ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೆನ್ ಕಥೆ: ವಿಧೇಯತೆಯನ್ನು ತೋರಿಸಿದ ಗುರು

|
Google Oneindia Kannada News

ಝೆನ್ ಗುರು ಬನ್‌ಕೆಯಿ ಪ್ರವಚನಕ್ಕೆ ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಬೇರೆ ವಿಚಾರ ಪಂಥಗಳ ಜನರೂ ಬರುತ್ತಿದ್ದರು. ಬನ್‌ಕೆಯಿ ಸೂತ್ರಗಳನ್ನು ಹೇಳುತ್ತಿರಲಿಲ್ಲ ಅಥವಾ ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಕೊಡುತ್ತಿರಲಿಲ್ಲ. ಕೇಳುಗರ ಹೃದಯಕ್ಕೆ ನೇರವಾಗಿ ನಾಟುವಂತಹ ಮಾತುಗಾರಿಕೆ ಆತನದು.

ಒಂದು ಸಭೆಯಲ್ಲಿ ನಿಕಿರನ್ ಪಂಥದ ಗುರು ಒಬ್ಬ ಅಹಂಕಾರದಿಂದ ಬನ್‌ಕೆಯಿಯನ್ನು ಸಂವಾದಕ್ಕೆ ಆಹ್ವಾನಿಸಿದ. 'ಝೆನ್ ಗುರು. ಇಲ್ಲಿ ಕೇಳು. ನಿನ್ನ ಮೇಲೆ ಗೌರವ ಹೊಂದಿರುವವರು ನೀನು ಹೇಳಿದಂತೆ ಕೇಳಿಕೊಂಡು ನಿನಗೆ ವಿಧೇಯರಾಗಿ ಇರುತ್ತಾರೆ. ಆದರೆ ನನ್ನಂಥವನು ನಿನ್ನನ್ನು ಎಂದಿಗೂ ಗೌರವಿಸುವುದಿಲ್ಲ. ನನ್ನನ್ನು ವಿಧೇಯನನ್ನಾಗಿ ಮಾಡಿಕೊಳ್ಳುವುದು ನಿನಗೆ ಸಾಧ್ಯವೇ?' ಎಂದು ಸವಾಲು ಹಾಕಿದ.

ಝೆನ್ ಕಥೆ: ಜೀವನ ಸುಧಾರಿಸುವ ಬಗೆ!ಝೆನ್ ಕಥೆ: ಜೀವನ ಸುಧಾರಿಸುವ ಬಗೆ!

ಅದಕ್ಕೆ ಬನ್‌ಕೆಯಿ ತಾಳ್ಮೆಗೆಡಲಿಲ್ಲ. 'ಮೇಲೆ ಬಾ. ಬಂದು ನನ್ನ ಬಳಿ ನಿಂತುಕೋ. ನಿನಗೆ ತೋರಿಸಿಕೊಡುತ್ತೇನೆ' ಎಂದ.

Zen Story Master Bankei And Nichiren Priest Obedience

ಸಭಿಕರ ನಡುವೆ ಕುಳಿತಿದ್ದ ಆ ವ್ಯಕ್ತಿ ಬೀಗುತ್ತಾ ಎದ್ದು ವೇದಿಕೆಯತ್ತ ನಡೆದ. ಬನ್‌ಕೆಯಿ ನಸುನಕ್ಕು, 'ಹೀಗೆ, ಇನ್ನೂ ಸ್ವಲ್ಪ ನನ್ನ ಎಡಬದಿಗೆ ಬಾ' ಎಂದ. ಆತ ಹೇಳಿದಂತೆ ಎಡಕ್ಕೆ ಬಂದು ನಿಂತ.

'ಇದು ಸಾಲದು. ನೀನು ಬಲ ಭಾಗಕ್ಕೆ ಬಂದರೆ ನಮ್ಮಿಬ್ಬರ ನಡುವೆ ಸಂಭಾಷಣೆ ನಡೆಸಲು ಸಹಾಯವಾಗುತ್ತದೆ. ಇನ್ನೊಂದು ಹೆಜ್ಜೆ ಮುಂದಕ್ಕೆ, ಬಲಕ್ಕೆ'. ವ್ಯಕ್ತಿ ಹಾಗೆಯೇ ಹೆಜ್ಜೆ ಇರಿಸಿದ.

ಝೆನ್ ಕಥೆ: ಎರಡು ಪ್ರಶ್ನೆಗಳು ಮತ್ತು ಗುರು ಕೊಟ್ಟ ಉತ್ತರಝೆನ್ ಕಥೆ: ಎರಡು ಪ್ರಶ್ನೆಗಳು ಮತ್ತು ಗುರು ಕೊಟ್ಟ ಉತ್ತರ

'ಹಾಂ ಈಗ ಸರಿಯಾಯ್ತು ನೋಡು. ಈಗ ನೀನು ನಾನು ಹೇಳಿದಂತೆಯೇ ವಿಧೇಯತೆಯಿಂದ ನಡೆದುಕೊಂಡಿದ್ದೀಯ. ನೀನೊಬ್ಬ ಸಂಭಾವಿತ. ಇನ್ನು ಕುಳಿತು ಪ್ರವಚನ ಕೇಳಿಸಿಕೋ' ಎಂದ ಬನ್‌ಕೆಯಿ.(ಸಂಗ್ರಹ)

English summary
Zen Story of the day: Once a preist of Nichiren sects challenged Master Bankei to make me obey to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X