ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ಹುಮ್ಮಸ್ಸು ಅಂದ್ರೆ! ಸಮುದ್ರವನ್ನೇ ಸ್ವಚ್ಛಗೊಳಿಸುತ್ತಿರುವ ಪೋರ!

|
Google Oneindia Kannada News

ಡೆಲ್ಫ್ಟ್(ನೆದರ್ಲೆಂಡ್), ಸೆಪ್ಟೆಂಬರ್ 08: ಅದ್ಯಾಕೋ ಗೊತ್ತಿಲ್ಲ ಆ ಹುಡುಗನಿಗೆ ಸಮುದ್ರ ಅಂದ್ರೆ ಎಲ್ಲಿಲ್ಲದ ಸೆಳೆತ. ಬಹಳ ದಿನಗಳ ಕಾಲ ಮನೆಬಿಟ್ಟಿದ್ದರೆ 'ಹೋಮ್ ಸಿಕ್' ಆಗುವಂತೆ ಈತ ಆಗಾಗ 'seasick' ಆಗಿಬಿಡುತ್ತಿದ್ದ. ಆಗೆಲ್ಲ ಸಾಗರದ ಅಲೆಗಳು ಅವನನ್ನು ಕೈಬೀಸಿ ಕರೆದಂತನ್ನಿಸುತ್ತಿತ್ತು... ಆ ಅಗಾಧ ಅಲೆಗಳ ಒಡಲಲ್ಲಿ ಬೆರಳಾಡಿಸುವ ಹುಚ್ಚು ಆಸೆ... ನೀರಿನ ಗರ್ಭದ ಜೀವ ಜಂತುಗಳೊಡನೆ ಒಡನಾಡೋ ಉತ್ಕಟ ಬಯಕೆ...

ನೆದರ್ಲೆಂಡಿನ ಡೆಲ್ಫ್ಟ್ ಎಂಬಲ್ಲಿ ಜನಿಸಿದ ಬೊಯನ್ ಸ್ಲಾಟ್ ಎಂಬ ಹುಡುಗನ ಹುಮ್ಮಸ್ಸಿನ ಕತೆ ಇದು. ಡೈವಿಂಗ್ ಎಂದರೆ ಜೀವ ಬಿಡುವಷ್ಟು ಕ್ರೇಜ್ ಬೆಳೆಸಿಕೊಂದಿದ್ದ ಹುಡುಗನಿಗೆ, ಗ್ರೀಸ್ ನಲ್ಲೊಮ್ಮೆ ಡೈವಿಂಗ್ ಮಾಡುವಾಗ ಆದ ಅನುಭವ ಬದುಕಿನ ಯೋಚನಾ ಲಹರಿಯನ್ನೇ ಬದಲಿಸಿತ್ತು.

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಡೈವಿಂಗ್ ಮಾಡುತ್ತ ಸಮುದ್ರದಾಳದ ಜೀವಜಂತುಗಳನ್ನು ಕಣ್ತುಂಬಿಸಿಕೊಳ್ಳಲು ಹೊರಟ ಸ್ಲಾಟ್ ಗೆ ಮೀನುಗಳಿಗಿಂತ ಹೆಚ್ಚಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್ ಗಳೇ ಕಾಣಿಸಿಕೊಂಡಿದ್ದು ಭ್ರಮನಿರಸನವನ್ನುಂಟು ಮಾಡಿತ್ತು. ತನ್ನ ಶರಧಿ ಶುದ್ಧತೆಯ ಪ್ರತೀಕ ಎಂದುಕೊಂದಿದ್ದವನಿಗೆ ಮೊಟ್ಟ ಮೊದಲ ಬಾರಿಗೆ ಸಮುದ್ರದ ಬಗೆಗೆ ಸೆಳೆತದ ಬದಲು ಅನುಕಂಪ ಹುಟ್ಟಿಕೊಂಡಿತ್ತು. ಆ ಅನುಕಂಪವೇ ಆತನಲ್ಲಿ ಸಮುದ್ರವನ್ನೇ ಸ್ವಚ್ಛಗೊಳಿಸುವ ಹುಚ್ಚು ಹುಮ್ಮಸ್ಸೊಂದನ್ನು ಬಿತ್ತಿತ್ತು!

ಓದನ್ನೂ ಅರ್ಧಕ್ಕೇ ಬಿಟ್ಟು ಕಳೆದ ಐದೂವರೆ ವರ್ಷಗಳಿಂದ ಸಮುದ್ರವನ್ನು ಸ್ವಚ್ಛಗೊಳಿಸುವ ಹುಚ್ಚು ಸಾಹಸವೊಂದಕ್ಕೆ ಕೈಹಾಕಿದ್ದಾರೆ ಸ್ಲಾಟ್... ಐದು ವರ್ಷಗಳ ಸತತ ಪರಿಶ್ರಮ, ಸಮುದ್ರದ ಬಗೆಗಿನ ಕಾಳಜಿ ಫಲ ನೀಡಿದೆ. ಸಮುದ್ರವನ್ನು ಪ್ಲಾಸ್ಟಿಕ್ ಮುಕ್ತ ಆಡುವ ಅವರ ಕನಸು ನನಸಾಗುವ ದಾರಿ ಗೋಚರಿಸಿದೆ.

