ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಪಾಲ್‌- ರಜನಿ -ಕೃಷ್ಣ -ಪಾರ್ವತಮ್ಮ ಗೌಪ್ಯ ಮಾತುಕತೆ

By Super
|
Google Oneindia Kannada News

ಬೆಂಗಳೂರು : ಬುಧವಾರ ಸಂಜೆ 7 ಗಂಟೆಗೆ ವಿಮಾನದಲ್ಲಿ ಬೆಂಗಳೂರಿಗೆ ಹಾರಿಬಂದ ಸಂಧಾನಕಾರ ಗೋಪಾಲ್‌ ಹಾಗೂ ಚಿತ್ರನಟ ರಜನಿಕಾಂತ್‌ ಅವರು ಈ ಹೊತ್ತು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರೊಂದಿಗೆ ರಹಸ್ಯ ಮಾತುಕತೆಯಲ್ಲಿ ತಲ್ಲೀನರಾಗಿದ್ದಾರೆ.

ಗೋಪಾಲ್‌ ಹಾಗೂ ರಜನಿಕಾಂತ್‌ ಅವರನ್ನು ಸಂಪೂರ್ಣ ಬಿಗಿ ಭದ್ರತೆಯಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ಕೃಷ್ಣ ಅವರ ಅಧಿಕೃತ ನಿವಾಸ ಅನುಗ್ರಹಕ್ಕೆ ಕರೆತರಲಾಯಿತು. ಅನುಗ್ರಹದಲ್ಲಿ ಈಗ ಪಾರ್ವತಮ್ಮ ರಾಜ್‌ಕುಮಾರ್‌ ಹಾಗೂ ನಟ ಹಾಗೂ ಸಂಸತ್‌ ಸದಸ್ಯ ಅಂಬರೀಶ್‌ ಅವರೂ ಇದ್ದಾರೆ.

ಗೋಪಾಲ್‌ ಅವರು ಕಾಡಿನಿಂದ ತಂದಿರುವ ಹೊಸ ಕ್ಯಾಸೆಟ್‌ಗಳು ಹಾಗೂ ಖುದ್ದು ವರ್ತಮಾನಗಳ ಹಿನ್ನೆಲೆಯಲ್ಲಿ ಈ ಮಹತ್ವದ ಮಾತುಕತೆಗಳು ನಡೆಯುತ್ತಿವೆ. ಅತ್ತ ಕರುಣಾನಿಧಿ ಅವರು ತಾವೂ 8ರಂದು ಬೆಂಗಳೂರಿಗೆ ಹೋಗುತ್ತಿರುವುದಾಗಿ ಚೆನ್ನೈನಲ್ಲಿ ತಿಳಿಸಿದ್ದಾರೆ. ಬೆಂಗಳೂರಿಗೆ ಬರುವ ಕರುಣಾನಿಧಿ ಅವರು ಕೃಷ್ಣ ಅವರೊಂದಿಗೆ ಸಮಾಲೋಚನೆ ನಡೆಸಿ, ಹೊಸ ಸಂಧಾನಕಾರನನ್ನು ಕಾಡಿಗೆ ಕಳಿಸುವ ಬಗ್ಗೆ ಚಿಂತಿಸಲಾಗುವುದು ಎಂದೂ ತಿಳಿಸಿದ್ದಾರೆ. ಈ ಹಂತದಲ್ಲಿ ಪರ್ಯಾಯ ಕಾರ್ಯತಂತ್ರ ಸರಿಯಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಗೋಪಾಲ್‌ ಹಾಗೂ ಕರ್ನಾಟಕ ಸರ್ಕಾರದ ನಡುವಿನ ರಹಸ್ಯ ಮಾತುಕತೆಗಳ ವಿವರವನ್ನು ಸರ್ಕಾರ ಈ ವರೆಗೆ ಬಹಿರಂಗಗೊಳಿಸಿಲ್ಲ. ಗೋಪಾಲ್‌ ಅವರ ಸಂದರ್ಶನ, ಮುಖ್ಯಮಂತ್ರಿಗಳ ವಿವರಣೆ, ರಜನಿಕಾಂತ್‌ ಅಭಿಪ್ರಾಯಕ್ಕಾಗಿ ಪತ್ರಕರ್ತರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಆದರೂ, ಮಾತುಕತೆಗಳ ಫಲಶ್ರುತಿ ಹೊರ ಬೀಳಲಿದೆ.(ಇನ್‌ಫೋ ವರದಿ)

English summary
Gopal, krishna, parvtamma rajkumar, rajanikanth locked in a meeting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X