ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಠಾಣೆಯ ಟೇಬಲ್ ಮೇಲೆ ಕಂದನ ಆರೈಕೆ: ವೈರಲ್ ಚಿತ್ರ

|
Google Oneindia Kannada News

Recommended Video

ಉತ್ತರಪ್ರದೇಶದ ಝಾನ್ಸಿಯ ಈ ಮಹಿಳಾ ಪೊಲೀಸ್ ಪೇದೆಯ ವಿಡಿಯೋ ವೈರಲ್ | Oneindia Kannada

ಟೇಬಲ್ ಮೇಲೆ ಮಲಗಿರುವ ಹಸುಗೂಸು, ಪಕ್ಕದಲ್ಲಿ ಹಾಲಿನ ಬಾಟಲ್, ಎದುರಲ್ಲಿ ಕೆಲಸದಲ್ಲಿ ನಿರತರಾದ ಪೊಲೀಸ್... ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು!

ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಠಾಣೆಯೊಂದರಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುವ ಅರ್ಚನಾ ಅವರ ಈ ಚಿತ್ರ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಸಮಯದಲ್ಲಿ ಓರ್ವ ಮಹಿಳೆ ಎದುರಿಸುವ ಸವಾಲುಗಳ ಪ್ರತೀಕವಾಗಿದೆ!

ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ

'ನಾನು ಕೆಲಸಕ್ಕೆ ಹೋದರೆ ಮಗುವನ್ನು ನೋಡಿಕೊಳ್ಳೋರ್ಯಾರು?' ಇಂದಿನ ಬಹುತೇಕ ಮಹಿಳೆಯರ ಮುಂದಿರುವ ಪರ್ವತದಂಥ ಸಮಸ್ಯೆ ಇದು. ಆರ್ಥಿಕ ಸಮಸ್ಯೆ, ವೃತ್ತಿ ಬದುಕನ್ನು ಬಲಿಕೊಡಲು ಇಷ್ಟವಿಲ್ಲದ ಸಂದಿಗ್ಧತೆ, ಕರುಳ ಕುಡಿಯನ್ನು ಅಕ್ಕರೆಯಿಂದ ನೋಡಿಕೊಳ್ಳಬೇಕೆಂಬ ತುಡಿತ ಎಲ್ಲವೂ ಒಟ್ಟಾಗಿ ಉದ್ಯೋಗಸ್ಥ ಮಹಿಳೆಯ ಭವಿಷ್ಯವನ್ನೇ ಪ್ರಶ್ನೆಯನ್ನಾಗಿಸಿದೆ.

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕುನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

ಅಮ್ಮನ ಪಾತ್ರವನ್ನು ನಾಜೂಕಾಗಿ ನಿರ್ವಹಿಸುತ್ತಲೇ, ವೃತ್ತಿ ಹೊಣೆಯನ್ನೂ ಹೊತ್ತುಕೊಂಡ ಮಹಿಳೆಯರು ಆದರ್ಶಪ್ರಾಯರಾಗುತ್ತಾರೆ. ಅದಕ್ಕೊಂದು ಉತ್ತಮ ಉದಾಹರಣೆ 30 ವರ್ಷ ವಯಸ್ಸಿನ ಅರ್ಚನಾ.

ಮಾತೃಪ್ರೇಮ ಮತ್ತು ಕರ್ತವ್ಯನಿಷ್ಠೆ

ಮಾತೃಪ್ರೇಮ ಮತ್ತು ಕರ್ತವ್ಯನಿಷ್ಠೆ

ಉತ್ತರ ಪ್ರದೇಶದ ಝಾನ್ಸಿಯ ಕೋಟ್ವಾಲಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಆಗಿರುವ ಅರ್ಚನಾ ಮೂಲತಃ ಆಗ್ರಾದವರು. 2016 ರಲ್ಲಿ ಝಾನ್ಸಿಗೆ ವರ್ಗಾವಣೆಯಾದ ನಂತರ ಅವರ ಕುಟುಂಬದಿಂದ ಅನಿವಾರ್ಯವಾಗಿ ದೂರವಾಗಬೇಕಾಯಿತು. ಮೊದಲ ಮಗಳಿಗೆ 11 ವರ್ಷ ವಯಸ್ಸು. ಆಕೆ ಅಜ್ಜಿ-ಅಜ್ಜಂದಿರ ಜೊತೆ ಇದ್ದುಕೊಂಡು ಶಾಲೆಗೆ ಹೋಗುತ್ತಾಳೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಪತಿ ಗುರ್ಗಾಂವ್ ನಲ್ಲಿದ್ದಾರೆ. ಅರ್ಚನಾ ಝಾನ್ಸಿಯಲ್ಲಿ! ಆರು ತಿಂಗಳ ತಮ್ಮ ಹಸುಗೂಸನ್ನು ಬಿಟ್ಟಿರಲೂ ಆಗದೆ, ಕೆಲಸವನ್ನೂ ಬಿಡಲಾಗದೆ ಅನಿವಾರ್ಯತೆಯಿಂದಾಗಿ, ಮಗುವನ್ನು ಪೊಲೀಸ್ ಠಾಣೆಗೇ ಕರೆತಂದು ಟೇಬಲ್ ಮೇಲೆ ಮಲಗಿಸಿಕೊಂಡೇ ಕೆಲಸ ಮಾಡುತ್ತಿದ್ದಾರೆ!

