• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡದ ಬಳಿಯಾಂದು ಪಕ್ಷಿಧಾಮ

By Super
|

ಧಾರವಾಡದ ಬಳಿಯಾಂದು ಪಕ್ಷಿಧಾಮರಂಗನತಿಟ್ಟಿನ ಸೊಬಗು ಧಾರವಾಡ ಬಳಿಯ ಬೇಲೂರಿಗೆ ಬಂದಿದೆ. ಹಲವು ಪಕ್ಷಿಗಳಿಲ್ಲಿ ಬೀಡು ಬಿಟ್ಟಿವೆ ಧಾರವಾಡ : ಕೊಕ್ಕರೆಯ ಬೆಳ್ಳೂರು, ವಿಶ್ವವಿಖ್ಯಾತ ರಂಗನತಿಟ್ಟು, ತುಮಕೂರು ಜಿಲ್ಲೆಯ ಕಗ್ಗಲಡು, ಮಂಡಗದ್ದೆ ಹಾಗೂ ಶಿವಮೊಗ್ಗ ಸನಿಹದ ಗುಡವಿ ಪಕ್ಷಿಧಾಮಗಳಗೆ ದೇಶ ವಿದೇಶದ ಅಪರೂಪದ ಹಕ್ಕಿಗಳು ಆಗಮಿಸಿ ನಿರ್ದಿಷ್ಟ ಅವಧಿಯವರೆಗೆ ತಂಗಿ ಮತ್ತೆ ತಮ್ಮ ಮಕ್ಕಳು ಮರಿಯಾಂದಿಗೆ ಸ್ವಸ್ಥಾನಕ್ಕೆ ಮರಳುತ್ತವೆ.

ಅಪರೂಪದ, ವಿಶೇಷವೂ ಅತ್ಯಾಕರ್ಷಕವೂ ಆದ ಈ ಹಕ್ಕಿಗಳನ್ನು ನೋಡಲು ರಾಷ್ಟ್ರದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈಗ ಈ ಪಕ್ಷಿಧಾಮಗಳ ಸಾಲಿಗೆ ಧಾರವಾಡದ ಹೊರವಲಯದಲ್ಲಿರುವ ಬೇಲೂರು ಈಗ ಸೇರ್ಪಡೆಯಾಗುತ್ತಿದೆ.

ಈ ಬಾರಿ ಧಾರವಾಡದ ಬಳಿಯ ಈ ಸುಂದರ, ಆಕರ್ಷಕ ಪ್ರಕೃತಿ ಸೊಬಗಿನ ಜಲ ತೀರದಲ್ಲಿ ಸಾವಿರಾರು ಮೈಲಿಗಳಿಂದ ಹಾರಿ ಬಂದ ಹಕ್ಕಿಗಳು ಬೀಡು ಬಿಟ್ಟಿವೆ. ಧಾರವಾಡ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ತಗ್ಗು ಪ್ರದೇಶ, ಕೆರೆ, ಭತ್ತದ ಗದ್ದೆಗಳಲ್ಲಿ ಹಾರಾಡುತ್ತಾ ನೋಡುಗರ ಕಣ್ಮನ ಸೆಳೆಯುತ್ತಿರುವ ಈ ವಿದೇಶೀ ಪಕ್ಷಿಗಳು ಸಂಜೆಯಾಗುತ್ತಲೇ ಬೇಲೂರು ಬಳಿ ಬೀಡು ಬಿಡುತ್ತವೆ.

ನೋಡಲು ಕೊಕ್ಕರೆಯಂತೆ ಕಾಣುವ ಈ ಪಕ್ಷಿಗಳು ಕಪ್ಪು ಕೊಕ್ಕುಗಳಿಂದ ಕೂಡಿವೆ. ವಿಶಾಲವಾದ ಪುಕ್ಕಗಳನ್ನೂ ಹೊಂದಿರುವ ಹಾಗೂ ಉದ್ದ ಕಾಲಿನ ಈ ಪಕ್ಷಿಗಳು ಓರಿಯಂಟಲ್‌ ಐಬಿಸ್‌ ಇರಬಹುದೆಂದು ಶಂಕಿಸಲಾಗಿದೆ. ಸಾಮಾನ್ಯವಾಗಿ ಜುಲೈ ಪಕ್ಷಿಗಳಿಗೆ ಸಂತಾನೋತ್ಪತ್ತಿಯ ಕಾಲವಾದ ಕಾರಣ ಬಹುಶಃ ಇವೂ ಕೂಡ ಇಲ್ಲಿನ ತಂಪನೆಯ ವಾತಾವರಣಕ್ಕೆ ಮನಸೋತು ತಮ್ಮ ಸಂತಾನೋತ್ಪತ್ತಿಗಾಗಿಯೇ ಬೀಡು ಬಿಟ್ಟಿರುವ ಸಾಧ್ಯತೆಗಳಿವೆ ಎಂಬುದು ಸ್ಥಳೀಯರ ಅಂಬೋಣ.

