ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇವನವ್ನ' ಎಂದಿದ್ದರೆ 'ಇವ ನಮ್ಮವ' ಎನ್ನುತ್ತಿದ್ದರು!

By Prasad
|
Google Oneindia Kannada News

"ಶ್ರೀದೇವಿ ಪಿಚ್ಚರ್ ನೋಡಾಕ ಹೋಗೋಣ ಬಾರಲೇ ನಿಮ್ಮೌನ, ಏನ್ ಕೆಟ್ ಆ್ಯಕ್ಟಿಂಗ್ ಮಾಡ್ಯಾಳಲೇ ಅಕಿನೌನ..." ಹೀಗೆ ಉತ್ತರ ಕರ್ನಾಟಕದಲ್ಲಿ ಯಾರಾದರೂ ಮಾತನಾಡುವುದನ್ನು ಕೇಳಿದರೆ, ಇದರಲ್ಲಿ ಯಾವುದೇ ಅನರ್ಥ ಹುಡುಕದೆ ಜಾಸ್ತಿ ತಲೆಕೆಡಿಸಿಕೊಳ್ಳಬಾರದಾಗಿ ಸವಿನಯ ವಿನಂತಿ.

ಉತ್ತರ ಕರ್ನಾಟಕದ ಮಂದ್ರಿ ಅಂದ್ರೇನೇ ಹೀಗೆ. ನೇರಾನೇರ ಮಾತು, ಬೈಗುಳಗಳಂತೂ ಹಾಸುಹೊಕ್ಕು, ಆಡಲಿಕ್ಕೂ ಚೆಂದ, ಕೇಳಲಿಕ್ಕೆ ಇನ್ನೂ ಚೆಂದ. ಇಂಥ ಮಾತುಗಳನ್ನು ಯಾರೂ ಅಲ್ಲಿ ಬೈಗುಳ ಅಂತ ತಿಳಿದುಕೊಳ್ಳುವುದೇ ಇಲ್ಲ. ಏಕೆಂದರೆ, ಇದು ಬೈಗುಳವೇ ಅಲ್ಲ, ಇದು ಸಹಜ ಸುಂದರ ಭಾಷಾ ಶೈಲಿ.

ರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನ

ಉರ್ದು ಮಾತಾಡುವವರಲ್ಲಿ ಇನ್ನೂ ತರಹೇವಾರಿ ಬೈಗುಳಗಳಿವೆ. ಅಂಥವನ್ನು ಅವರವರೇ ಆಡಿಕೊಂಡರೆ ಚೆನ್ನ. ಬೇಕಾದವರು ಕೇಳಿ ಆನಂದಿಸಬಹುದು, ಬೇಡವಾದವರು ಕಿವಿಮುಚ್ಚಿಕೊಂಡು ತಣ್ಣಗೆ ಕುಳಿತುಕೊಳ್ಳಬಹುದು. ಮಾತು ಮಾತಲ್ಲಿ ಬೈಗುಳಗಳು ಇರುತ್ತವಂತೆಯೂ ಅಲ್ಲ. ಬೈಗುಳಗಳು ಸಾಂದರ್ಭಿಕವಾಗಿರುತ್ತವೆ ಅಷ್ಟೆ.

The beauty of Kannada in North Karnataka

ಉತ್ತರ ಕರ್ನಾಟಕದಲ್ಲಿ ಬಳಸಲಾಗುವ ವೈವಿಧ್ಯಮಯ ಬೈಗುಳಗಳ ಬಗ್ಗೆ ರಸವತ್ತಾದ ಕಥೆಗಳನ್ನು ಕೇಳಬೇಕೆಂದರೆ ಗಂಗಾವತಿ ಪ್ರಾಣೇಶ್ ಅವರ ಮಾತುಗಳನ್ನು ಕೇಳಬೇಕು. ಬೈಗುಳಗಳನ್ನು ಆಧರಿಸಿದ ಅವರ ಮಾತುಗಳನ್ನು ಆಲಿಸಿ, ಕೇಳಿದವರು ಬಿದ್ದುಬಿದ್ದು ನಗುತ್ತಾರೆಯೇ ಹೊರತು, ಯಾರೂ ಮುಖ ಗಂಟು ಹಾಕಿಕೊಳ್ಳುವುದಿಲ್ಲ.

ಹುತ್ಸೊಳೆಗಮ, ಕತ್ಸೊಳೆಮಗ, ಬದ್ಮಾಸ್ಸೊಳೆಮಗ... ಮುಂತಾದ ಬಗೆಯ 'ಹೊಗಳಿಕೆ'ಯ ಮಾತುಗಳು ಅಲ್ಲಿನ ಹಳ್ಳಿಯ ಮಾಸ್ತರುಗಳಿಂದಲೇ ಪುಂಖಾನುಪುಂಖವಾಗಿ ಬರುತ್ತಿರುತ್ತವೆ. ವಿದ್ಯಾರ್ಥಿಗಳು ಮುಂದು ದೊಡ್ಡವರಾಗಿ ಮಾಸ್ತರು ಹಾಕಿಕೊಟ್ಟ ದಾರಿಯನ್ನೇ ಶಿರಸಾವಹಿಸಿ ಪಾಲಿಸುತ್ತಾರೆ!

