ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಥೆಗಾರ ಶಶಿ ತರೀಕೆರೆಗೆ ಛಂದ ಪುಸ್ತಕ ಬಹುಮಾನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 11: ಕನ್ನಡ ಸಾಹಿತ್ಯದಲ್ಲಿ ಕಥೆಗಳಿಗಾಗಿ ನೀಡುವ ಪ್ರತಿಷ್ಠಿತ ಛಂದ ಪುಸ್ತಕದ ಬಹುಮಾನದ 2019ನೇ ಸಾಲಿನ ಗೌರವ ಕಥೆಗಾರ ಶಶಿ ತರೀಕೆರೆ ಅವರಿಗೆ ಒಲಿದಿದೆ. ಚಿಕ್ಕಮಗಳೂರಿನ ತರೀಕೆರೆಯವರಾದ ಶಶಿ ಅವರ ಕಥಾಸಂಕಲನದ ಹಸ್ತಪ್ರತಿಗೆ ಛಂದ ಬಹುಮಾನ ದೊರೆತಿದೆ ಎಂದು ಛಂದ ಪುಸ್ತಕದ ವಸುಧೇಂದ್ರ ಅವರು ತಿಳಿಸಿದ್ದಾರೆ.

ಪ್ರಸ್ತುತ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿರುವ ಶಶಿ ತರೀಕೆರೆ ಅವರು ಕವಿತೆ, ಕಥೆಯಂತಹ ಸಾಹಿತ್ಯ ಪ್ರಕಾರಗಳಲ್ಲದೆ ಕಿರುಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಹಾಸ್ಯ ಲೇಖನ: ಕ್ವಾಪ ಮಾಡ್ಕೊಂಡಿದೆ ಕೂದ್ಲು ತಲೆಮ್ಯಾಲೆ!ಹಾಸ್ಯ ಲೇಖನ: ಕ್ವಾಪ ಮಾಡ್ಕೊಂಡಿದೆ ಕೂದ್ಲು ತಲೆಮ್ಯಾಲೆ!

ಹಿರಿಯ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರು ತೀರ್ಪುಗಾರರಾಗಿದ್ದರು. ''ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿಗೆ ಅಂತಿಮವಾಗಿ ಶ್ರೀ ಶಶಿ ತರೀಕೆರೆಯವರನ್ನು ಆಯ್ಕೆ ಮಾಡಿರುವೆ.

Story Writer Shashi Tarikere Won Chanda Book Prize 2019

ಶಶಿ ತಮ್ಮ ಕತೆಗಳ ಮೂಲಕ ತೆರೆದಿಟ್ಟಿರುವ ಪ್ರಪಂಚ ಕನ್ನಡದ ಸಣ್ಣಕತೆಗಳ ಓದುಗರಿಗೆ ಹೆಚ್ಚು ಬಳಕೆಯಿಲ್ಲದ್ದು. ಕಾಮ ಕ್ರೋಧ ಲೋಭೇತ್ಯಾದಿಗಳನ್ನು ಅರಿಷಡ್ವರ್ಗ ಎನ್ನುತ್ತೇವೆ. ವಾಸ್ತವವಾಗಿ ಇವು ಅರಿಗಳಲ್ಲ. ಮಿತ್ರಷಡ್ವರ್ಗಗಳೆಂದು ನಾನು ಭಾವಿಸುವೆ. ಆಸೆ, ನಿರಾಸೆ, ಕೋಪ, ದುಗುಡ, ಸಡಗರಗಳಿಲ್ಲದ ಬದುಕನ್ನು ಯಾಕಾದರು ಬದುಕಬೇಕು? ಆಗ ನಾವೆಲ್ಲರೂ ಜಗದ್ಗುರುಗಳೇ ಆಗಿಬಿಡುತ್ತಿದ್ದೆವು. ಜಗತ್ತು ತಾನೇ ಎಷ್ಟು ಜಗದ್ಗುರುಗಳನ್ನು ಧರಿಸಬಲ್ಲುದು. ಈ ಮಿತ್ರ ಷಡ್ವರ್ಗಗಳ ಪರಿಣಾಮವನ್ನು ಕುರಿತೇ ಜಗತ್ತಿನ ಮೇಲಿರುವ ನಾವಷ್ಟೂ ಬರಹಗಾರರು ಬರೆಯುತ್ತಿರುವುದು. ಆದರೆ ನಾವು ಬಹುತೇಕರು ಹೀಗೆ ಬರೆಯುವಾಗ ಮಧ್ಯಮವರ್ಗದ ಮನೆ ಮನಗಳೊಳಗೇ ಸುತ್ತು ಹೊಡೆಯುತ್ತೇವೆ. ಶಶಿ ಈ ಸುತ್ತಿನಿಂದ ಆಚೆ ಬಂದಿದ್ದಾರೆ. ಅವರ ಕತೆಗಳು ಈ ಬಹುಮಾನಕ್ಕೆ ಅರ್ಹವಾಗಿವೆಯೆಂದು ನನ್ನ ಅನಿಸಿಕೆ.

