keyboard_backspace

ಮುಂದಿನ ವರ್ಷ ಯಾವ್ಯಾವ ತರಗತಿಗೆ NEP ಪಠ್ಯ ಕ್ರಮ ಸಿಗಲಿದೆ ? 5+3+3+4 ಇದರ ಅಸಲಿ ಅರ್ಥ

Google Oneindia Kannada News

ಬೆಂಗಳೂರು, ಅ. 01: ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನುಷ್ಠಾನ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ಕಾರ್ಯಪಡೆಯ ಮೊದಲ ಸಭೆ ಅ. 4 ಕ್ಕೆ ನಡೆಯಲಿದೆ. ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೊದಲ ಸಭೆಯಲ್ಲಿ ಎನ್ಇಪಿ ಅನುಷ್ಠಾನ, ಪಠ್ಯಕ್ರಮ ರಚನೆ ಕುರಿತ ಮಹತ್ವದ ನಿರ್ಣಯಗಳು ಹೊರ ಬೀಳಲಿವೆ.

ಯಾವ ಹಂತದಿಂದ NEP: ರಾಜ್ಯದಲ್ಲಿ ಈಗಾಗಲೇ ಪದವಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಿಂದಲೇ ಅನುಷ್ಠಾನ ಮಾಡಲಾಗುತ್ತಿದೆ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ತಿಮ್ಮೇಗೌಡ ಅವರ ಪರಿಶ್ರಮ ಹಾಗೂ ಎನ್ಇಪಿ ಜಾರಿ ಸಂಬಂಧ ರಚನೆಯಾಗಿದ್ದ ಸಮಿತಿಗಳ ಕಾರ್ಯದಿಂದ ಉನ್ನತ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಆದರೆ, ಪ್ರಾಥಮಿಕ ಹಂತದಿಂದ ಹಿಡಿದು ಪಿಯಸಿ ವರೆಗಿನ ವಿದ್ಯಾರ್ಥಿಗಳಿಗೆ ಯಾವ ಹಂತದಿಂದ ಎನ್ಇಪಿ ಜಾರಿ ಮಾಡಬೇಕು ಎಂಬುದರ ಬಗ್ಗೆ ಇದೀಗ ಗಂಭೀರ ಚಿಂತನೆ ನಡೆದಿದೆ.

ಸಿಎಂ ನೇತೃತ್ವದ ಕಾರ್ಯ ಪಡೆ ಸಭೆ

ಸಿಎಂ ನೇತೃತ್ವದ ಕಾರ್ಯ ಪಡೆ ಸಭೆ

ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಶಿಕ್ಷಣದ ಹಂತದ ವರೆಗೂ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಮಾಡುವ ಸಂಬಂಧ ರಚನೆ ಮಾಡಿರುವ ಕಾರ್ಯಪಡೆಯ ಮೊದಲ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದಿದೆ. ಯಶಸ್ವಿಯಾಗಿ ಎನ್ಇಪಿ ಜಾರಿ ಮಾಡುವ ಸಂಬಂಧ ಹಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅದರಂತೆ ಅ. 04 ರಂದು ಕಾರ್ಯಪಡೆಯ ಮೊದಲ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಠ್ಯಕ್ರಮ ರಚನೆ, ಪಠ್ಯ ಪುಸ್ತಕ ಮುದ್ರಣ, ಯಾವ ತರಗತಿಯಿಂದ ಎನ್‌ಇಪಿ ಜಾರಿ ಮಾಡಬೇಕು ಎಂಬುದರ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಕಾಲಾವಕಾಶ ಕಡಿಮೆ ಇರುವ ಕಾರಣ ಅತಿ ಬೇಗ ರಾಜ್ಯದಲ್ಲಿ ಎನ್ಇಪಿ ಅನುಷ್ಠಾನ ಕುರಿತು ವರದಿ ನೀಡಲು ಕಾರ್ಯಪಡೆಗೆ ಸೂಚನೆ ನೀಡಿದ್ದಾರೆ.

