• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನು ಕೆಲವೇ ಗಂಟೆಗಳಲ್ಲಿ ವಾಜಪೇಯಿ ಅಮೆರಿಕ ಯಾತ್ರೆ ಆರಂಭ

By Staff
|

ನವದೆಹಲಿ : ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬುಧವಾರ ಮಧ್ಯರಾತ್ರಿ ಅಮೆರಿಕಾ ಪ್ರವಾಸಕ್ಕಾಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ಅವರು, ತಮ್ಮ ಈ ಮಹತ್ವದ ಭೇಟಿಯ ಕಾಲದಲ್ಲಿ ಮಾಹಿತಿ ತಂತ್ರಜ್ಞಾನ, ಮೂಲಭೂತ ಸೌಕರ್ಯ, ವಿದ್ಯುತ್‌ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.

ಗಡಿಯಾಚೆಯ ಭಯೋತ್ಪಾದನೆ, ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮ ಮುಂತಾದ ವಿಷಯಗಳ ಬಗ್ಗೆ ವಾಜಪೇಯಿ ಅವರು ಅಮೆರಿಕ ಅಧ್ಯಕ್ಷರೊಂದಿಗೆ ಚರ್ಚಿಸಲಿದ್ದಾರೆ. ಈ ತಿಂಗಳ 15ರಂದು ಈ ಇಬ್ಬರು ನಾಯಕರು ಅಧಿಕೃತವಾಗಿ ಭೇಟಿಯಾಗಲಿದ್ದಾರೆ. 15 ದಿನಗಳ ಕಾಲದ ಈ ಪ್ರವಾಸ ಕಾರ್ಯಕ್ರಮದಲ್ಲಿ ಅಮೆರಿಕದ ಹಲವು ನಿಯೋಗಗಳೊಂದಿಗೆ ಸಹ ಪ್ರಧಾನಿ ಅವರು ಸಮಾಲೋಚನೆ ನಡೆಸುತ್ತಾರೆ. ವಾಜಪೇಯಿ ಅವರೊಂದಿಗೆ ಕೇಂದ್ರ ಮಂತ್ರಿಗಳಾದ ಜಸ್ವಂತ್‌ ಸಿಂಗ್‌, ಯಶವಂತ ಸಿನ್ಹ ಮತ್ತು ಮುರಸೋಳಿ ಮಾರನ್‌ ಅವರು ಸಹ ತೆರಳುತ್ತಿದ್ದಾರೆ. ಮಂಡಿ ನೋವಿನ ಕಾರಣ ಪ್ರಧಾನಿ ಅವರ ಅಮೆರಿಕಾ ಪ್ರವಾಸ 2 ದಿನ ತಡವಾಗಿದೆ.

ದ್ವಿಪಕ್ಷೀಯ ಸಂಬಂಧ ಬಲಗೊಳಿಸುವ ಪ್ರವಾಸ : ಪ್ರಧಾನಿಯವರ ಈ ಭೇಟಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲಿದೆ. ಮಂಡಿ ನೋವಿನ ಕಾರಣ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 10ರಿಂದ ಮೂರು ದಿನಗಳ ಕಾಲ ವಾಜಪೇಯಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಸ್ಯಾನ್‌ ಪ್ರಾನ್ಸಿಸ್ಕೋದ ಸಿಲಿಕಾನ್‌ ವ್ಯಾಲಿ ಭೇಟಿ ಕಾರ್ಯಕ್ರಮ ರದ್ದಾಗಿದೆ. ಆದಾಗ್ಯೂ ಪ್ರಧಾನಿಯವರ ಬಿಡುವಿಲ್ಲದ ಕಾರ್ಯಕ್ರಮ ಪಟ್ಟಿ ಸಿದ್ಧವಾಗಿದೆ. ಅಮೆರಿಕಾ ಹಾಗೂ ಭಾರತ ಉದ್ಯಮಿಗಳು ಭಾಗವಹಿಸುವ ಸಭೆಯಲ್ಲಿ ಪ್ರಧಾನಿ ಪಾಲ್ಗೊಳ್ಳುತ್ತಿದ್ದಾರೆ.

ಗುರುವಾರ ಮಧ್ಯಾಹ್ನ ಅಮೆರಿಕಾ ತಲುಪುವ ವಾಜಪೇಯಿ ವಿಶ್ರಾಂತಿಯ ಬಳಿಕ ಏಷ್ಯಾ ಸಮಾಜ ಏರ್ಪಡಿಸಿರುವ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ. ಶುಕ್ರವಾರ ಅಟಲ್‌ ಅವರು ವಿಶ್ವಸಂಸ್ಥೆಯ ಸಹಸ್ರಮಾನದ ಶೃಂಗಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು, ಬಾಂಗ್ಲಾ ಹಾಗೂ ನೇಪಾಳ ಪ್ರಧಾನಿಯವರೊಂದಿಗೆ ಕೂಡ ಮಾತುಕತೆ ನಡೆಸುವ ಕಾರ್ಯಕ್ರಮ ಇದೆ.

ಅಮೆರಿಕದ ಭಾರತೀಯ ವಿದ್ಯಾಭವನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವರು, ಆಯುರ್ವೇದ ಸಮಾವೇಶದಲ್ಲಿ ಭಾಗವಹಿಸುವರು. ಎರಡು ಪುಸ್ತಕಗಳನ್ನೂ ಅವರು ಬಿಡುಗಡೆ ಮಾಡಲಿದ್ದಾರೆ. ಸೆ.14ರಂದು ಪ್ರಧಾನಿಯವರಿಗೆ ಕ್ಯಾಪಿಟಲ್‌ ಹಿಲ್ಸ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತದೆ. ವಾಜಪೇಯಿ ಅವರು ಅಮೆರಿಕ ಕಾಂಗ್ರೆಸ್‌ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವೂ ಇದೆ.

15ರಂದು ಕ್ಲಿಂಟನ್‌ ಭೇಟಿ ಮಾಡುವ ಅಟಲ್‌, 16ರಂದು ಮಹಾತ್ಮಾ ಗಾಂಧೀ ಸ್ಮಾರಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಿಲರಿ ಕ್ಲಿಂಟನ್‌ ಅವರು ಏರ್ಪಡಿಸಿರುವ ಔತಣಕೂಟದಲ್ಲಿ ಪಾಲ್ಗೊಂಡ ನಂತರ ಪ್ರಧಾನಿ ಪ್ರಾಂಕ್‌ಫರ್ಟ್‌ನಲ್ಲಿ ವಿಶ್ರಾಂತಿ ಪಡೆದು ಭಾರತಕ್ಕೆ ಹಿಂತಿರುಗುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more