ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾ ಕ್ಯಾಸೆಟ್‌ !

By Super
|
Google Oneindia Kannada News

ಎನ್‌. ಎಸ್‌ ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಕವಿತೆ ಹಾಗೂ ಕ್ಯಾಸೆಟ್‌ ಜೊತೆ ವಿದೇಶ ಪ್ರವಾಸ ಮಾಡಿ, ಹೋಗಿ ಬರುವ ಖರ್ಚನ್ನು ಕ್ಯಾಸೆಟ್‌ ವ್ಯಾಪಾರದಲ್ಲಿ ಸಂಪಾದಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಭಾವ ಗೀತೆಗಳಿಗೆ ಮರು ಹುಟ್ಟು ಕೊಟ್ಟವನು ನಾನು ಎಂದು ಅವರು ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು. ಅವರ ಜೊತೆಗೇ ದಿಡೀರ್‌ ಜನಪ್ರಿಯತೆ ಬಯಸಿದ ಬಿ.ಆರ್‌. ಲಕ್ಷ್ಮಣ ರಾವ್‌, ಎಚ್‌. ಎಸ್‌. ವೆಂಕಟೇಶ ಮೂರ್ತಿ ಮುಂತಾದವರು ಹಾಡು ಕವಿಗಳಾಗಲು ತುಡಿದದ್ದುಂಟು.

ಕನ್ನಡದ ಮೊದಲ ಭಾವಗೀತೆಗಳ ಕ್ಯಾಸೆಟ್‌ ' ನಿತ್ಯೋತ್ಸವ", ನಂತರ ಬಂದ ಮೈಸೂರು ಮಲ್ಲಿಗೆ, ಭಾವ ಸುಗಮ ಮುಂತಾದ ಕ್ಯಾಸೆಟ್‌ಗಳಲ್ಲಿ ಒಳ್ಳೆಯ ಗೀತೆಗಳಿದ್ದವು :

*ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು

ಯಾವ ಬೃಂದಾವನವು ಸೆಳೆಯಿತು ತನ್ನ ಮಿಂಚಿನ ಕಣ್ಣನು

* ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು

*ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲ್‌...

ಆದರೆ ಯಾವಾಗ ಕ್ಯಾಸೆಟ್ಟಿಗೆ ಹಾಡು ಬರೆಯುವುದು ಕಾಯಕವಾಯಿತೋ ಅಂದಿನಿಂದ ಗುಣಮಟ್ಟ ಕುಸಿಯತೊಡಗಿತು. ಕಳೆದ ವಾರ ಅಶ್ವಥ್‌ 12 ಹೊಸ ಗೀತೆಗಳಿಗೆ ರಾಗ ಸಂಯೋಜನೆ ಮಾಡಿದರು.

ಹಗಲಲ್ಲೂ ಹೊಳೆವ ತಾರೆ ಇವಳ ಕಂಗಳು

ಸವಿ ಮಾತು ಅತಿ ಮಧುರ ಜೇನಿಗಿಂತಲೂ....

-ಮುಂತಾದ ಸರಳ, ಸಾಮಾನ್ಯ ಗೀತೆಗಳು ಕ್ಯಾಸೆಟ್‌ಗಳಾಗಿ ಬರುತ್ತಿವೆ. ತೋಚಿದ್ದೆಲ್ಲವನ್ನೂ ಗೀಚಿ, ಗೀಚಿದ್ದೆಲ್ಲವನ್ನೂ ಬಾಚಿ ಭಾವಗೀತೆ ಮಾಡ್ತಿದ್ದಾರೆ. ಲಂಕೇಶ್‌ ಇವರನ್ನೆಲ್ಲಾ ಕ್ಯಾಸೆಟ್‌ ಕವಿಗಳೆಂದು ಜಾಡಿಸಿದ್ದರು ಅದೀಗ ನಿಜವಾಗುತ್ತಿದೆ.

English summary
Poems of NS Lakshmi narayana Bhat in cassette
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X