ಹೊಸ ನೀತಿಯ ಪ್ರಕಾರ ಎನ್ಇಪಿ ಎಂಟ್ರಿ

ಹೊಸ ನೀತಿಯ ಪ್ರಕಾರ ಎನ್ಇಪಿ ಎಂಟ್ರಿ

ದೇಶದಲ್ಲಿ ಈವರೆಗೂ 10 + 2 ಮಾದರಿ ಶಿಕ್ಷಣ ಪದ್ಧತಿ ಇತ್ತು. ಇದೀಗ ನೂತನ ಶಿಕ್ಷಣ ನೀತಿಯಲ್ಲಿ 5+3+3+4 ಎಂದು ವರ್ಗೀಕರಿಸಲಾಗಿದೆ. ಈ ವರ್ಗೀಕರಣ ಆಧಾರದ ಮೇಲೆ ನಾಲ್ಕು ಹಂತದಲ್ಲಿ ಒಂದೇ ಸಲ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಬೇಕಾಗುತ್ತದೆ. ಈ ಮೂಲಕ ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲಾ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ವ್ಯಾಪ್ತಿಗೆ ಒಳಪಡುವ ಯೋಜನೆ ಕೇಂದ್ರ ಸರ್ಕಾರದ್ದು. ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರಗಳು ಸಿದ್ಧತೆಯಲ್ಲಿ ತೊಡಗಿವೆ.

ಪೂರ್ವ ಪ್ರಾಥಮಿಕ: 3 ವರ್ಷದಿಂದ 7 ವರ್ಷ

ಪೂರ್ವ ಪ್ರಾಥಮಿಕ: 3 ವರ್ಷದಿಂದ 7 ವರ್ಷ

ಇದರ ಪ್ರಕಾರ ಹೇಳುವುದಾದರೆ ಪೂರ್ವ ಪ್ರಾಥಮಿಕ ಹಾಗೂ ಹಾಗೂ 1 ಮತ್ತು 2 ನೇ ತರಗತಿಯನ್ನು ಪೂರ್ವ ಪ್ರಾಥಮಿಕ ಶಿಕ್ಷಣ ಎಂದು ಪರಿಗಣಿಸಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿಯೇ ಐದು ವರ್ಷದ ಶಿಕ್ಷಣ ಕೊಡುವ ಅನಿವಾರ್ಯತೆ ಎದುರಾಗಬಹುದು. ಆದರೆ ರಾಜ್ಯದಲ್ಲಿ ಅಂಗನವಾಡಿಗಳು ಪೂರ್ವ ಪ್ರಾಥಮಿಕ ಶಾಲೆಗಳನ್ನಾಗಿ ಪರಿವರ್ತನೆ ಮಾಡುವ ಅನಿವಾರ್ಯತೆ ಎದುರಾಗಬಹುದು. ಇಲ್ಲವೇ ಪೂರ್ವ ಪ್ರಾಥಮಿಕ ಮುಗಿಸಿ ಒಂದು ಮತ್ತು ಎರಡನೇ ತರಗತಿಯನ್ನು ಪ್ರಾಥಮಿಕ ಶಾಲೆಗಳಲ್ಲಿ ಓದಲು ಅವಕಾಶ ಕಲ್ಪಿಸಲು ಮುಂದಾಗಬಹುದು. ಈ ವಿಚಾರದಲ್ಲಿ ಕಾರ್ಯಪಡೆಗೆ ದೊಡ್ಡ ಸವಾಲು ಎದುರಾಗಿದೆ. ಪೂರ್ವ ಪ್ರಾಥಮಿಕ ಹಂತದಿಂದ ಎರಡನೇ ತರಗತಿ ವರೆಗಿನ ಮಕ್ಕಳಿಗೆ ಮೊದಲ ನರ್ಸರಿ ಹಂತದಲ್ಲಿ ಎನ್ಇಪಿ ಪಠ್ಯಕ್ರಮ ಅನುಷ್ಠಾನ ಮಾಡಲಾಗುತ್ತದೆ. ಮೂರರಿಂದ ಎಂಟು ವರ್ಷದ ವರೆಗಿನ ಮಕ್ಕಳಿಗೆ ಅಂಗನವಾಡಿಗಳಲ್ಲೇ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಪ್ರಾಥಮಿಕ ಶಿಕ್ಷಣ: ಮೂರು ವರ್ಷ: 8 ರಿಂದ 11 ವರ್ಷ