ಉತ್ತರ ಚೈನಾ ಅಥವಾ ದಕ್ಷಿಣ ಏಷ್ಯಾ ಪ್ರದೇಶದಿಂದ ಈ ಪಕ್ಷಿಗಳು ವಲಸೆ ಬಂದಿರಬಹುದು ಎಂದು ಇಲ್ಲಿನ ಕೃಷಿ ಕಾಲೇಜಿನ ವಿದ್ಯಾರ್ಥಿಯಾಬ್ಬರು ಹೇಳಿದ್ದಾರೆ. ಅದೇನೇ ಇರಲಿ, ಈ ಹಕ್ಕಿಗಳು ಎಲ್ಲಿಂದಲೇ ಬಂದಿರಲಿ, ಇಲ್ಲಿನ ಜನರಂತೂ ಈ ಪಕ್ಷಿಗಳನ್ನು ನೋಡಲು ನಿತ್ಯವೂ ಬರುತ್ತಿದ್ದಾರೆ. ಈ ಪ್ರದೇಶವನ್ನು ರಂಗನತಿಟ್ಟು ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ, ಪಕ್ಷಿಗಳಿಗೆ ಹಿತವಾದ ವಾತಾವರಣ ಕಲ್ಪಿಸಿದರೆ, ಮುಂದಿನ ವರ್ಷಗಳಲ್ಲಿ ಇದೊಂದು ವಿಶ್ವಖ್ಯಾತ ಪಕ್ಷಿಧಾಮ ಆಗುತ್ತದೆ ಎಂಬುದು ಸ್ಥಳೀಯರ ಅನಿಸಿಕೆಯಾಗಿದೆ.

ರಂಗನತಿಟ್ಟು ಪಕ್ಷಿ ಧಾಮ

ರಂಗನ ತಿಟ್ಟು ಪಕ್ಷಿಧಾಮ ಮೈಸೂರು ಜಿಲ್ಲೆಯಲ್ಲಿರುವ ಒಂದು ಸುಂದರ ತಾಣ. ಜೂನ್‌ ತಿಂಗಳಿನಿಂದ ನವೆಂಬರ್‌ ತಿಂಗಳವರೆಗೆ ಇಲ್ಲಿ ನೂರೆಂಟು ಬಗೆಯ ಪಕ್ಷಿಗಳು ದೇಶ ವಿದೇಶಗಳಿಂದ ಆಗಮಿಸಿ, ಸಂತಾನೋತ್ಪತ್ತಿಯ ನಂತರ ಮರಳುತ್ತವೆ. ಎಷ್ಟೋ ಹಕ್ಕಿಗಳು ಇಲ್ಲೇ ಬೀಡು ಬಿಟ್ಟು ನೆಲೆಸಿರುವುದೂ ಉಂಟು. ಕಾವೇರಿ ನದಿಯ ತಡದಲ್ಲಿ ಇರುವ ಈ ಸುಂದರ ಪರಿಸರವನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸಲಾಗಿದೆ. ಸಂರಕ್ಷಿಸಲಾಗಿದೆ. ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ಸುಮಾರು 0.67 ಚದರ ಕಿಲೋ ಮೀಟರ್‌ ಪ್ರದೇಶದಲ್ಲಿರುವ ಈ ಧಾಮದಲ್ಲಿ ಬೋಟಿಂಗ್‌ ಆಕರ್ಷಣೆಯೂ ಇದೆ.

ರಂಗನತಿಟ್ಟು ಒಂದು ಪುಟ್ಟ ದ್ವೀಪದಂತಿದೆ. ಈ ಪುಟ್ಟ ಪ್ರದೇಶವನ್ನು ಕಾವೇರಿ ನದಿ ಸುತ್ತುವರಿದಿದೆ. 67.57 ಹೆಕ್ಟೇರ್‌ ಪ್ರದೇಶದಲ್ಲಿರುವ ಪಕ್ಷಿಧಾಮವನ್ನು 1926ರಲ್ಲಿ ನಿರ್ಮಿಸಲಾಯಿತು. ಬೆಂಗಳೂರಿನಿಂದ 125 ಕಿ.ಮೀಟರ್‌ ದೂರದಲ್ಲೂ, ಮೈಸೂರಿನಿಂದ ಸುಮಾರು 16 ಕಿ.ಮೀಟರ್‌ ದೂರದಲ್ಲಿರುವ ಈ ದ್ವೀಪ ಪ್ರದೇಶ ಮೈಸೂರು ಹುಲಿ ಟಿಪ್ಪೂ ಸುಲ್ತಾನಾಳಿದ ಶ್ರೀರಂಗಪಟ್ಟಣಕ್ಕೆ ಕೇವಲ 3 ಕಿ.ಮೀಟರ್‌ ದೂರದಲ್ಲಿದೆ.

