ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಲ್ಸ್‌ಗರ್ಲ್‌ನಿಂದ ರಕ್ಷಣಾ ಸಚಿವೆ: ನಿರ್ಮಲಾ ಸೀತಾರಾಮನ್ ಯಶೋಗಾಥೆ

|
Google Oneindia Kannada News

ನವದೆಹಲಿ, ಫೆಬ್ರವರಿ 2: ರಫೇಲ್ ಒಪ್ಪಂದದ ಕುರಿತಾದ ವಿರೋಧಪಕ್ಷಗಳ ಆರೋಪಗಳಿಗೆ ಸಂಸತ್‌ನಲ್ಲಿ ದಿಟ್ಟತನದ ಪ್ರತ್ಯುತ್ತರ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಾಗ್ಝರಿಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.

ಇದಕ್ಕಿಂತಲೂ ದೊಡ್ಡ ಅಚ್ಚರಿ, ಮನೋಹರ್ ಪರಿಕ್ಕರ್ ಅವರಿಂದ ತೆರವಾಗಿದ್ದ ರಕ್ಷಣಾ ಸಚಿವ ಸ್ಥಾನವನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಿದ್ದಾಗ ಉಂಟಾಗಿತ್ತು. ಆ ಜವಾಬ್ದಾರಿಯನ್ನು ನಿಭಾಯಿಸುವುದು ಸವಾಲಿನ ಸಂಗತಿ.

ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಲೇ, ಅವರಿಗೆ ಅಷ್ಟೇ ತೀಕ್ಷ್ಣ ಉತ್ತರ ನೀಡುತ್ತಲೇ ವಿವಿಧ ವಿವಾದ, ಆರೋಪಗಳ ನಡುವೆಯೇ ನಿರ್ಮಲಾ ಸಚಿವ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಈ ಗಟ್ಟಿತನ ಅವರಲ್ಲಿ ಬಂದಿದ್ದಾದರೂ ಹೇಗೆ? ಅವರು ರಾಜಕೀಯದಲ್ಲಿ ದೊಡ್ಡಮಟ್ಟಿಗಿನ ಜಿಗಿತ ಕಾಣಲು ಸಾಧ್ಯವಾಗಿದ್ದು ಹೇಗೆ ಎನ್ನುವ ಕುತೂಹಲಗಳು ಅವರ ಬದುಕಿನ ಪರಿವರ್ತನೆಯ ಅಚ್ಚರಿಗಳನ್ನು ತೆರೆದಿಡುತ್ತವೆ.

ಸೇಲ್ಸ್‌ಗರ್ಲ್ ಆಗಿದ್ದ ಅವರು ದೇಶದ ಹೆಮ್ಮೆಯ ರಕ್ಷಣಾ ಸಚಿವೆಯಾಗಿದ್ದು ಸ್ಫೂರ್ತಿದಾಯಕ ಕತೆಯೂ ಹೌದು. ಅವರ ಬದುಕಿನ ಸಣ್ಣ ನೋಟ ಇಲ್ಲಿದೆ...

ಮದುರೆಯಲ್ಲಿ ಜನನ

ಮದುರೆಯಲ್ಲಿ ಜನನ

ನಿರ್ಮಲಾ ಹುಟ್ಟಿದ್ದು ತಮಿಳುನಾಡಿನ ಮದುರೆಯಲ್ಲಿ. ತಮ್ಮ ಬದುಕಿನ ಬಾಲ್ಯದ ದಿನಗಳನ್ನು ಅವರು ಕಳೆದದ್ದು ಚೆನ್ನೈನಲ್ಲಿ. ಅವರ ತಂದೆ ಭಾರತೀಯ ರೈಲ್ವೆಯಲ್ಲಿ ನೌಕರರಾಗಿದ್ದರಿಂದ ಆಗಾಗ ವರ್ಗಾವಣೆಯಾಗುತ್ತಿತ್ತು. ಹೀಗಾಗಿ ನಿರ್ಮಲಾ ತಿರುಚಿರಾಪಳ್ಳಿಯಲ್ಲಿ ಸಂಬಂಧಿಕರ ಮನೆಯಲ್ಲಿದ್ದು ಬಿ.ಎ. ಪದವಿ ಶಿಕ್ಷಣ ಪೂರೈಸಿದರು.

ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವ ಕುಟುಂಬ ಅವರದು. ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿ ಪಡೆಯುವ ವೇಳೆ ಅವರಿಗೆ ರಾಜಕೀಯದ ಪರಿಚಯವಾಯಿತು.

ಎಚ್ ಎಎಲ್ ಬಗ್ಗೆ ಸರಕಾರದ ಮೇಲಿನ ಸಂಶಯವು ದಾರಿ ತಪ್ಪಿಸುವಂಥದ್ದು, ಸಂಸತ್ ನಲ್ಲಿ ರಕ್ಷಣಾ ಸಚಿವೆಎಚ್ ಎಎಲ್ ಬಗ್ಗೆ ಸರಕಾರದ ಮೇಲಿನ ಸಂಶಯವು ದಾರಿ ತಪ್ಪಿಸುವಂಥದ್ದು, ಸಂಸತ್ ನಲ್ಲಿ ರಕ್ಷಣಾ ಸಚಿವೆ

ಮಾವ ಕಾಂಗ್ರೆಸ್ ರಾಜಕಾರಣಿ

ಮಾವ ಕಾಂಗ್ರೆಸ್ ರಾಜಕಾರಣಿ

ನಿರ್ಮಲಾ ಅವರ ರಾಜಕೀಯದ ನಂಟು ಶುರುವಾಗಿದ್ದು, ಕಾಂಗ್ರೆಸ್‌ನಿಂದ ಸಚಿವರಾಗಿದ್ದ ಪರ್ಕಳ ಶೇಷಾವತಾರಂ ಅವರ ಮಗ ಡಾ. ಪ್ರಭಾಕರ್ ಪರ್ಕಳ ಅವರ ಮೂಲಕ. ಪ್ರಭಾಕರ್ ಅವರು ಕಾಂಗ್ರೆಸ್ ಒಲವಿನವರಾದರೆ, ನಿರ್ಮಲಾ ಅವರು ಬಿಜೆಪಿ ಪರ ಆಸಕ್ತಿ ಹೊಂದಿದ್ದರು. 1986ರಲ್ಲಿ ಇಬ್ಬರೂ ಮದುವೆಯಾದರು.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌ಡಿಗಾಗಿ ಸ್ಕಾಲರ್‌ಶಿಪ್‌ ಪಡೆದ ಪ್ರಭಾಕರ್ ಲಂಡನ್‌ಗೆ ತೆರಳಿದರು.

ಲಂಡನ್‌ನಲ್ಲಿ ಸೇಲ್ಸ್‌ಗರ್ಲ್

ಲಂಡನ್‌ನ ರೆಜೆಂಟ್ ಸ್ಟ್ರೀಟ್‌ನಲ್ಲಿರುವ ಗೃಹಾಲಂಕಾರ ಅಂಗಡಿ 'ಹ್ಯಾಬಿಟ್ಯಾಟ್'ನಲ್ಲಿ ನಿರ್ಮಲಾ ಸೇಲ್ಸ್‌ಗರ್ಲ್ ಕೆಲಸಕ್ಕೆ ಸೇರಿಕೊಂಡರು. ಅಗ್ರಕಲ್ಚರ್ ಎಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಅರ್ಥಶಾಸ್ತ್ರಜ್ಞರೊಬ್ಬರ ಸಹಾಯಕರಾಗಿ ಕೆಲಸ ಮಾಡಿದ್ದರು. ಬಳಿಕ ಪ್ರೈಸ್ ವಾಟರ್ ಹೌಸ್ ನಲ್ಲಿ ಹಿರಿಯ ಮ್ಯಾನೇಜರ್ ಆಗಿ ಮತ್ತು ಬಿಬಿಸಿ ವರ್ಲ್ಡ್ ಸರ್ವಿಸ್‌ನಲ್ಲಿ ಅಲ್ಪಕಾಲ ಕೆಲಸ ಮಾಡಿದ್ದರು.

