ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಜನ ಸ್ವಾಭಿಮಾನ, ಯುವಕನ ಮಾನವೀಯತೆ, ಕಣ್ಣೀರುಕ್ಕಿಸುವ ವೈರಲ್ ವಿಡಿಯೋ

|
Google Oneindia Kannada News

ಕಾಲ ಕೆಟ್ಟೋಗಿದೆ ಎಂಬ ಮಾತು ಎಲ್ಲರ ಬಾಯಲ್ಲೂ ಸಾರಾಸಗಟಾಗಿ ಬರುವುದು ಅಚ್ಚರಿಯಲ್ಲ. ಕಾಲ ಕೆಟ್ಟಿರುವುದೂ ನಿಜವಿರಬಹುದು. ಆದರೆ ಈ ಕೆಟ್ಟ ಕಾಲದಲ್ಲೇ ಮಾನವೀಯತೆಯ ಬಗ್ಗೆ ಭರವಸೆ ಉಳಿಸುವಂಥ ಎಷ್ಟೋ ಘಟನೆಗಳು ನಡೆಯುತ್ತವೆ. ಅಂಥದೊಂದು ಮಾನವೀಯ ಘಟನೆ ಇಲ್ಲಿದೆ.

ಹಣ್ಣು ಹಣ್ಣು ಅಜ್ಜನೊಬ್ಬ ಭಿಕ್ಷೆ ಬೇಡುವ ಇಷ್ಟವಿಲ್ಲದೆ, ಬಿಸಿಲಲ್ಲೇ ತಳ್ಳುಗಾಡಿಯನ್ನು ನೂಕುತ್ತ, ಬಾಳೆಹಣ್ಣು ಮಾರುವ ಈ ದೃಶ್ಯ ಕರುಳನ್ನು ಕಿವುಚುತ್ತದೆ. ಆದರೆ ಬರಿ ಹೊಟ್ಟೆಯಲ್ಲಾದರೂ ಮಲುಗುತ್ತೇನೆ, ಭಿಕ್ಷೆ ಬೇಡೋಲ್ಲ ಎಂಬ ಅವರ ಸ್ವಾಭಿಮಾನ ನೆನೆದರೆ ಹೆಮ್ಮೆಯೆನ್ನಿಸುತ್ತದೆ!

ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು

ಸುಮಾರು 75-80 ವರ್ಷ ವಯಸ್ಸಿನ ಅಜ್ಜ ಹೀಗೆ ಬಾಳೆ ಹಣ್ಣು ಮಾರುತ್ತಿದ್ದ ಸಮಯದಲ್ಲಿ ಯುವಕನೊಬ್ಬ ಅವರೊಂದಿಗೆ ಮಾತಿಗಿಳಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ದಾಖಲಾದ ಅವರ ಸಭಾಷಣೆಯ ವಿವರ ಕೇಳಿ...

ಯುವಕ: "ಒಂದು ಡಜನ್ ಬಾಳೆ ಹಣ್ಣಿಗೆ ಎಷ್ಟು ಅಂಕಲ್? ಕೆಲಸ ಹೇಗೆ ನಡೆಯುತ್ತಿದೆ?"

ಅಜ್ಜ: "40 ರೂಪಾಯಿ. ಕೆಲಸ ಏನೂ ಇಲ್ಲ. ಹೀಗೇ ಸುತ್ತೋದು ಅಷ್ಟೆ!"

Viral video: Old man selling Banana and humanity of a young man

ಯುವಕ: "ಹಾಗಾದರೆ ನೀವು ಜೀವನ ಮಾಡೋಕೆ ಏನು ಮಾಡುತ್ತೀರಿ?"

ಅಜ್ಜ: "ಇದೇ ನಮ್ಮ ಬದುಕು"

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಅಜ್ಜನ ಮಾತು ಕೇಳಿದ ಯುವಕನಿಗೆ ಮರುಕ ಹುಟ್ಟಿ ಅವರ ಬಳಿ ಇರುವ ಎಲ್ಲಾ ಬಾಳೆ ಹಣ್ಣುಗಳನ್ನೂ ಕೊಂಡುಕೊಳ್ಳುತ್ತಾರೆ. ಯುವಕನಿಂದ ಹಣ ಪಡೆದ ಅಜ್ಜನ ಕಣ್ಣಲ್ಲಿ ನೀರು.

ಯುವಕ: "ನಿಮಗೆ ಈ ದಿನ ಸಂತೋಷವಾಗಿರಬೇಕು"

ಅಜ್ಜ: "ಖಂಡಿತ ಹೌದು. ನಾನು ಜೀವನ ಸಾಗಿಸಲು ಸಾಕಷ್ಟು ಪರಿಶ್ರಮದಿಂದ ದುಡಿಯುತ್ತೇನೆ. ಆದರೆ ಎಂದಿಗೂ ಭಿಕ್ಷೆ ಎತ್ತಲಾರೆ. ಹಾಗೆ ಭಿಕ್ಷೆ ಎತ್ತುವುದು ಎಲ್ಲರಿಗೂ ಅವಮಾನ. ನಿಮ್ಮಂಥ ಯುವಕರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಉಪವಾಸವಾದರೂ ಮಲಗುತ್ತೇನೆ. ಭಿಕ್ಷೆ ಬೇಡಲಾರೆ. ನಿಮಗೆ ಆ ದೇವರು ಒಳ್ಳೆಯದು ಮಾಡಲಿ" ಎನ್ನುತ್ತ ತಾತ ಖಾಲಿಯಾದ ತಮ್ಮ ಗಾಡಿಯನ್ನು ಸಂತೋಷದಿಂದ ತಳ್ಳಿಕೊಂಡು ಹೊರಟರು. ಖರೀದಿಸಿದ ಬಾಳೆಹಣ್ಣುಗಳನ್ನೆಲ್ಲ ಉಪವಾಸ ಇರುವ ಬಡವರಿಗೆ ಹಂಚಿ ಆ ಯುವ ವ್ಯಕ್ತಿಯೂ ಖುಷಿಪಟ್ಟರು.

ಕೊಲೆ, ಸುಲಿಗೆ, ಅತ್ಯಾಚಾರ, ರಕ್ತಪಾತ, ಹಿಂಸೆ ಎಂಬ ಮಾತೇ ಕೇಳುವ ಈ ಪ್ರಪಂಚದಲ್ಲೂ ಮಾನವೀಯತೆಯ ಸೆಲೆ ಅಲ್ಲಲ್ಲಿ ಹೀಗೆ ಇಣುಕುಹಾಕಿ ಬದುಕಿನ ಬಗೆಗಿನ ಭರವಸೆಯನ್ನು ಉಳಿಸಿವುದು ಸುಳ್ಳಲ್ಲ.

English summary
Video of an old man selling banana and said meaningful words to a young man goes viral on social media. Old man's thought about and young man's gesture of humanity touch averyone's heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X