• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದ.ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನ

By Staff
|

ಮೈಸೂರು : ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನವು ಮೇ10ರಂದು ಶ್ರವಣ ಬೆಳಗೊಳದಲ್ಲಿ ನಡೆಯಲಿದೆ. ಸಮ್ಮೇಳನದಲ್ಲಿ ಜೈನ ಬಸದಿಗಳ ಅರ್ಚಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸುವುದಾಗಿ ಅರ್ಚಕರ ಸಂಘದ ಅಧ್ಯಕ್ಷ ನಾ. ಅನಂತರಾಜ್‌ ತಿಳಿಸಿದ್ದಾರೆ.

ತನಿಖೆಗೆ ಒತ್ತಾಯ : ಇಲ್ಲಿನ ದೃಶ್ಯ ಮತ್ತು ಶ್ರವಣ ಸಂಶೋಧನಾ ಸಂಸ್ಥೆ (ಎ.ವಿ.ಆರ್‌.ಸಿ.) ಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ‘ ದಿ ಸರ್ಚ್‌’ ಸಂಸ್ಥೆಯ ನಿರ್ಮಾಪಕರಾದ ಎಂ.ಎನ್‌ ತೇಜಸ್ವಿ ಮತ್ತು ಯು. ಧನಲಕ್ಷ್ಮಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ಏಕವ್ಯಕ್ತಿಯ ಹಿಡಿತಕ್ಕೆ ಸಂಸ್ಥೆ ಸಿಲುಕಿರುವುದರಿಂದ ಕೋಟ್ಯಂತರ ರೂ.ಗಳ ಉಪಕರಣಗಳು ಹಾಳಾಗುತ್ತಿವೆ. ಉತ್ತಮ ಯು.ಜಿ.ಸಿ. ಕಾರ್ಯಕ್ರಮಗಳು ನಡೆಯುತ್ತಿಲ್ಲ ಎಂದು ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.

ಪ್ರತಿಭಟನೆ : ಮಾತೆ ಗಂಗಾ ದೇವಿಯವರು ಬಸವಣ್ಣನವರ ಮೂಲ ನಾಮಾಂಕಿತ ಬದಲಿಸಿ ಪ್ರವಚನ ಮಾಡುತ್ತಿ ರುವುದನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಇಲ್ಲಿನ ಬಸವ ಬಳಗ ಹಾಗೂ ವೀರಶೈವ ಸಂಘ-ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭೆ : ಮೈಸೂರು ಜಿಲ್ಲಾ ಪಂಚಾಯ್ತಿಯ ಐದು ವರ್ಷಗಳ ಅವಧಿ ಮೇ 5ರಂದು ಅಂತ್ಯವಾಗಲಿದ್ದು, ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಳ್ಳುವರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡರ ಅಧ್ಯಕ್ಷತೆಯಲ್ಲಿ ಗುರುವಾರ ಕೊನೆಯ ಸಭೆ ನಡೆದು ಕುಡಿಯುವ ನೀರು ಮತ್ತಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿತು.

ಚಾಮರಾಜ ನಗರ ಜಿಲ್ಲೆ ರಚನೆಯ ನಂತರ ಜಿಲ್ಲಾ ಪಂಚಾಯತ್‌ ಸದಸ್ಯರ ಸಂಖ್ಯೆ 64ರಿಂದ 63ಕ್ಕೆ ಇಳಿದಿತ್ತು. 1998ರ ಡಿಸೆಂಬರ್‌ 14ರಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದರಿಂದ ದಳದ 7 ಸದಸ್ಯರನ್ನು ಅನರ್ಹಗೊಳಿಸಲಾಗಿತ್ತು. ಹೀಗಾಗಿ ಕೊನೆಯವರೆಗೆ ಉಳಿದ ಸದಸ್ಯರು 36 ಮಂದಿ ಮಾತ್ರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more