ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸೇರಿದಂತೆ 80 ದೇಶ ಸೈಕಲ್ ಮೇಲೆ ಸುತ್ತಿರುವ 71ರ 'ಯುವಕ'!

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಅಕ್ಟೋಬರ್ 27 : ಅರೇ ನಮಗೆ ವಯಸ್ಸಾಯಿತು. ಈ ಕಾಲದಲ್ಲಿ ಏನು ಮಾಡೋಕೆ ಆಗುತ್ತೇ ಹೇಳಿ? ಅಂತ ಗೊಣಗಿಕೊಂಡು ದೇವರು, ದೇವಸ್ಥಾನ ಅಥವಾ ಮನೆಯನ್ನು ಬಿಟ್ಟು ಎಲ್ಲಿಯೋ ಹೋಗದೇ ಕಾಲ ಕಳೆಯುವ ವೃದ್ಧರೇ ಹೆಚ್ಚು. ಒಂದಿಷ್ಟು ಜನ ಸಂಜೆ ಸೇರಿಕೊಂಡು ಹರಟೆ ಹೊಡೆದು ಮನೆ ದಾರಿ ಹಿಡಿಯುತ್ತಾರೆ.

ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಇವರ ವಯಸ್ಸು ಕೇವಲ 71. ಇದುವರೆಗೂ ಬರೋಬ್ಬರಿ 7 ಬಾರಿ ವಿಶ್ವ ಪರ್ಯಟನೆ ಮಾಡಿದ ಸಾಧಕ, ಯುವಕರಿಗೆ ಸ್ಫೂರ್ತಿಯ ಚಿಲುಮೆ. ಇದು ಯಾವುದರಲ್ಲಿ ಅಂತೀರಾ? ಸೈಕಲ್ ನಲ್ಲಿ ಎಂದರೆ ನಂಬ್ತೀರಾ? ನಂಬಲೇಬೇಕು, ಏಕೆಂದರೆ ಅದೇ ವಾಸ್ತವ.

ವಿದೇಶಿ ಪ್ರಜೆಯೊಬ್ಬರು ಸೈಕಲ್ ತುಳಿಯುತ್ತಾ ಏಳನೇ ಬಾರಿ ವಿಶ್ವ ಪರ್ಯಟನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ಪ್ರವೇಶಿಸಿದ ಇವರು ನಾಲ್ಕನೇ ಬಾರಿಗೆ ಭಾರತಕ್ಕೆ ಬಂದಿದ್ದಾರೆ ಎಂಬುದು ಆಶ್ಚಯರ್ಕರ ವಿಚಾರ.

ಶೌಚಾಲಯ... ಇಲ್ಲಿ ಸ್ವಚ್ಛತೆಯ ಪ್ರತೀಕ, ಸಬಲೀಕರಣದ ದ್ಯೋತಕ ಶೌಚಾಲಯ... ಇಲ್ಲಿ ಸ್ವಚ್ಛತೆಯ ಪ್ರತೀಕ, ಸಬಲೀಕರಣದ ದ್ಯೋತಕ

ಇಟಲಿಯ ಅರ್ಮಾಂಡೊ ಸೈಕಲ್ ಮೇಲೆ ಜಾಲಿಯಾಗಿ ವಿಶ್ವ ಪರ್ಯಟನೆಗೆ ಹೊರಟವರು. ಅವರು ಸದ್ಯ ಜರ್ಮನಿಯಲ್ಲಿ ವಾಸ ಮಾಡುತ್ತಿದ್ದಾರೆ. ಈಗಾಗಲೇ ಒಟ್ಟು 12.5 ಲಕ್ಷ ಕಿ.ಮೀ. ದೂರವನ್ನು ಸೈಕಲ್‌ ನಲ್ಲೇ ಕ್ರಮಿಸಿದ್ದಾರೆ. 35 ವರ್ಷಗಳಿಂದ ಪರ್ಯಟನೆ ಮಾಡುತ್ತಿರುವ ಅವರು, ಇಲ್ಲಿಯವರೆಗೆ 80 ದೇಶಗಳನ್ನು ಸುತ್ತಿ ಕೈಲಾಗದವನೆಂದು ಹೇಳುವವರ ಮೂಗಿನ ಬೆರಳೆಟ್ಟು ನೋಡಿಕೊಳ್ಳುವಂತೆ ಮಾಡಿದ್ದಾರೆ.

