ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿವುಡರ ಮಿಸ್ ಏಷ್ಯಾ ಸ್ಪರ್ಧೆ ಗೆದ್ದ ಭಾರತದ ನಿಶಿತಾ ದುಡೇಜ

|
Google Oneindia Kannada News

ಜೈಪುರ, ಅಕ್ಟೋಬರ್ 01: ಕನಸಿನ ಬೆನ್ನೇರಿ ಸಾಗುವವರು ಕೆಲವೇ ಕೆಲವರು... ಆ ಕನಸು ನನಸಾಗುವವರೆಗೂ ನಿದ್ರಿಸದವರು ಅವರು.

ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

ಅದೇ ರೀತಿ ಹುಟ್ಟುತ್ತಲೇ ಕಿವುಡುತನ ಎಂಬ ಶಾಪವನ್ನು ಹೊತ್ತೇ ಬಂದ ನಿಶಿತಾ ತಮ್ಮ ದೌರ್ಬಲ್ಯವನ್ನೆಲ್ಲ ಮರೆತು ಕನಸಿನ ಬೆನ್ನೇರಿ ಹೊರಟವರು. ಇದೀಗ ಮಿಸ್ ಏಷ್ಯಾ ಡೆಫ್-2018 ರ ಕಿರೀಟವನ್ನು ಮುಡಿಗೇರಿಸಿಕೊಂಡವರು.

ದೆಹಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಸುಂದರಿಯ ನುಡಿಮುತ್ತುಗಳು! ದೆಹಲಿ ಪತ್ರಿಕಾಗೋಷ್ಠಿಯಲ್ಲಿ ವಿಶ್ವಸುಂದರಿಯ ನುಡಿಮುತ್ತುಗಳು!

ಹೌದು, 22 ವರ್ಷ ವಯಸ್ಸಿನ ನಿಶಿತಾ ದುಡೇಜ ಹುಟ್ಟಿದ್ದು ರಾಜಸ್ಥಾನದ ಜೈಪುರದಲ್ಲಿ. ತಂದೆ ವಿ ಪಿ ದುಡೇಜ, ನಾರ್ದರ್ನ್ ರೈಲ್ವೇಯಲ್ಲಿ ಮುಖ್ಯ ಇಂಜಿನಿಯರ್. ತಂದೆ ಮತ್ತು ತಾಯಿಯರ ನಿರಂತರ ಪರಿಶ್ರಮದಿಂದಾಗಿ ಜೆಕ್ ರಿಪಬ್ಲಿಕ್ ನ ಪ್ರಾಗ್ ನಲ್ಲಿ ನಡೆದ ಮಿಸ್ ಡೆಫ್ ಏಷ್ಯಾ ಸ್ಪರ್ಧೆಯಲ್ಲಿ ಇವರು ಜಯಗಳಿಸಿದ್ದಾರೆ.

ಪುಟ್ಟ ವಿಮಾನದಲ್ಲಿ ವಿಶ್ವ ಪರ್ಯಟನೆ: ಇಬ್ಬರು ಮಹಿಳೆಯರ ಸಾಹಸಗಾ ಪುಟ್ಟ ವಿಮಾನದಲ್ಲಿ ವಿಶ್ವ ಪರ್ಯಟನೆ: ಇಬ್ಬರು ಮಹಿಳೆಯರ ಸಾಹಸಗಾ

ತಮ್ಮ ಈ ಸಾಧನೆಗೆ ತಮ್ಮ ತಂದೆಯೇ ಕಾರಣ ಎನ್ನುತ್ತಾರೆ ನಿಶಿತಾ. ಅವರೇ ನನ್ನ ಬಲ ಎನ್ನುವ ನಿಶಿತಾ, ತಮ್ಮ ತಾಯಿಯ ಪ್ರೋತ್ಸಾಹವನ್ನೂ ನೆನಪಿಸಿಕೊಳ್ಳುತ್ತಾರೆ.

Nishitha wins miss Asia deaf title in Czech Republic

"ನಿಶಿತಾ ಎಂದಿಗೂ ತನ್ನ ಕನಸನ್ನು ಮರೆತು ಬದುಕಿದವಳಲ್ಲ. ಸದಾ ಅದರ ಹಿಂದೆಯೇ ಓಡಿದವಳು ಆಕೆ. ಚಿಕ್ಕ ವಯಸ್ಸಿನಿಂದ ಆಕೆಗೆ 'ಸ್ಪೀಚ್ ಥೆರಪಿ' ನೀಡೀದರೂ ಆಕೆಯ ಭಾಷೆ ಸ್ಪಷ್ಟವಾಗಿಲ್ಲ. ಆದರೆ ಆಕೆ ಸ್ಪಷ್ಟ ಭಾಷೆಯನ್ನು ಕಲಿಯಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾಳೆ. ಆಕೆಯ ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ ಇದು" ಎಂದು ಹೆಮ್ಮೆಯಿಂದ ಹೇಳುತ್ತಾರೆ ತಂದೆ ವಿ ಪಿ ದುಡೇಜ.

English summary
Nishtha, daughter of Mr.V. P. Dudeja, Chief Engineer (Construction), Northern Railway, has won Miss Deaf Asia title at beauty pageant held on 29th September in Prague, Czech Republic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X