ಪ್ರಾಥಮಿಕ ಶಿಕ್ಷಣ: ಮೂರು ವರ್ಷ: 8 ರಿಂದ 11 ವರ್ಷ

ಪ್ರಸ್ತುತ ಎನ್ಇಪಿ ಮಾಡಿರುವ ವರ್ಗೀಕರಣದ ಪ್ರಕಾರ ಎರಡನೇ ಹಂತದ ಪ್ರಾಥಮಿಕ ಶಿಕ್ಷಣವನ್ನು ಮೂರನೇ ತರಗತಿಯಿಂದ ಐದನೇ ತರಗತಿ ವರೆಗೂ ಸೇರ್ಪಡೆ ಮಾಡಲಾಗಿದೆ. ಅದರ ಪ್ರಕಾರ ರಾಜ್ಯದಲ್ಲಿ 2022 ಹಾಗೂ 23 ನೇ ಶೈಕ್ಷಣಿಕ ವರ್ಷದಲ್ಲಿ ಎನ್ಇಪಿ ಜಾರಿಯಾದಲ್ಲಿ ಮೂರನೇ ತರಗತಿ ಮಕ್ಕಳಿಗೆ ಹೊಸ ಪಠ್ಯ ಕ್ರಮ ಸಿಗಲಿದೆ. ಮೂರನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಎನ್ಇಪಿ ಪಠ್ಯ ಲಭ್ಯವಾಗಲಿದೆ. ಮೂರನೇ ತರಗತಿ ವಿದ್ಯಾರ್ಥಿಗಳು ಐದನೇ ತರಗತಿ ವರೆಗೆ ಓದುವ ವರೆಗೂ ಪ್ರತಿ ವರ್ಷವೂ ಎನ್ಇಪಿ ಪಠ್ಯಕ್ರಮ ಅಧ್ಯಯನ ಮಾಡಲಿದ್ದಾರೆ.

ಮಾಧ್ಯಮಿಕ ಶಿಕ್ಷಣ: ಮೂರು ವರ್ಷ : 11 ರಿಂದ 14

ಮಾಧ್ಯಮಿಕ ಶಿಕ್ಷಣ: ಮೂರು ವರ್ಷ : 11 ರಿಂದ 14

ಇನ್ನು ಆರನೇ ತರಗತಿಯಿಂದ ಎಂಟನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಮಾಧ್ಯಮಿಕ ಶಿಕ್ಷಣ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. 11 ವರ್ಷದಿಂದ ಹಿಡಿದು 14 ವರ್ಷ ವಯಸ್ಸಿನ ಮಕ್ಕಳನ್ನು ಮಾಧ್ಯಮಿಕ ಶಿಕ್ಷಣ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದ್ದು, ಅರನೇ ತರಗತಿ ಮಕ್ಕಳಿಗೆ ಮುಂದಿನ ವರ್ಷದಿಂದ NEP ಅಡಿ ಹೊಸ ಪಠ್ಯ ಕ್ರಮ ಸಿಗಲಿದೆ. ಮುಂದಿನ ಮೂರು ವರ್ಷವೂ ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಎನ್ಇಪಿ ಪಠ್ಯಕ್ರಮ ಸಿಗಲಿದ್ದು, ಏಳು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳು ಮುಂದಿನ ಎರಡು ವರ್ಷದಲ್ಲಿ 9 ನೇ ತರಗತಿಗೆ ದಾಖಲಾಗುವ ವೇಳೆ ಎನ್ಇಪಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆ ಇಲ್ಲಿಂದಲೇ ಪರಿಚಯಿಸಿರುವ ಕಾರಣ ಕಠಿಣ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Recommended Video

IPL ನಿಂದ KL ರಾಹುಲ್ ಕ್ರಿಕೆಟ್ ಕೆರಿಯರ್ ಗೆ ಬಿತ್ತು ದೊಡ್ಡ ಹೊಡೆತ | Oneindia Kannada
ಪ್ರೌಢ ಹಾಗೂ ಪದವಿ ಪೂರ್ವ ಒಂದೇ ಹಂತ: ನಾಲ್ಕು ವರ್ಷ: 9 ರಿಂದ 12