ಬಿಳಿಯ ಕೊಕ್ಕರೆ, ಸ್ಪೂನ್‌ ಬಿಲ್‌, ಮೊಸಳೆ, ಫ್ಲೈಯಿಂಗ್‌ ಫಾಕ್ಸ್‌, ಪೈಥಾನ್‌, ಆಮೆ, ಕೊರ್‌ಮರೆಂಟ್‌, ಡಾರ್ಟರ್‌, ಇಗ್ರೆಟ್ಸ್‌, ಹೆರಾನ್‌, ಇಬಿಸ್‌, ಕಿಂಗ್‌ ಫಿಷರ್‌, ಪ್ಲೋವರ್‌, ವಿಷ್ಲಿಂಗ್‌ ಟೀಲ್‌ ಮತ್ತು ಪೆರೆಗ್ರೀನ್‌ಗಳನ್ನು ಇಲ್ಲಿ ಯಥೇಚ್ಛವಾಗಿ ಕಾಣಬಹುದು. ಬೆಳಗ್ಗೆ 8-30ರಿಂದ ಸಂಜೆ 6-30ರವರೆಗೆ ಮಾತ್ರ ಪ್ರವೇಶ. ಶ್ರೀರಂಗಪಟ್ಟಣ, ಮೈಸೂರು ಹಾಗೂ ಬೆಂಗಳೂರಿನಿಂದ ಈ ಸ್ಥಳಕ್ಕೆ ಸರಕಾರಿ ಬಸ್‌ ಸೌಲಭ್ಯ ಇದೆ. ಖಾಸಗಿ ಬಸ್‌ಗಳೇ ಅಲ್ಲದೆ ಟ್ಯಾಕ್ಸಿಗಳ ನೆರವನ್ನೂ ಪ್ರವಾಸಿಗರು ಪಡೆಯಬಹುದು.

ಮಂಡಗದ್ದೆ ಪಕ್ಷಿಧಾಮ

ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮ ಜುಲೈನಿಂದ ಅಕ್ಟೋಬರ್‌ವರೆಗೆ ವೀಕ್ಷಣೆಗೆ ಯೋಗ್ಯವಾದ ಸ್ಥಳ. ಶಿವಮೊಗ್ಗ - ಉಡುಪಿ ರಸ್ತೆಯಲ್ಲಿರುವ ಈ ಪಕ್ಷಿಧಾಮ ಶಿವಮೊಗ್ಗದಿಂದ 30 ಕಿ.ಮೀಟರ್‌ ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಿದ ನಂತರ ಹತ್ತಿರದಲ್ಲೇ ಇರುವ ಶಿವಮೊಗ್ಗ ಕೋಟೆ, ಶಿವಪ್ಪನಾಯಕ ಮ್ಯೂಸಿಯಂ, ಸೇಕ್ರೆಡ್‌ ಹಾರ್ಟ್‌ ಆಫ್‌ ಜೀಸಸ್‌ ಚರ್ಚ್‌, ಗಾಜನೂರು ಆನೆಗಳ ತಾಣ (20 ಕಿ.ಮೀ), ತೀರ್ಥಹಳ್ಳಿ, ಆಗುಂಬೆಯ ಸೂರ್ಯಾಸ್ತವನ್ನು ಕಂಡು ವಿಶ್ವವಿಖ್ಯಾತ ಜೋಗದ ಜಲಪಾತಕ್ಕೂ ಭೇಟಿ ನೀಡಬಹುದು.

ಮಂಡಗದ್ದೆಯಲ್ಲಿ ವೈಲ್ಡ್‌ ಬೋರ್‌, ಸ್ಲಾತ್‌ ಬೀರ್‌, ವೈಲ್ಡ್‌ ಗಾರ್‌, ಪ್ಯಾಂಥರ್‌, ಸಾಂಬಾರ್‌, ಇಗ್ರೆಟ್‌, ಪೈಂಯಿಂಟೆಡ್‌ ಸ್ಟಾಕ್‌, ಸ್ಪೂನ್‌ ಬಿಲ್‌, ಪ್ಲೋವರ್‌, ಇಬಿಸ್‌ಗಳನ್ನು ಕಾಣಬಹುದು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New bird sanctuary near Dharwad

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more