ಬೈಗುಳಗಳ ಬಗ್ಗೆ ಇಷ್ಟೇಕೆ ಪ್ರಸ್ತಾಪವೆಂದರೆ, ರಾಹುಲ್ ಗಾಂಧಿಯವರು ಇತ್ತೀಚೆಗೆ ಅಥಣಿಯಲ್ಲಿ ಭಾಷಣ ಮಾಡುವಾಗ, ಆಡಿದ ಬಸವಣ್ಣನವರ ವಚನ, ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿ, ಅದನ್ನು ವಿಚಿತ್ರ ವಿಭಿನ್ನವಾಗಿ ರೂಪಕೊಡುತ್ತಾ ವ್ಯಾಖ್ಯಾನಿಸುತ್ತಾ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಈ ಮೀಮ್ಸ್ ಕೂಡ ಒಂದು.

ಪ್ರಾಣೇಶ್ ಅವರೇ ಹೇಳುವ ಹಾಗೆ, ಇವನರ್ವ, ಇವನರ್ವ, ಇವನರ್ವ ಎನ್ನುವ ಬದಲು, ಇವನವ್ನ, ಇವನವ್ನ ಎಂದಿದ್ದರೆ, ಉತ್ತರ ಕರ್ನಾಟಕದ ಜನರೇ 'ಹೇಯ್, ಇವ ನಮ್ಮವ ಇವ ನಮ್ಮವ' ಎಂದು ಅಪ್ಪಿಕೊಂಡು ಮುದ್ದಾಡುತ್ತಿದ್ದರು. ಪ್ರಾಣೇಶ್ ಅವರ ಮುಂದಿನ ಹಾಸ್ಯ ಪ್ರಸಂಗದಲ್ಲಿ ಇದು ಪ್ರಸ್ತಾಪವಾದರೂ ಅಚ್ಚರಿಯಿಲ್ಲ.

ಅಲ್ಲದೆ, ನಮ್ಮ ಕರ್ನಾಟಕದಲ್ಲಿನ ಕನ್ನಡದ ಸೊಗಸೇ ಅಂತಹುದು. ಉತ್ತರ ಕರ್ನಾಟಕದಲ್ಲಿಯೂ ವಿಜಯಪುರ, ಕಲಬುರಗಿ, ಬೀದರ, ರಾಯಚೂರು ಕಡೆ ಹೋದರೆ ಧಾರವಾಡದಂಥ ಕನ್ನಡ ಮಾತುಗಳಿಗಿಂತ ವಿಭಿನ್ನವಾಗಿರುತ್ತದೆ. ಹಾಗೆಯೆ, ಮಂಡ್ಯದ ಭಾಷೆ ಪಕ್ಕದ ಮೈಸೂರಿನ ಕನ್ನಡಕ್ಕಿಂತ ಸ್ವಾರಸ್ಯಕರವಾಗಿರುತ್ತದೆ. ಇನ್ನು ಮಂಗಳೂರು, ಶಿವಮೊಗ್ಗದ ಕಡೆಯ ಕನ್ನಡವೂ ತನ್ನದೇ ಆದ ಸೊಗಡನ್ನು ತುಂಬಿಕೊಂಡಿದೆ.

(ಇಲ್ಲಿ ಬಸವಣ್ಣನವರನ್ನು ಅಥವಾ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡುವ ದೃಷ್ಟಿಯಿಂದ ಈ ಮೀಮ್ಸ್ ಅನ್ನು ಸೃಷ್ಟಿಸಿಲ್ಲ. ಇದನ್ನು ಕೇವಲ ಮನರಂಜನಾತ್ಮಕವಾಗಿ ಮಾತ್ರ ತೆಗೆದುಕೊಳ್ಳಬೇಕಾಗಿ ವಿನಂತಿ. ಅಂದ ಹಾಗೆ, ಈ ಮೀಮ್ಸ್ ಗಳು ಸೃಷ್ಟಿಯಾಗುವುದೇ ಬಿಗಿಯಾದ ಮುಖವನ್ನು ತಿಳಿಗೊಳಿಸಲು.)

English summary
While speaking to a huge gather in Athani, AICC president Rahul Gandhi had quoted Basavanna's Vachana. But, while hearing it, it had conveyed some other meaning. Many memes, trolls are being created on social media. Here is one of them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X