ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ರಂದು ಮೈಸೂರಿಗೆ ದಸರಾ ಆನೆಗಳ ಆಗಮನ

By Staff
|
Google Oneindia Kannada News

ಮೈಸೂರು : ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಕನ್ನಡ ನಾಡಿನಲ್ಲಿ ಸಂಭ್ರಮ, ಸಡಗರ. ದಸರೆ ನಮ್ಮ ನಾಡಹಬ್ಬ. ಸೆಪ್ಟೆಂಬರ್‌ 28ರಿಂದ ಆರಂಭವಾಗುವ ಈ ನವರಾತ್ರಿಯ ಉತ್ಸವದಲ್ಲಿ ನಾಡಿನ ಜನತೆ ನಾಡದೇವಿಯಾದ ಭುವನೇಶ್ವರಿ, ಮೈಸೂರು ಒಡೆಯರ ಕುಲದೇವತೆಯಾದ ಶ್ರೀಚಾಮುಂಡಾಬಿಕೆ, ಕಾಳರಾತ್ರಿ, ವಿದ್ಯಾಧಿದೇವತೆಯಾದ ಸರಸ್ವತಿ, ಆಯುಧಪೂಜೆ, ಗಜಾಶ್ವಾದಿ ಪೂಜೆ ಮುಂತಾದುವನ್ನು ಶಾಸ್ತ್ರೋಕ್ತವಾಗಿ ಆಚರಿಸುತ್ತಾರೆ.

ದಶಮಿಯ ದಿನ ನಡೆಯುವ ಜಂಬೂ ಸವಾರಿ ವಿಶ್ವವಿಖ್ಯಾತ ದಸರೆಯ ಹೆಮ್ಮೆಯ ಉತ್ಸವ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹಾಗೂ ಚಿನ್ನದ ಅಂಬಾರಿಯನ್ನು ಹೊರಲು ಹೆಗ್ಗಡ ದೇವನ ಕೋಟೆಯಿಂದ ಆನೆಗಳು ಮೈಸೂರು ನಗರಿಗೆ ಆಗಮಿಸಲಿವೆ. ಸೆಪ್ಟೆಂಬರ್‌ 9 ರಂದು ಮೊದಲ ಕಂತಿನ ಆನೆಗಳ ತಂಡ ಅರಮನೆಗಳ ನಗರಿಗೆ ಬರಲಿದೆ.

ಅರಮನೆಯ ಪೂರ್ವ ದ್ವಾರದಲ್ಲಿ ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌. ವಿಶ್ವನಾಥ್‌ ಅವರು ಈ ಆನೆಗಳನ್ನು ಆದರದಿಂದ ಬರಮಾಡಿಕೊಳ್ಳಲಿದ್ದಾರೆ. ದಸರೆಯ ಪೂರ್ವ ಸಿದ್ಧತೆಗಳಿಗಾಗಿ ಬುಧವಾರ ವಿಭಾಗಾಧಿಕಾರಿ ಜಿ.ಕೆ. ಲೋಕರೆ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಗಳ ಸಭೆ ಕರೆಯಲಾಗಿದೆ.

ರಾಜ್‌ಕುಮಾರ್‌ ಅವರ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ , ರಾಜ್‌ ಅಪಹರಣದ ಬಿಸಿ ಈ ಬಾರಿಯ ದಸರಾ ಮಹೋತ್ಸವಕ್ಕೂ ತಟ್ಟೀತೆ? ಎಂಬ ಬಗ್ಗೆಯೂ ಬುಧವಾರದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X