ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಂಡೀಸ್‌- ಪಾಕ್‌ ಟೆಸ್ಟ್‌ ಹಣಾಹಣಿ

By Staff
|
Google Oneindia Kannada News

ಜಾರ್ಜ್‌ಟೌನ್‌ : ವೆಸ್ಟಿಂಡೀಸ್‌ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರು ಟೆಸ್ಟ್‌ಪಂದ್ಯಗಳ ಕ್ರಿಕೆಟ್‌ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೂರು ರಾಷ್ಟ್ರಗಳು ಭಾಗವಹಿಸಿದ್ದ ಕೇಬಲ್‌ ಮತ್ತು ವೈರ್‌ಲೆಸ್‌ ಸರಣಿಯ ಫೈನಲ್ಸ್‌ನಲ್ಲಿ ವೆಸ್ಟಿಂಡೀಸ್‌ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಗೆದ್ದಿರುವ ಪಾಕಿಸ್ತಾನ ಟೆಸ್ಟ್‌ ಸರಣಿಯನ್ನೂ ತನ್ನದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ವೆಸ್ಟಿಂಡೀಸ್‌ ತ್ರಿಕೋಣ ಸರಣಿಯಲ್ಲಾದ ಸೋಲಿ-ನ ಸೇಡು ತೀರಿ-ಸಿ-ಕೊ-ಳ್ಳು-ವ

ಆತುರದಲ್ಲಿದೆ.

ಪಾಕ್‌ ತಂಡಕ್ಕೆ ಗಾಯಾಳು ಆಟಗಾರರದ್ದೇ ಸಮಸ್ಯೆ. ತಂಡದ ಪ್ರಮುಖ ಬೌಲರ್‌, ಬ್ಯಾಟ್ಸ್‌ಮನ್‌ಗಳು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಆರಂಭ ಆಟಗಾರ ಸಯೀದ್‌ ಅನ್ವರ್‌ ಮಂಡಿ ನೋವಿನ ಕಾರಣ ಮೊದಲ ಟೆಸ್ಟಿನಲ್ಲಿ ಆಡುತ್ತಿಲ್ಲ. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯಿಬ್‌ ಅಖ್ತರ್‌ ಮತ್ತು ಇಂಜಮಾಮ್‌ ಗಾಯಾಳುಗಳ ಪಟ್ಟಿಯಲ್ಲಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನ. ಗಾಯದ ಮೇಲೆ ಬರೆ ಎಳೆದಂತೆ ಆಲ್‌ರೌಂಡರ್‌ ಅಬ್ದುಲ್‌ ರಜಾಕ್‌ ಕೂಡ ಮಂಗಳವಾರದಂದು ಅಭ್ಯಾಸದಲ್ಲಿ ತೊಡಗಿದ್ದಾಗ ಗಾಯಗೊಂಡಿದ್ದಾರೆ. ವೈದ್ಯರು ರಜಾಕ್‌ಗೆ ವಿಶ್ರಾಂತಿ ಸೂಚಿಸಿದ್ದಾರೆ.

ವೆಸ್ಟಿಂಡೀಸ್‌ ತಂಡದಲ್ಲಿ ಗಾಯಾಳುಗಳ ಹಾವಳಿ ಇಲ್ಲದಿದ್ದರೂ, ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಿರತೆ ಎಂಬುದೇ ಇಲ್ಲ. ಬೌಲರ್‌ಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಲ್ಷ್‌ , ಆ್ಯಂಬ್ರೋಸ್‌ನಂಥ ಹಳಬರ ಜೊತೆಗೆ ಯುವಕರಾದ ಧಿಲ್ಲಾನ್‌, ಕಿಂಗ್‌, ರೋಸ್‌ ಉತ್ತಮವಾಗಿ ಬೌಲ್‌ ಮಾಡುತ್ತಿದ್ದಾರೆ. ವಿಂಡೀಸ್‌ ಪಂದ್ಯ ಗೆಲ್ಲ ಬೇಕಿದ್ದಲ್ಲಿ ಬೌಲರ್‌ಗಳು ವಿಜೃಂಭಿಸುವುದು ಅಗತ್ಯ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X