ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ...

By Prasad
|
Google Oneindia Kannada News

Veerappan
ಪ್ರತಿವರ್ಷ ಭೀಮನ ಅಮವಾಸ್ಯೆ ಬಂದರೆ ರಾಜಣ್ಣನ ನೆನಪು ಕಾಡದೆ ಇರದು. ಸರಿಯಾಗಿ ಹತ್ತು ವರ್ಷಗಳ ಹಿಂದೆ ಆ ಕರಾಳ ರಾತ್ರಿಯಂದೇ ಕಾಡುಗಳ್ಳ ಕರ್ನಾಟಕದ ಅನಭಿಷಿಕ್ತ ದೊರೆಯನ್ನು ಅಪಹರಿಸಿದ್ದು. ಅಂದು ಅಪಹರಣ ನಡೆದದ್ದು ಹೇಗೆ? ಸನ್ನಿವೇಶ ಹೇಗೆ ಸೃಷ್ಟಿಯಾಗಿತ್ತು ಎಂಬುದನ್ನು ತಿಳಿಸಲು ಅಂದಿನ ಆ ಲೇಖನವನ್ನು ಮರು ಪ್ರಕಟಿಸಲಾಗಿದೆ - ಸಂಪಾದಕ.

ಬೆಂಗಳೂರು, ಜು. 31, 2000 : ಡಾ. ರಾಜ್‌ ಕುಮಾರ್‌ ಅವರು ಸಪತ್ನೀಕರಾಗಿ ನಾಲ್ಕು ದಿನ ಸಂತೋಷದಿಂದ ಕಾಲಕಳೆಯಲು ತಮಿಳುನಾಡಿನ ತಾಳವಾಡಿಯ ತೋಟದ ಮನೆಯಲ್ಲಿ ತಂಗಿದ್ದರು. ಭಾನುವಾರ ರಾತ್ರಿ 9.30ರಲ್ಲಿ ಊಟ ಮಾಡಿ ಡಾ. ರಾಜ್‌ ಅವರು ಟಿ.ವಿ ನೋಡುತ್ತಿದ್ದಾಗ, ಶಸ್ತ್ರಸಜ್ಜಿತರಾಗಿದ್ದ ಸುಮಾರು 12 ಮಂದಿ ವೀರಪ್ಪನ್‌ ಸಹಚರರು ಡಾ. ರಾಜ್‌ ಅವರ ತೋಟಮನೆಗೆ ಮುತ್ತಿಗೆ ಹಾಕಿದರು.

ಡಾ. ರಾಜ್‌ಕುಮಾರ್‌, ಅವರ ಅಳಿಯ ಎಸ್‌. ಎ. ಗೋವಿಂದರಾಜ್‌, ಡಾ. ರಾಜ್‌ ಅವರ ಸಂಬಂಧಿ ನಾಗೇಶ್‌ ಮತ್ತು ನಾಗಪ್ಪ ಎನ್ನುವವರನ್ನು ವೀರಪ್ಪನ್‌ ಸಹಚರರು ಅಪಹರಿಸಿದ್ದಾರೆ. ಈ ಅಪಹರಣದ ನೇತೃತ್ವವನ್ನು ಸ್ವತಃ ವೀರಪ್ಪನ್‌ನೇ ವಹಿಸಿದ್ದ. ಡಾ. ರಾಜ್‌ ಹಾಗೂ ಇತರರನ್ನು ತನ್ನ ವಶಕ್ಕೆ ತೆಗೆದುಕೊಂಡ ವೀರಪ್ಪನ್‌ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಅವರಿಗೆ ಕೊಡುವಂತೆ ತಿಳಿಸಿ ಆಡಿಯೋ ಕ್ಯಾಸೆಟ್‌ ಒಂದನ್ನು ಕಳುಹಿಸಿಕೊಟ್ಟ . ಈ ವಿವರಗಳನ್ನು ಕೃಷ್ಣ ಇಂದು ಬೆಳಗ್ಗೆ ಸುದ್ದಿಗಾರರಿಗೆ ತಿಳಿಸಿದರು.

ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಈ ವಿಷಯವನ್ನು ಮುಖ್ಯಮಂತ್ರಿಗಳಿಗೆ ದೂರವಾಣಿಯಲ್ಲಿ ತಿಳಿಸಿದ ಕೂಡಲೇ ಮುಖ್ಯಮಂತ್ರಿಗಳು, ಗೃಹ ಸಚಿವರು, ಗೃಹ ಕಾರ್ಯದರ್ಶಿ, ರಾಜ್ಯದ ಪೊಲೀಸ್‌ ಮಹಾನಿರ್ದೇಶಕರೊಂದಿಗೆ ಸಮಾಲೋಚನೆ ನಡೆಸಿದರು.

ಸೋಮವಾರ ನಸುಕಿನಲ್ಲಿ ಅಂದರೆ ಸುಮಾರು 2 ಗಂಟೆ ಹೊತ್ತಿಗೆ ಪಾರ್ವತಮ್ಮ ಅವರು ವೀರಪ್ಪನ್‌ ಕೊಟ್ಟು ಕಳುಹಿಸಿದ್ದ ಕ್ಯಾಸೆಟ್‌ನೊಂದಿಗೆ ಮುಖ್ಯಮಂತ್ರಿಗಳ ನಿವಾಸ ತಲುಪಿದರು. ಅಲ್ಲಿ ನಡೆದ ಎಲ್ಲ ವಿವರಗಳನ್ನೂ ಮುಖ್ಯಮಂತ್ರಿಗಳಿಗೆ ಪಾರ್ವತಮ್ಮನವರು ತಿಳಿಸಿದರು. ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ರಾಜ್‌ ಅವರ ಪುತ್ರರು, ಕುಟುಂಬವರ್ಗದವರೂ ಹಾಗೂ ಚಿನ್ನೇಗೌಡ ಹಾಜರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಮಿಳು ನಾಡಿನ ಮುಖ್ಯಮಂತ್ರಿಗಳೊಂದಿಗೆ ಸಹ ಮಾತುಕತೆ ನಡೆಸಿದ್ದು, ವೀರಪ್ಪನ್‌ ಕಳುಹಿಸಿರುವ ಆಡಿಯೋ ಕ್ಯಾಸೆಟ್‌ ಹಿನ್ನೆಲೆಯಲ್ಲಿ ಮುಖತಃ ಮಾತುಕತೆ ನಡೆಸಲು ಚೆನ್ನೈಗೆ ಧಾವಿಸಿದ್ದಾರೆ. ಮುಖ್ಯಮಂತ್ರಿಗಳ ಸಂಗಡ ಡಾ. ರಾಜ್‌ ಅವರ ಇಬ್ಬರು ಪುತ್ರರು ಹಾಗೂ ಪಾರ್ವತಮ್ಮನವರೂ ಚೆನ್ನೈಗೆ ತೆರಳಿದ್ದಾರೆ.

ಅಮಾವಾಸ್ಯೆ ರಾತ್ರಿ ಅಂದುಕೊಂಡದ್ದು ಕಾಡುಗಳ್ಳ ಸಾಧಿಸಿದ್ದು ಹೀಗೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X