ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾರ್ಖಂಡ್: 14 ಲಕ್ಷ ಜನರ ಆಧಾರ್ ಬಹಿರಂಗವಾದರೂ ಕ್ರಮವಿಲ್ಲ

|
Google Oneindia Kannada News

ಜಾರ್ಖಂಡ್, ಏಪ್ರಿಲ್ 24 : ಜಾರ್ಖಂಡ್ ಸರ್ಕಾರದ ವೆಬ್ ಸೈಟ್ ಲೋಪದೋಷದಿಂದ ಲಕ್ಷಾಂತರ ಜನರ ಮಾಹಿತಿ ಸೋರಿಕೆಯಾಗಿತ್ತು. ಆದರೆ, ಈ ಬಗ್ಗೆ ವಿಶಿಷ್ಟ ಗುರುತಿನ ಪ್ರಾಧಿಕಾರವು ಜಾರ್ಖಂಡ್ ಸಾಮಾಜಿಕ ಭದ್ರತೆ ನಿರ್ದೇಶನಾಲಯದ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ.

ಈ ಹಿಂದೆ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರ ಆಧಾರ್ ಮಾಹಿತಿಯನ್ನು ಬಹಿರಂಗಗೊಳಿಸಿದ ಪ್ರಮಾದವೆಸಗಿದ ಖಾಸಗಿ ಸಂಸ್ಥೆಯನ್ನು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) 10 ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಿತ್ತು. ಆದರೆ, ಜಾರ್ಖಂಡ್ ವೆಬ್ ಸೈಟ್ ನಲ್ಲಿ 14 ಲಕ್ಷ ಜನರ ಆಧಾರ್ ಮಾಹಿತಿ ಸೋರಿಕೆಯಾಗಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ಎಷ್ಟು ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆ.[ಧೋನಿ ಆಧಾರ್ ಕಾರ್ಡ್ ವಿವರ ಬಹಿರಂಗ, ಸಾಕ್ಷಿ ಗರಂ]

14 lakh Aadhaar info leaked on Jharkhand site

ಸುಮಾರು 14 ಲಕ್ಷ ಆಧಾರ್ ಹೊಂದಿರುವವರ ಹೆಸರು, ವಿಳಾಸ, ಬ್ಯಾಂಕ್ ಮಾಹಿತಿ ಬಹಿರಂಗವಾಗಿತ್ತು. ಈ ಮಾಹಿತಿ ಹೇಗೆ ಸೋರಿಕೆ ಆಯಿತು ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಲ್ಲಾ ರಂಪಾರಾಮಾಯಣಗಳು ನಡೆದ ಬಳಿಕ ಇದೀಗ ಜಾರ್ಖಂಡ್ ಸರ್ಕಾರ ಸಾಮಾಜಿಕ ಭದ್ರತೆ ನಿರ್ದೇಶನಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

English summary
The Unique Identification Authority of India (UIDAI) has ruled out any action against the directorate of social security in Jharkhand after Aadhaar details of 14 lakh pensioners were posted on the department's official website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X