ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಕ್ಷಾಬಂಧನಕ್ಕೆ ಕಳೆ ನೀಡಲಿದೆ ಅಂಧರು ಮಾಡಿದ ಸುಂದರ ರಾಖಿ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಗಾಂಧಿನಗರ, ಜುಲೈ 28: ಅಣ್ಣ-ತಂಗಿಯರ ಬಂಧವನ್ನು ಗಟ್ಟಿಯಾಗಿಸುವ ರಾಖಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ನಡೆಯುವ ಹಬ್ಬ ಈ ವರ್ಷ ಆಗಸ್ಟ್ 26 ರಂದು ಬಂದಿದೆ.

ಮಾರುಕಟ್ಟೆಗೆ ಈಗಾಗಲೇ ತರಹೇವಾರಿ ರಾಖಿಗಳು ಲಗ್ಗೆ ಇಟ್ಟಿವೆ. ಆದರೆ ಗುಜರಾತಿನ ಅಹ್ಮದಾಬಾದಿನಲ್ಲೊಂದು ಕಡೆ ತಯಾರಾಗುತ್ತಿರುವ ರಾಖಿ ವಿಶಿಷ್ಟವೆನ್ನಿಸಿದೆ. ಅದಕ್ಕೆ ಕಾರಣ ಈ ರಾಖಿಯನ್ನು ತಯಾರಿಸುತ್ತಿರುವವರು ಅಂಧರು!

ತಲೈವಾ ರಜನಿಕಾಂತ್ ರನ್ನೇ ಮೋಡಿ ಮಾಡಿದ ಈ ಪೋರ ಯಾರು?!ತಲೈವಾ ರಜನಿಕಾಂತ್ ರನ್ನೇ ಮೋಡಿ ಮಾಡಿದ ಈ ಪೋರ ಯಾರು?!

ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹ ಎಂಬ ದೃಷ್ಟಿಹೀನ ಮಹಿಳೆಯರಿಗಾಗಿ ಇರುವ ಎನ್ ಜಿಒ ವೊಂದು ಪ್ರತಿವರ್ಷ ರಾಖಿ ತಯಾರಿಸಿ ದೇಶದೆಲ್ಲೆಡೆ ಹಂಚುತ್ತದೆ. ಕಣ್ಣೇ ಇಲ್ಲದಿದ್ದರೂ ಇವರು ತಯಾರಿಸುವ ಸುಂದರ ರಾಖಿಗೆ ದೇಶದೆಲ್ಲೆಡೆ ಬೇಡಿಕೆ ಇದೆ!

Gujarat: This Raksha Bandhan buy beautiful rakhis made by visually-challenged girls

ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!

ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಯುವತಿಯರು ತಯಾರಿಸುವ ರಾಖಿಗೆ ವಿಶೇಷ ಸ್ಥಾನ ನೀಡಲಾಗಿದೆ. ಅಣ್ಣ-ತಂಗಿಯರ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಈ ಪವಿತ್ರ ದಾರದಲ್ಲಿ ಈ ಅಂಧರು ತುಂಬುವ ಆಪ್ತ ಭಾವದಿಂದಾಗಿ ರಾಖಿ ಮಹತ್ವ ಪಡೆದಿದೆ.

ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹವು 200 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಶಿಕ್ಷಣ, ವಸತತಿ ಮತ್ತು ವೃತ್ತಿ ತರಬೇತಿ ನೀಡುತ್ತಿದೆ. ಪ್ರತಿ ವರ್ಷವೂ ರಾಖಿ ಹಬ್ಬಕ್ಕೂ ಎರಡು ಮೂರು ತಿಂಗಳು ಮೊದಲು ಪ್ರಕಾಶ ಗೃಹದಲ್ಲಿ ಸಂಭ್ರಮದ ವಾತಾವರಣ ಮೇಳೈಸುತ್ತದೆ.

English summary
They are visually-challenged, but they do imagine. And it is their imagination that takes wings in the beautifully and intricately designed rakhis made by a group of visually-challenged girls at Andh Kanya Prakash Gruh in Ahmedabad, Gujarat every year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X