-ನ್‌ ಮನ-ವೊ-ಲಿ-ಸ-ಲು ಗೋಪಾ-ಲ್‌ ಬದ-ಲಿ-ಗೆ ಬೇರೆ ಯಾರನ್ನಾದರೂ - ಕಾ-ಡಿ-ಗೆ ಕಳು-ಹಿ-ಸುವ ಬಗೆ-ಗೆ ಕರ್ನಾಟಕ ಸರ್ಕಾ-ರ ಯೋಚಿ-ಸು-ತ್ತಿ-ದೆ ಎಂಬಂತಹ ಮಾತುಗಳು ಇದೀಗ ಕೇಳಿಬರುತ್ತಿವೆ. ಗೋಪಾಲ್‌ ಮೂರು ಬಾರಿ ಸಂಧಾನ ನಡೆಸಿದರೂ ವೀರ-ಪ್ಪ-ನ್‌ ಮನವೊಲಿಸಲು ಸಾಧ್ಯವಾಗದಿರುವುದೇ ಬದಲಿ ವ್ಯವಸ್ಥೆಗೆ ಕಾರಣ ಎಂದೂ ಹೇಳಲಾಗುತ್ತಿದೆ. ಮುಖ್ಯಮಂತ್ರಿ ಕೃಷ್ಣ ಅವರು ಈಗಾಗಲೇ ಹೇಳಿರುವಂತೆ ಸರಕಾರ ಹೊಸಕಾರ್ಯತಂತ್ರ ದ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.

ಹೊಸ ಕಾರ್ಯತಂತ್ರ ಅಂದರೆ , ರಾಜ್‌ಕುಮಾರ್‌ ಅಪಹರಣ ವಿದ್ಯಮಾನಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಬಂದಿರುವ ಪಂಡಿತರ ಪ್ರಕಾರ ಇದೀಗ ಕಾಡಿಗೆ ತೆರಳಲು ಇನ್ನೊಬ್ಬ ಗೋಪಾಲ್‌ ಸಜ್ಜಾಗುತ್ತಿದ್ದಾರೆ. ಯಾರೀ ಗೋಪಾಲ್‌? ಮೈಸೂರು ಜೈಲಿನಲ್ಲಿರುವ ವೀರಪ್ಪನ್‌ನ 51 ಸಹಚರರನ್ನು ಬಿ-ಡಿ-ಸ-ಲು ವೇಣು-ಗೋ-ಪಾ-ಲ್‌ ಹೋರಾ-ಡು-ತ್ತಿ-ದ್ದಾ-ರೆ. ವೇಣುಗೋಪಾಲ್‌ ಟಾಡಾ ಕೈದಿಗಳ ಪರ ವಕೀಲ. ಟಾಡಾ ಮೊಕ-ದ್ದ-ಮೆ-ಗ-ಳ-ನ್ನು ರದ್ದು-ಪ-ಡಿ-ಸು-ವ-ಲ್ಲಿ ಅವ-ರು ಯಶ-ಸ್ವಿ-ಯಾ-ಗಿದ್ದರು. ಆದರೆ, ಅಬ್ದು-ಲ್‌ ಕರೀಂ ಸಲ್ಲಿಸಿರುವ ವಿಶೇಷ ತೆರವು ಅರ್ಜಿಯಿಂದಾಗಿ ಬಂದಿಗಳ ಬಿಡುಗಡೆ ವಿಳಂ-ಬ-ವಾ-ಯಿತು.

ವೀರಪ್ಪನ್‌ ಸಹಚರರ ಪರ ವಕಾಲತ್ತು ವಹಿಸಿ, ಯಶಸ್ವಿಯಾಗಿರುವ ವೇಣುಗೋಪಾಲ್‌ ಅವರನ್ನು ಸಂಧಾನಕಾರರಾಗಿ ಕಳುಹಿಸಿದರೆ, ರಾಜ್‌ ಬಿಡುಗಡೆ ತ್ವರಿತವಾಗಿ ಆಗಬಹುದು ಎಂದು ಸರಕಾರ ಆಶಿಸಿದ್ದು, ಈ ಬಗ್ಗೆ ಸಮಾಲೋಚನೆಗಳು ಭರದಿಂದ ನಡೆಯುತ್ತಿವೆ ಎಂದು ಗೊತ್ತಾಗಿದೆ.