ಮಹಿಳಾ ಆಯೋಗಕ್ಕೆ ನೇಮಕ

ಮಹಿಳಾ ಆಯೋಗಕ್ಕೆ ನೇಮಕ

1991ರಲ್ಲಿ ಇಬ್ಬರೂ ಭಾರತಕ್ಕೆ ಮರಳಿದರು. ನಿರ್ಮಲಾ ಅವರು ಹೈದರಾಬಾದ್‌ನಲ್ಲಿ ಶಾಲೆಯೊಂದನ್ನು ತೆರೆದರು. ಈ ಸಂದರ್ಭದಲ್ಲಿ ಅವರು ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು. ಮುಂದೆ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (2003-05) ನೇಮಿಸಲಾಯಿತು. ಪ್ರಭಾಕರ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಸಂವಹನ ಸಲಹೆಗಾರರಾಗಿ ಕೆಲಸ ನಿರ್ವಹಿಸಿದ್ದರು.

'ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?''ಸಾಕ್ಷ್ಯ ಇಲ್ಲಿದೆ ನೋಡಿ ರಾಹುಲ್, ಈಗ ದೇಶದ ಜನರ ಕ್ಷಮೆ ಕೇಳ್ತೀರಾ?'

ಪಕ್ಷದಲ್ಲಿ ದೊರೆತ ಮನ್ನಣೆ

ಪಕ್ಷದಲ್ಲಿ ದೊರೆತ ಮನ್ನಣೆ

ಮೂರು ವರ್ಷದ ಅನುಭವದ ಬಳಿಕ ಅವರು 2006ರಲ್ಲಿ ಬಿಜೆಪಿ ಸೇರ್ಪಡೆಯಾದರು. ಪಕ್ಷದೊಳಗೆ ಮಹಿಳೆಯರಿಗೆ ಶೇ 33ರ ಮೀಸಲಾತಿಯನ್ನು ಅಳವಡಿಸಿಕೊಂಡಾಗ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಸೇರಿಕೊಳ್ಳಲು ಆಹ್ವಾನ ನೀಡಲಾಯಿತು. 2010ರಲ್ಲಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರೆಯಾಗಿ ನೇಮಕವಾಗಿ, ಹೈದರಾಬಾದ್‌ನಿಂದ ದೆಹಲಿಗೆ ವಾಸ್ತವ್ಯ ಬದಲಿಸಿದರು.

ಎರಡನೆಯ ಮಹಿಳಾ ರಕ್ಷಣಾ ಸಚಿವರು

ಎರಡನೆಯ ಮಹಿಳಾ ರಕ್ಷಣಾ ಸಚಿವರು

ಆಂಧ್ರಪ್ರದೇಶದಿಂದ ರಾಜ್ಯಸಭೆ ಸದಸ್ಯೆಯಾಗಿ ಆಯ್ಕೆಯಾದ ಅವರು 2014ರಲ್ಲಿ ಕಿರಿಯ ಸಚಿವೆಯಾಗಿ ನರೇಂದ್ರ ಮೋದಿ ಸಂಪುಟವನ್ನು ಸೇರಿಕೊಂಡಿದ್ದರು. ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯಖಾತೆ ಸಚಿವೆಯಾಗಿ, ವಾಣಿಜ್ಯ ಹಾಗೂ ಕೈಗಾರಿಕೆಗಳ ಸ್ವತಂತ್ರ ಸಚಿವೆಯಾಗಿ ಅನುಭವ ಪಡೆದುಕೊಂಡರು.

2016ರ ಮೇನಲ್ಲಿ ಅವರು ರಾಜ್ಯಸಭೆಗೆ ಕರ್ನಾಟಕದಿಂದ ಸ್ಪರ್ಧಿಸಿ ಆಯ್ಕೆಯಾದರು. 2017ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಚಿವೆಯಾಗಿ ಬಡ್ತಿ ಪಡೆದರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಬಳಿಕ ರಕ್ಷಣಾ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗಾಂಧಿ ಕುಟುಂಬಕ್ಕೆ ಜಾಣ ಕಿವುಡು: ನಿರ್ಮಲಾ ಸೀತಾರಾಮನ್ ತಪರಾಕಿಗಾಂಧಿ ಕುಟುಂಬಕ್ಕೆ ಜಾಣ ಕಿವುಡು: ನಿರ್ಮಲಾ ಸೀತಾರಾಮನ್ ತಪರಾಕಿ

English summary
With the fame of second Indian woman to handling Defence Ministry, Nirmala Sitharaman journey of success is motivating. Here is brief and interesting life history of Nirmala Sitharaman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X