ಜನ್ಮತಾಳಿದ 'ದಿ ಓಶನ್ ಕ್ಲೀನ್ ಅಪ್'

ಜನ್ಮತಾಳಿದ 'ದಿ ಓಶನ್ ಕ್ಲೀನ್ ಅಪ್'

2013 ರಲ್ಲಿ 'ದಿ ಓಶನ್ ಕ್ಲೀನ್ ಅಪ್' ಎಂಬ ನಾನ್ ಪ್ರಾಫಿಟ್ ಆರ್ಗನೈಸೇಶನ್ ವೊಂದನ್ನು ಆರಂಭಿಸಿದ ಸ್ಲಾಟ್ ಈ ಮೂಲಕ ಸಮುದ್ರ ಶುದ್ಧೀಕರಿಸುವ ಮೊದಲ ಹೆಜ್ಜೆ ಇಟ್ಟರು. ಹಲವು ಅಭಿಯಾನಗಳ ಮೂಲಕ 2.2 ಬಿಲಿಯನ್ ದೇಣಿಗೆ ಸಂಗ್ರಹಿಸಿದ ಸಂಸ್ಥೆ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡ, ಸಮುದ್ರದಲ್ಲಿ ಪ್ಲಾಸ್ಟಿಕ್ ಗಳನ್ನಷ್ಟೇ ಹೆಕ್ಕಿ ದೈತ್ಯ ಪೈಪಿನ ಮೂಲಕ ತ್ಯಾಜ್ಯ ವಿಲೇವಾರಿ ತಾಣಕ್ಕೆ ಅಥವಾ ನಿರ್ದಿಷ್ಟ ಹಡಗಿಗೆ ತಂದು ಹಾಕುವಂತೆ ವ್ಯವಸ್ಥೆ ಕೈಗೊಂಡರು. ಪೆಸಿಫಿಕ್ ಓಶನ್ ನಲ್ಲಿ ಆರಂಭವಾದ ಈ ಕಾರ್ಯ ಯಶಸ್ವಿಯಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲ ಸುದ್ರಗಳನ್ನೂ ಇದೇ ರೀತಿ ಸ್ವಚ್ಛಗೊಳಿಸುವ ಇರಾದೆ ಸ್ಲಾಟ್ ಅವರದು!

ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!ಸ್ವಚ್ಛ ಭಾರತಕ್ಕೆ ನಿಜವಾದ ಅರ್ಥ ನೀಡಿದ ಜಮ್ಮು ಕಾಶ್ಮೀರದ ಅಜ್ಜಿ!

ಸ್ಲಾಟ್ ವೈಯಕ್ತಿಕ ಬದುಕು

ಸ್ಲಾಟ್ ಹುಟ್ಟಿದ್ದು 1994 ಜುಲೈ 27 ರಂದು ನೆದರ್ಲೆಂಡ್ ನ ಡೆಲ್ಟ್ಫ್ ಎಂಬಲ್ಲಿ. ಎರಡು ವರ್ಷ ವಯಸ್ಸಿನಲ್ಲೇ ಪ್ರಾಜೆಕ್ಟ್ ತಯಾರಿಸುವುದರಲ್ಲಿ ಆಸಕ್ತಿ ಹೊಂದಿದ್ದ ಸ್ಲಾಟ್ ಏರೋ ಸ್ಪೇಸ್ ಇಂಜಿನಿಯರಿಂಗ್ ಓದನ್ನು ಅರ್ಧಕ್ಕೆ ಬಿಟ್ಟರು. ಔಪಚಾರಿಕ ಶಿಕ್ಷಣದ ಬಗ್ಗೆ ಅಷ್ಟೇನೂ ನಂಬಿಕೆ ಇಲ್ಲದ ಸ್ಲಾಟ್ 2013 ರಲ್ಲಿ ತಮ್ಮದೇ ನಾನ್ ಪ್ರಾಫಿಟ್ ಆರ್ಗನೈಸೇಶನ್ ಆರಂಭಿಸಿ ಅದಕ್ಕೆ ಸಿಇಓ ಕೂಡ ಆದರು. 213 ವಾಟರ್ ರಾಕೆಟ್ ಗಳನ್ನೂ ಉಡಾಯಿಸಿ ಗಿನ್ನಿಸ್ ದಾಖಲೆ ಮಾಡಿರುವ ಹೆಗ್ಗಳಿಕೆಯೂ ಇವರದು.