ನರಸಿಂಗರಾಯನಿಗೆ ಆ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತುನರಸಿಂಗರಾಯನಿಗೆ ಆ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತು

ನನ್ನ ಮೇಲೆ "ಛಂದ" ಇಟ್ಟಿರುವ ನಂಬುಗೆಗೆ ಆಭಾರಿ'' ಎಂದು ಲಲಿತಾ ಸಿದ್ಧಬಸವಯ್ಯ ಅವರು ಅಭಿಪ್ರಾಯ ತಿಳಿಸಿದ್ದಾರೆ.

ಛಂದ ಪುಸ್ತಕವು ಈ ಪುಸ್ತಕವನ್ನು ಪ್ರಕಟಿಸಲಿದ್ದು, ಕಥೆಗಾರರು 30,000 ರೂ. ಬಹುಮಾನದ ಮೊತ್ತ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ಪಡೆಯಲಿದ್ದಾರೆ. ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.

ನರಸಿಂಗರಾಯನಿಗೆ ಮುನೆಕ್ಕ ಹೇಳಿದ ಕಥೆಯನ್ನು ಕೇಳಿದ ಮೇಲೆ ಏನಾಯಿತು?ನರಸಿಂಗರಾಯನಿಗೆ ಮುನೆಕ್ಕ ಹೇಳಿದ ಕಥೆಯನ್ನು ಕೇಳಿದ ಮೇಲೆ ಏನಾಯಿತು?

ಶಶಿ ತರೀಕೆರೆ ಅವರು 'ನೀಲಿ ಕನಸು' ಎಂಬ ಕಿರುಚಿತ್ರ ತಯಾರಿಸಿದ್ದರು. ಅವರ 'ಬಹುವಚನ' ಎಂಬ ಮತ್ತೊಂದು ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅವರ 'ಡುಮಿಂಗ','ಜಾದೂಗಾರನ ನಿದ್ದೆ', 'ಪ್ರಣಯ ರಾಜ ಲೇಡೀಸ್ ಟೈಲರ್', 'ಮಲಿನ', 'ಶುಗರ್ ಫ್ರೀ', 'ಜನರಲ್ ವಾರ್ಡ್', 'ಜಾಗರಣೆ', 'ನಕರಾ ಬಾಬು ಮತ್ತು ಸಂಗಡಿಗರು' ಮುಂತಾದವು ಅವರ ಜನಪ್ರಿಯ ಕಥೆಗಳಾಗಿವೆ.

ಛಂದ ಬಹುಮಾನದ ಅಂತಿಮ ಸುತ್ತಿನಲ್ಲಿ ಚೈತ್ರಿಕಾ ಹೆಗಡೆ ಕಂಚೀಮನೆ, ಪ್ರಜ್ಞಾ ಮತ್ತಿಹಳ್ಳಿ, ಪ್ರವೀಣ ಕುಮಾರ್, ಛಾಯಾ ಭಟ್ ಕೂಡ ಸ್ಪರ್ಧೆಯಲ್ಲಿದ್ದರು.

English summary
Kannada story writer Shashi Tarikere won Chanda Book prize of 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X