ಪ್ರೌಢ ಹಾಗೂ ಪದವಿ ಪೂರ್ವ ಒಂದೇ ಹಂತ: ನಾಲ್ಕು ವರ್ಷ: 9 ರಿಂದ 12

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ನಾಲ್ಕನೇ ಹಂತದ ಕಲಿಕಾ ವ್ಯವಸ್ಥೆಗೆ ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಒಗ್ಗೂಡಿಸಲಾಗಿದೆ. 9 ನೇ ತರಗತಿಯಿಂದ 12 ನೇ ತರಗತಿ ವರೆಗೆ ಈ ಹಂತವನ್ನು ಪರಿಗಣಿಸಲಾಗಿದೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಕಲಾ ವಿಭಾಗ, ವಿಜ್ಞಾನ, ವಾಣಿಜ್ಯ ವಿಭಾಗ ಓದಲಿಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಎರಡು ವರ್ಷದ ಕಲಿಕೆ ಪದ್ಧತಿ ಎಲ್ಲರಿಗೂ ಒಂದೇ ರೀತಿ ಇರಲಿದೆ. ಆದರೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿಗೆ ಕಲಾ ವಿಭಾಗ, ವಾಣಿಜ್ಯ ವಿಭಾಗ ಎಂದು ಬೇರ್ಪಟ್ಟಿರುವುದಿಲ್ಲ. ಬದಲಿಗೆ ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿ ಆಸಕ್ತಿ ಇದ್ದರೆ ವಿಜ್ಞಾನದ ವಿಷಯವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳುತ್ತಿದೆ ಎನ್ಇಪಿ.

ಎನ್ಇಪಿ ಅಡಿ ಎರಡನೇ ಪಿಯುಸಿ ಪರೀಕ್ಷೆ ಹೇಗೆ ಆಗುತ್ತದೆ, ವೈದ್ಯಕೀಯ, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್‌ಗಳಿಗೆ ನಡೆಯುವ ಪ್ರವೇಶ ಪರೀಕ್ಷೆ ಹೇಗೆ ಎಂಬ ಗೊಂದಲ ಎದ್ದಿದೆ. ಇದಕ್ಕೆ ಸ್ಪಷ್ಟನೆ ಪಡೆಯುವ ಸಂಬಂಧ ವಿಜ್ಞಾನ ವಿಷಯದಲ್ಲಿ ಕೋರ್ ವಿಷಯ ಆಯ್ಕೆ ಮಾಡಿಕೊಂಡವರನ್ನು ವಿಜ್ಞಾನ ವಿಭಾಗ ಎಂದು ಪರಿಗಣಿಸಿ ಅವರಿಗೆ ಅಷ್ಟೇ ಎಂಬಿಬಿಎಸ್ ವೈದ್ಯಕೀಯ ಕೋರ್ಸ್ ಸೇರಲು ಪ್ರವೇಶ ಪರೀಕ್ಷೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಪ್ರೌಢ ಶಿಕ್ಷಣ ಹಂತದಲ್ಲಿ ಮುಂದಿನ ವರ್ಷ 9 ನೇ ತರಗತಿ ಹಾಗೂ ಪ್ರಥಮ ಪಿಯುಸಿಗೆ ಒಂದೇ ಸಲ ಎನ್ಇಪಿ ಪಠ್ಯಕ್ರಮ ಒದಗಿಸಲು ಸರ್ಕಾರ ಮುಂದಾಗಿದೆ. ಅಂತಿಮವಾಗಿ ಅ. 4 ರಂದು ನಡೆಯಲಿರುವ ಕಾರ್ಯಪಡೆಯ ಸಭೆಯಲ್ಲಿ ಈ ಕುರಿತ ಸ್ಪಷ್ಟತೆಗಳು ಸಿಗಲಿವೆ.

English summary
National Education Policy 2020: First meeting of the Karnataka NEP task force on October 4. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X