ಗರ್ಭಿಣಿಯರಿಗೆ ಸವಲತ್ತು : ಅಮೆರಿಕಕ್ಕಿಂತ ಭಾರತವೇ ಸಾವಿರಪಟ್ಟು ಮೇಲು!ಗರ್ಭಿಣಿಯರಿಗೆ ಸವಲತ್ತು : ಅಮೆರಿಕಕ್ಕಿಂತ ಭಾರತವೇ ಸಾವಿರಪಟ್ಟು ಮೇಲು!

Array

ವರ್ಗಾವಣೆಗೆ ಆದೇಶ!

'ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ವೈರಲ್ ಆಗಿದ್ದನ್ನು ಕಂಡು ಅರ್ಚನಾ ಅವರ ಸಮಸ್ಯೆಯನ್ನು ಗಂಭಿರವಾಗಿ ಪರಿಗಣಿಸಿದ್ದ ಉತ್ತರ ಪ್ರದೇಶ ಡಿಜಿಪಿ ಒ ಪಿ ಸಿಂಗ್ ಅವರು ಅರ್ಚನಾ ಅವರನ್ನು ಆಗ್ರಾಕ್ಕೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ. '21 ನೇ ಶತಮಾನದ ಸರ್ವೋತ್ತಮ ಮಹಿಳೆ ಅರ್ಚನಾ. ಮಹಿಳೆ ತನಗೆ ವಹಿಸಿದ ಎಲ್ಲಾ ಜವಾಬ್ದಾರಿಯನ್ನೂ ಪ್ರಾಮಾಣಿಕವಾಗಿ ನಿಭಾಯಿಸುತ್ತಾಳೆ ಎಂಬುದಕ್ಕೆ ಇದೊಂದು ಉದಾಹರಣೆ' ಎಂದು ಸಿಂಗ್ ಶ್ಲಾಘಿಸಿದ್ದಾರೆ.

ಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರ

ಹ್ಯಾಟ್ಸ್ ಆಫ್!

ಅವರ ಪತಿ ಬೇರೆಡೆಗೆ ಕೆಲಸ ಮಾಡುತ್ತಾರೆ. ತನ್ನ ಆರು ತಿಂಗಳ ಮಗುವನ್ನು ಆಕೆ ಝಾನ್ಸಿಯಲ್ಲಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮಗು ಮತ್ತು ಕೆಲಸ ಎರಡರ ಬಗ್ಗೆಯೂ ಅವರಿಗಿರುವ ನಿಷ್ಠೆ, ಸಮರ್ಪಣಾಭಾವಕ್ಕೆ ಹ್ಯಾಟ್ಸ್ ಆಫ್ ಎಂದೊಬ್ಬರು ಟ್ವೀಟ್ ಮಾಡಿದ್ದಾರೆ.

ನೀರವ ರಾತ್ರಿ, ನಿರ್ಜನ ಬಸ್ ಸ್ಟಾಪ್, ಒಂಟಿ ಮಹಿಳೆ... ಮುಂದೇನಾಯ್ತು?!ನೀರವ ರಾತ್ರಿ, ನಿರ್ಜನ ಬಸ್ ಸ್ಟಾಪ್, ಒಂಟಿ ಮಹಿಳೆ... ಮುಂದೇನಾಯ್ತು?!

Array

ಅವರಿಗೊಂದು ಸಲಾಂ

ಕರ್ತವ್ಯ ಮತ್ತು ಮಾತೃಪ್ರೇಮ ಎರಡನ್ನೂ ಒಂದೇ ತಕ್ಕಡಿಯಲ್ಲಿಟ್ಟು ಸರಿದೂಗಿಸಿಕೊಂಡು ಹೋಗುತ್ತಿರುವ ಅರ್ಚನಾ ಅವರಿಗೆ ನಮ್ಮದೊಂದು ಸಲಾಂ ಎಂದಿದ್ದಾರೆ ರಾಹುಲ್ ಶ್ರೀವಾತ್ಸವ್

3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!3 ತಿಂಗಳ ಮುದ್ದು ಮಗಳ ಜೊತೆ ವಿಶ್ವಸಂಸ್ಥೆಗೆ ಬಂದ ಜೆಸಿಂಡ!

English summary
Meet ‘MotherCop’ Archana posted at kotwali jhansi in Uttar Pradesh for whom the duties of motherhood and the department go side by side. Her photo goes viral on social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X