ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೈವಾ ರಜನಿಕಾಂತ್ ರನ್ನೇ ಮೋಡಿ ಮಾಡಿದ ಈ ಪೋರ ಯಾರು?!

|
Google Oneindia Kannada News

ಚೆನ್ನೈ, ಜುಲೈ 18: ತಲೈವಾ ರಜನಿಕಾಂತ್ ಗೆ ಫ್ಯಾನ್ ಗಳೇನು ಕಡಿಮೆಯಾ? ತಮಿಳುನಾಡು, ಭಾರತವನ್ನು ಮೀರಿ ಅವರ ಅಭಿಮಾನಿ ಪ್ರಪಂಚ ಗಡಿಯಾಚೆಯ ದೇಶಗಳಿಗೂ ಪಸರಿಸಿದೆ. ಒಂದೇ ಒಂದು ಸಲ ರಜನಿ ಅವರನ್ನು ನೋಡಬೇಕು, ಅವರ ಆಟೋಗ್ರಾಫ್ ಪಡೆಯಬೇಕು ಎಂದೆಲ್ಲ ಕನಸು ಕಾಣುವವರು ಎಷ್ಟು ಜನರೋ!

ಆದರೆ ಇಷ್ಟೆಲ್ಲ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಒಬ್ಬ ಪುಟ್ಟ ಬಾಲಕನ ಬಗ್ಗೆ ಅಪರಿಮಿತ ಅಭಿಮಾನ ಹೊಂದಿದ್ದಾರಂತೆ! ಇದ್ಯಾರಿದು ರಜನಿಕಾಂತ್ ಗೇ ಮೋಡಿ ಮಾಡಿದ ಹುಡುಗ ಎಂದು ಯೋಚಿಸುತ್ತಿದ್ದೀರಾ?

ತನ್ನ ಮದುವೆಯಂದು ರಕ್ತದಾನ ಶಿಬಿರ ಏರ್ಪಡಿಸಿದ ಕೋಲ್ಕತ್ತದ ವಧು! ತನ್ನ ಮದುವೆಯಂದು ರಕ್ತದಾನ ಶಿಬಿರ ಏರ್ಪಡಿಸಿದ ಕೋಲ್ಕತ್ತದ ವಧು!

ತನಗೆ ರಸ್ತೆಯಲ್ಲಿ ಸಿಕ್ಕ ಪರ್ಸ್ ವೊಂದನ್ನು ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿ, ಅದರಲ್ಲಿದ್ದ ಬಿಡಿಗಾಸನ್ನೂ ಮುಟ್ಟದ ಏಳು ವರ್ಷದ ಹುಡುಗನೊಬ್ಬನ ಕತೆ ಇದು. ಈ ಹುಡುಗನ ಪ್ರಾಮಾಣಿಕತೆಗೆ ಮಾರುಹೋಗಿ, ರಜನಿಕಾಂತ್ ಆತನನ್ನು ಭೇಟಿಯಾಗಿದ್ದಾರೆ. ಆತನ ಶಿಕ್ಷಣದ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.

ಯಾರು ಈ ಹುಡುಗ?

ಯಾರು ಈ ಹುಡುಗ?

ಈ ಹುಡುಗನ ಹೆಸರು ಯಾಸಿನ್. ತಮಿಳುನಾಡಿನ ಎರೋಡ್ ಜಿಲ್ಲೆಯ ಚಿನ್ನಾ ಸೆಮು ಎಂಬಲ್ಲಿ ಎರಡನೇ ತರಗತಿ ಓದುತ್ತಿರುವ ಸುಮಾರು 7 ವರ್ಷ ವಯಸ್ಸಿನ ಈ ಹುಡುಗ, ಭ್ರಷ್ಟರೇ ತುಂಬಿದ ಈ ಯುಗದಲ್ಲೂ 'ಪ್ರಾಮಾಣಿಕತೆ'ಯ ಇರುವನ್ನು ತೋರಿಸಿಕೊಟ್ಟಿದ್ದಾನೆ. ಈತನಿಗೆ ತಾನು ಶಾಲೆಗೆ ಹೋಗುತ್ತಿದ್ದ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದೆ. ಯಾರೇ ಆದರೂ ಆ ಪರ್ಸನ್ನು ತೆಗೆದುಕೊಂಡು ತಂದೆಗೋ, ತಾಯಿಗೋ ನೀಡಿ ಆ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈ ಹುಡುಗ ಆ ಪರ್ಸ್ ಅನ್ನು ನೇರವಾಗಿ ತಮ್ಮ ಶಾಲೆಯ ಪ್ರಿನ್ಸಿಪಲ್ ಗೆ ಕೊಟ್ಟಿದ್ದಾನೆ. ಆ ಪರ್ಸ್ ಅನ್ನು ಪ್ರಿನ್ಸಿಪಲ್ ಪೊಲೀಸರಿಗೆ ಒಪ್ಪಿಸಿದ್ದಾರೆ!

ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ! ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!

ಪರ್ಸಿನಲ್ಲಿತ್ತು 50,000 ರೂ.

ಪರ್ಸಿನಲ್ಲಿತ್ತು 50,000 ರೂ.

ಆ ಪರ್ಸಿನಲ್ಲಿ ಬರೋಬ್ಬರಿ 50,000 ರೂ.ನಗದು ಹಣ ಮತ್ತು ಹಲವು ಮಹತ್ವದ ದಾಖಲೆಗಳು ಇದ್ದವು. ನಂತರ ಪೊಲೀಸರು ಈ ಪರ್ಸ್ ನಲ್ಲಿದ್ದ ಕೆಲವು ದಾಖಲೆಗಳ ಆಧಾರದ ಮೇಲೆ ಅದರ ವಾರಸುದಾರ ಯಾರು ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ನೀಡಿದ್ದಾರೆ.

ಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರುಹಸಿದವರಿಗೆ ಅನ್ನ ನೀಡಿ ಸಾರ್ಥಕತೆ ಪಡೆದ ಹೈದರಾಬಾದಿನ ಹುಡುಗರು

ಬಾಲಕನನ್ನು ಭೇಟಿಯಾದ ರಜನಿಕಾಂತ್

ಬಾಲಕನನ್ನು ಭೇಟಿಯಾದ ರಜನಿಕಾಂತ್

ಈ ವಿಷಯ ಕೇಳುತ್ತಿದ್ದಂತೆಯೇ ತಮಿಳು ನಟ ರಜನಿಕಾಂತ್ ಆ ಹುಡುಗ ಮತ್ತು ಆತನ ಕುಟುಂಬವನ್ನು ಚೆನ್ನೈಯಲ್ಲಿ ಭೇಟಿಯಾಗಿದ್ದಾರೆ. ಆ ಹುಡುಗನ ಬೆನ್ನು ತಟ್ಟಿ, ಆತನ ಪ್ರಾಮಾಣಿಕತೆಯನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಆ ಹುಡುಗನ ಉನ್ನತ ಶಿಕ್ಷಣದ ಕರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುವುದಾಗಿ ರಜನಿಕಾಂತ್ ಹೇಳಿದ್ದಾರೆ!

ಹುಡುಗನ ಪ್ರಾಮಾಣಿಕತೆಗೆ ತಲೈವಾ ಫಿದಾ!

ಹುಡುಗನ ಪ್ರಾಮಾಣಿಕತೆಗೆ ತಲೈವಾ ಫಿದಾ!

"ಬಿಡಿಗಾಸಿಗಾಗಿ ಕೊಲೆಯೇ ನಡೆಯುವ ಕಾಲ ಇದು. ಅಂಥಾದ್ದರಲ್ಲಿ ಕಾಲಕೆಳಗೆ ಸುಲಭವಾಗಿ ಬಿದ್ದಿದ್ದ ಹಣವನ್ನೂ ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿದ ಈ ಹುಡುಗನ ಪ್ರಾಮಾಣಿಕತೆ ನನಗೆ ನಿಜಕ್ಕೂ ಖುಷಿಕೊಟ್ಟಿತು. ಆತ ಎಲ್ಲರಿಗೂ ಸ್ಫೂರ್ತಿಯಾಗಲಿ. ಆತನ ಶಿಕ್ಷಣದ ಹೊಣೆ ನನ್ನದು" ಎಂದು ರಜನಿಕಾಂತ್ ಹೇಳಿದ್ದಾರೆ.

English summary
In today's world where honesty is rare to find, a small boy from Tamil Nadu showed us the real meaning of the virtue in a brilliant way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X