ಕೇರಳ ಪ್ರವಾಹಕ್ಕೆ ಕಣ್ಣೀರಾಗಿ, ಮಾನವೀಯತೆ ಮೆರೆದ ಮುದ್ದು ಪುಟಾಣಿಕೇರಳ ಪ್ರವಾಹಕ್ಕೆ ಕಣ್ಣೀರಾಗಿ, ಮಾನವೀಯತೆ ಮೆರೆದ ಮುದ್ದು ಪುಟಾಣಿ

ವಿಶ್ವಸಂಸ್ಥೆ ಶ್ಲಾಘನೆ

ಸಮುದ್ರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚಿತ್ತಿರುವುದು ಬಹುದೊಡ್ಡ ಸವಾಲಾಗಿದೆ. ಸಮುದ್ರದಲ್ಲಿರುವ ಜೀವವೈವಿಧ್ಯಗಳು ಇದೇ ಕಾರಣಕ್ಕಅಗಿಯೇ ಅಳಿವಿನಂಚಿಗೆ ತೆರಳುವ ಸ್ಥಿತಿ ಬಂದಿದೆ. ಭೂಮಿಯ ಯಲ್ಲಿ ಅತೀ ಹೆಚ್ಚು ಪಾಲಿ ಪಡೆದಿರುವ ಸಮುದ್ರ ಮಾಲಿನ್ಯಕ್ಕೊಳಗಾದರೆ ಜಗತ್ತಿಗೆ ತೊಂದರೆ ತಪ್ಪಿದ್ದಲ್ಲ. ಆ ಕಾರಣದಿಂದಲೇ ಸ್ಲಾಟ್ ಹುಮ್ಮಸ್ಸು ಮತ್ತು ಅವರ ಯೋಚನೆಯನ್ನು ವಿಶ್ವಸಂಸ್ಥೆ ಸಹ ಶ್ಲಾಘಿಸಿದೆ.

ಈ ಯೋಜನೆಯ ದೋಷವೇನು?

ಸಮುದ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಯೋಚನೆ ಒಳ್ಳೆಯದೆ. ಆದರೆ ಈ ಯೋಜನೆಯಿಂದಾಗಿ ಸಮುದ್ರದಲ್ಲಿರುವ ಸಣ್ಣ ಪುಟ್ಟ ಮೀನುಗಳ ಮೇಲೆ ವ್ಯತಿರಿಕ್ತಪರಿಣಾಮವಾಗಬಹುದು ಎನ್ನುತ್ತಾರೆ ಕೆಲ ತಜ್ಞರು. ಜೊತೆಗೆ ಇದು ಬಹಳ ದುಬಾರಿ ಕಾರ್ಯ. 'ಯಾವುದೇ ಕೆಲಸಕ್ಕೆ ಕೈಹಾಕಿದರೂ ಧನಾತ್ಮ ಮತ್ತು ಋಣಾತ್ಮಕ ಪರಿಣಾಮ ಎರಡೂ ಇದ್ದೇ ಇರುತ್ತದೆ. ಸಣ್ಣ ಪುಟ್ಟ ದೋಷಗಳಿರಬಹುದು. ಆದರೆ ಅಂತಿಮ ಫಲಿತಾಂಶ ಮಾತ್ರ ಸಮುದ್ರವನ್ನು ಶುದ್ಧಗೊಳಿಸುವುದ ಮತ್ತು ಸಮುದ್ರ ಜೀವಿಗಳಿಗೆ ಸ್ವಚ್ಛ ಬದುಕನ್ನು ನೀಡುವುದೇ ಆಗಿದೆ' ಎನ್ನುತ್ತಾರೆ ಸ್ಲಾಟ್.

ಗಂಗಾ ಶುದ್ಧೀಕರಣಕ್ಕೆ ಸ್ಫೂರ್ತಿಯಾಗಲಿ

ಗಂಗಾ ಶುದ್ಧೀಕರಣಕ್ಕೆ ಸ್ಫೂರ್ತಿಯಾಗಲಿ

ನಾವಿಲ್ಲಿಲ ದೇವನದಿ ಗಂಗೆ ಮಾಲಿನ್ಯಕ್ಕೊಳಗಾಗಿ, ಆಕೆಯ ಒಡಲಲ್ಲಿ ಪ್ಲಾಸ್ಟಿಕ್, ಕಸಕಡ್ಡಿ, ಶವ ಎಲ್ಲವೂ ಬೆರೆತು ಗಬ್ಬೇಳುತ್ತಿದ್ದರೂ ಅದರ ಸ್ವಚ್ಛತೆಯಲ್ಲೂ ರಾಜಕೀಯ ಹುಡುಕುತ್ತಿದ್ದೇವೆ. ಆದರೆ ಈತ ಅಗಾಧ ಸಮುದ್ರ ಸ್ವಚ್ಛಗೊಳಿಸಲು ತನ್ನ ಬದುಕು ಮುಡಿಪಾಗಿಟ್ಟಿದ್ದಾನೆ. ಇಂಥವರ ನಿಸ್ವಾರ್ಥ ಬದುಕು 'ನಮಾಮಿ ಗಂಗಾ ಅಭಿಯಾನ'ಕ್ಕೆ ಮತ್ತಷ್ಟು ಸ್ಫೂರ್ತಿ ನೀಡಲಿ.

English summary
Boyan Slat a Dutch inventor, entrepreneur started 'The Ocean Cleanup' to clean ocean and make it plastic free. Here is his unusual and motivational story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X