ಅಗತ್ಯ ಬಿದ್ದರೆ ಮತ್ತೊಮ್ಮೆ ಕಾಡಿಗೆ ಹೋಗುವುದಾಗಿ ಗೋಪಾಲ್‌

ಚೆನ್ನೈ ವರದಿ : ಕರ್ನಾಟಕ ಜೈಲಿನಲ್ಲಿ ರುವ ತನ್ನ 121 ಮಂದಿ ಸಹಚರರು ಹಾಗೂ ತಮಿಳುನಾಡು ಜೈಲಿನಲ್ಲಿರುವ ಐವರು ಉಗ್ರಗಾಮಿಗಳನ್ನೂ ಬಿಡಬೇಕು , ಅಲ್ಲಿಯವರೆಗೆ ರಾಜ್‌ ಕುಮಾರ್‌ ಅವರನ್ನು ಬಿಡಲು ಸಾಧ್ಯವಿಲ್ಲ ಎಂದು ವೀರಪ್ಪನ್‌ ಖಂಡತುಂಡವಾಗಿ ಹೇಳಿಬಿಟ್ಟಿದ್ದಾನೆ ಎಂದು ಗೋಪಾಲ್‌ ತಿಳಿಸಿದ್ದಾರೆ.

ಕಾಡಿನಿಂದ ಚೆನ್ನೈಗೆ ಬುಧವಾರ ಬೆಳಗ್ಗೆ ಬರಿಗೈಲಿ ಹಿಂತಿರುಗಿದ ಗೋಪಾಲ್‌ ಅವರು, ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕೋರ್ಟ್‌ ತಡೆಯ ಅರಿವಿದೆ : ಬಂದಿಗಳ ಬಿಡುಗಡೆಗೆ ಸರ್ವೋನ್ನತ ನ್ಯಾಯಾಲಯ ನೀಡಿರುವ ತಡೆಯ ಬಗ್ಗೆ ವೀರಪ್ಪನ್‌ಗೆ ಸಂಪೂರ್ಣ ಅರಿವಿದೆ. ಎರಡೂ ಸರಕಾರದ ಪ್ರಯತ್ನಗಳ ಬಗ್ಗೆ ಆತ ಸಮಾಧಾನ ವ್ಯಕ್ತಪಡಿಸಿದ್ದಾನೆ. ಆದರೆ, ತನ್ನ ಈ ಪ್ರಮುಖ ಬೇಡಿಕೆಗಳ ವಿಷಯದಲ್ಲಿ ರಾಜಿಗೆ ಆತ ಸಿದ್ಧನಿಲ್ಲ ಎಂದು ಗೋಪಾಲ್‌ ತಿಳಿಸಿದ್ದಾರೆ.

ಹೊಸ ಬೇಡಿಕೆ ಇಲ್ಲ : ತನ್ನ ಹಿಂದಿನ ಬೇಡಿಕೆಗಳಿಗೇ ವೀರಪ್ಪನ್‌ ಕಟ್ಟು ಬಿದ್ದಿದ್ದಾನೆ. ಈ ಬಾರಿ ಯಾವುದೇ ಹೊಸ ಬೇಡಿಕೆಗಳನ್ನು ಆತ ಇಟ್ಟಿಲ್ಲ ಎಂದು ಗೋಪಾಲ್‌ ಸ್ಪಷ್ಟಪಡಿಸಿದ್ದಾರೆ. ಟಾಡಾ ಹಾಗೂ ಐವರು ಉಗ್ರಗಾಮಿಗಳ ಬಿಡುಗಡೆ ವಿಷಯ ಈಗ ಸರ್ವೋನ್ನತ ನ್ಯಾಯಾಲಯದಲ್ಲಿ ಇರುವ ಕಾರಣ ಹಾಗೂ ಈ ಆರೋಪಿಗಳ ಬಿಡುಗಡೆಯಾಗುವ ತನಕ ರಾಜ್‌ರನ್ನು ಬಿಡಲು ವೀರಪ್ಪನ್‌ ಒಪ್ಪದಿರುವುದರಿಂದ ತಾವು ಕಾಡಿನಲ್ಲಿ ಉಳಿಯುವುದರಲ್ಲಿ ಅರ್ಥವಿಲ್ಲ ಎಂದು ಗೋಪಾಲ್‌ ಹೇಳಿದ್ದಾರೆ. ವೀರಪ್ಪನ್‌ನ ಈ ಬಿಗಿ ನಿಲುವಿನ ಬಗ್ಗೆ ಕರುಣಾನಿಧಿ ಅವರಿಗೆ ವಿವರಿಸಿರುವುದಾಗಿ ಗೋಪಾಲ್‌ ಹೇಳಿದ್ದಾರೆ.

ಸರಕಾರಗಳು ಬಯಸಿದರೆ ಮತ್ತೆ ಕಾಡಿಗೆ : ಎರಡೂ ಸರಕಾರಗಳು ಬಯಸಿದರೆ ಹಾಗೂ ಅಗತ್ಯ ಬಿದ್ದರೆ, ತಾವು ಮತ್ತೊಮ್ಮೆ ಕಾಡಿಗೆ ತೆರಳುವುದಾಗಿ ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಾ ಗೋಪಾಲ್‌ ತಿಳಿಸಿದರು.

(ಇನ್ಫೋ ವರದಿ, ಮೈಸೂರು - ಚೆನ್ನೈ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more