ಪಿಂಚಣಿ ಹಣದಲ್ಲಿಯೇ ಸೈಕಲ್ ಸವಾರಿ

ಪಿಂಚಣಿ ಹಣದಲ್ಲಿಯೇ ಸೈಕಲ್ ಸವಾರಿ

ಅರ್ಮಾಂಡೊ ಪತ್ನಿ ಜಿಸೆಲಾ 2005ರಲ್ಲಿ ತೀರಿಕೊಂಡಳು. ಅವರ ಮಕ್ಕಳು, ಮೊಮ್ಮಕ್ಕಳು ಜರ್ಮನಿಯಲ್ಲೇ ವಾಸವಾಗಿದ್ದಾರೆ. ಅಷ್ಟೇ ಅಲ್ಲದೇ ಜರ್ಮನಿಯಲ್ಲಿ ಅರ್ಮಾಂಡೊಗೆ ಹೆಲ್ಲಾ ಎಂಬ ಹೆಸರಿನ ಪ್ರೇಯಸಿ ಸಹ ಇದ್ದಾರೆ. ನನಗೆ ವಯಸ್ಸಾಗಿರುವ ಕಾರಣ ಜರ್ಮನ್ ಸರ್ಕಾರದಿಂದ ಪಿಂಚಣಿ ಬರುತ್ತದೆ. ಅದೇ ಹಣದಿಂದ ಪ್ರವಾಸ ಮಾಡುತ್ತಿದ್ದಾರೆ. ಪ್ರತಿ ದಿನ 80ರಿಂದ 100 ಕಿ.ಮೀ. ಕ್ರಮಿಸುತ್ತಿದ್ದೇನೆ ಎನ್ನುತ್ತಾರೆ ಅರ್ಮಾಂಡೊ.

ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ ಯಶೋಗಾಥೆ: ಜಪಾನ್ನಿನಲ್ಲಿ ಮಿನುಗುತ್ತಿರುವ ನಮ್ಮ ಕೃಷಿತಜ್ಞ ಡಾ. ಶ್ರೀಹರಿ

ಅರ್ಮಾಂಡೋ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ

ಅರ್ಮಾಂಡೋ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ

ಇನ್ನು ಒಂದು ದೇಶ ಸುತ್ತಾಡಿದ ಬಳಿಕ ಇನ್ನೊಂದು ದೇಶಕ್ಕೆ ವಿಮಾನದ ಮೂಲಕ ಹೊರಡುತ್ತಾರೆ. ಲಗೇಜ್ಗಳನ್ನೆಲ್ಲ ಪ್ಯಾಕ್ ಮಾಡಿ, ಅದರೊಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಆ ದೇಶ ತಲುಪಿದ ಬಳಿಕ ಅಲ್ಲಿ ಮತ್ತೆ ವಾಪಸ್ ಅವುಗಳನ್ನು ಬಿಚ್ಚಿ ಎಂದಿನಂತೆ ಸೈಕ್ಲಿಂಗ್ ಮಾಡುತ್ತಾರೆ ಅರ್ಮಾಂಡೊ. ಜಾಗತಿಕ ತಾಪಮಾನ ಏರುತ್ತಿರುವ ಹೊತ್ತಿನಲ್ಲಿ ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡಿ ಸೈಕಲ್ ಬಳಸಬೇಕೆನ್ನುವವರಿಗೆ ಅರ್ಮಾಂಡೋ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇಷ್ಟು ವಯಸ್ಸಾದವರೇ ಸೈಕಲ್ ಏರುತ್ತಿರುವಾಗ ನಮಗೇನು ಕಷ್ಟ?

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

ಮೊಬೈಲ್, ಲ್ಯಾಪ್ ಟಾಪ್ ಬಳಸಲ್ಲ, ಯಾವುದೇ ದುಶ್ಟಟ ಇಲ್ಲ

ಮೊಬೈಲ್, ಲ್ಯಾಪ್ ಟಾಪ್ ಬಳಸಲ್ಲ, ಯಾವುದೇ ದುಶ್ಟಟ ಇಲ್ಲ

ಅರ್ಮಾಂಡೊ ಅವರು ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಬಳಸುವುದಿಲ್ಲ. ಸೈಕ್ಲಿಂಗ್ ಬಗ್ಗೆ ಅವರೊಂದಿಗೆ ಮಾತಿಗೆ ಇಳಿಯುವರ ಬಳಿಯೇ ತಮ್ಮ ಫೋಟೊಗಳನ್ನು ತೆಗೆದು ಪುತ್ರನಿಗೆ ಇಮೈಲ್ ಮೂಲಕ ಕಳುಹಿಸುವಂತೆ ಅರ್ಮಾಂಡೊ ಕೇಳಿಕೊಳ್ಳುತ್ತಾರೆ. ಅಲ್ಲದೇ ತಾವಿರುವ ಜಾಗವನ್ನೂ ಉಲ್ಲೇಖಿಸುವಂತೆ ಅವರು ತಿಳಿಸುತ್ತಾರೆ. ಮಾರ್ಗಮಧ್ಯೆ ಸಿಗುವ ಹೋಟೆಲ್ಗಳಲ್ಲಿ ಊಟ, ತಿಂಡಿಯನ್ನು ಅವರು ಮಾಡುತ್ತಾರೆ. ಯಾವುದೇ ದುಷ್ಟಟವನ್ನು ಅವರು ಹೊಂದಿಲ್ಲ. ಅದೇ ಅವರ ಯಶಸ್ಸಿನ ಗುಟ್ಟು ಕೂಡ. ಪೆಟ್ರೋಲ್ ಬಂಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಹೊತ್ತು ತಂಗಿ, ಬೆಳಿಗ್ಗೆ ಎಂದಿನಂತೆ ಅವರು ಸೈಕ್ಲಿಂಗ್ ಪ್ರಾರಂಭಿಸುತ್ತಾರೆ.

ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್ ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈ ಕಮಿಶನರ್ ಆದ ಇಶಾ ಬಹಾಳ್

ಬೆನ್ನು ನೋವೇ ಇವರ ಸೈಕ್ಲಿಂಗ್ ಗೆ ಮೂಲ ಕಾರಣ

ಬೆನ್ನು ನೋವೇ ಇವರ ಸೈಕ್ಲಿಂಗ್ ಗೆ ಮೂಲ ಕಾರಣ

ಈ ಸೈಕಲ್ ಯಾತ್ರೆಗೆ ಕಾರಣವೇನೆಂದು ಕೇಳಿದಾಗ ಅವರು ನಗುತ್ತಲೇ ಉತ್ತರಿಸುತ್ತಾರೆ. 1983ರ ಸಮಯ. ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಕಸ್ಮಾತ್ ಆಗಿ ಬಿದ್ದು ಬೆನ್ನು ನೋವು ಕಾಣಿಸಿಕೊಂಡಿತು. ಇದರಿಂದಾಗಿ ವೈದ್ಯರು ಯಾವುದಾದರೂ ಕ್ರೀಡೆಯಲ್ಲಿ ಭಾಗಿಯಾಗುವಂತೆ ಸಲಹೆ ನೀಡಿದರು. ನನಗೆ ಸೈಕ್ಲಿಂಗ್‌ ಅಚ್ಚುಮೆಚ್ಚು. ಹೀಗಾಗಿ ಅದನ್ನೇ ಆಯ್ದುಕೊಂಡು, ಅಂದಿನಿಂದ ವಿಶ್ವಪರ್ಯಟನೆ ಶುರು ಮಾಡಿದೆ ಎಂದು ಹೇಳುತ್ತಾರೆ ಅರ್ಮಾಂಡೋ. ತಮ್ಮ ಅನಾರೋಗ್ಯವನ್ನು ಮೆಟ್ಟಿನಿಂತು, ಜೀವನವನ್ನು ಸಾವಲಾಗಿ ಸ್ವೀಕರಿಸಿ, ಸೈಕ್ಲಿಂಗ್ ಅನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನಲ್ಲಿ ವಿಶಿಷ್ಟ ಬಗೆಯ ಸಾಧನೆ ಮಾಡಿದ್ದಾರೆ ಅರ್ಮಾಂಡೋ.

ಇದುವರೆಗೂ 80 ದೇಶಗಳನ್ನು ಸುತ್ತಿರುವ ಅರ್ಮಾಂಡೊ

ಇದುವರೆಗೂ 80 ದೇಶಗಳನ್ನು ಸುತ್ತಿರುವ ಅರ್ಮಾಂಡೊ

ಇದೇ 2018ರ ಜೂನ್ 25ರಂದು ಜರ್ಮನಿಯಿಂದ ಏಳನೇ ವಿಶ್ವ ಪರ್ಯಟನೆ ಪ್ರಾರಂಭಿಸಿದ ಅವರು, ಸೆ.23ರಂದು ಭಾರತ ಪ್ರವೇಶಿಸಿದರು. ಅಮೃತ್‌ಸರ, ಆಗ್ರಾ, ಕೋಲ್ಕತ್ತ, ಚೆನ್ನೈ, ಕನ್ಯಾಕುಮಾರಿಗೆ ಭೇಟಿ ನೀಡಿ, ಕೇರಳ ಮಾರ್ಗವಾಗಿ ರಾಜ್ಯವನ್ನು ಪ್ರವೇಶಿಸಿದ್ದಾರೆ. ಅರ್ಮಾಂಡೊ ಅವರಿಗೆ ಕಲೆ ಹಾಗೂ ಸಂಸ್ಕೃತಿಗಳ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿದ್ದಾರೆ. ಅವರು ಭೇಟಿ ನೀಡುವ ಎಲ್ಲ ದೇಶಗಳಲ್ಲಿಯೂ ಅಲ್ಲಿನ ವಿಶೇಷತೆಗಳನ್ನು ಸ್ಥಳೀಯರಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಅರ್ಮಾಂಡೊ ಇದುವರೆಗೂ 80 ದೇಶಗಳನ್ನು ತಮ್ಮ ಸೈಕಲ್ ಪರ್ಯಟನೆಯಲ್ಲಿ ಸುತ್ತಿದ್ದಾರೆ. ಅಲ್ಲದೇ ಭಾರತಕ್ಕೆ ಬಂದಾಗ ಇಲ್ಲಿನ ಜನರೊಂದಿಗೆ ವ್ಯವಹರಿಸುವ ಸಲುವಾಗಿ ಹಿಂದಿಯನ್ನು ಸಹ ಕಲಿತಿರುವುದು ವಿಶೇಷವೇ ಸರಿ.

English summary
Italian 71 YO cyclist Armando is an inspiration to youth. The resident of Germany, has gone to 80 countries around the world, including our India for 4 times. He has no bad habits, doesn't carry mobile or laptop. That is the secret of his energy and enthusiasm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X